ವಿದ್ರೋಹ
ನಿನ್ನ ಪ್ರೀತಿಯ ಕೋಟೆಯೊಳಗೆ
ಸುರಕ್ಷಿತ ಅಂದುಕೊಂಡಿದ್ದೆ,
ಒಳಗೇ ಹೆಡೆಯೆತ್ತಿದ ನಿನ್ನ
ವಿದ್ರೋಹದ ಅರಿವಾಗುವ ತನಕ !
ಅಂತಃಸಾಕ್ಷಿ
ನಿನ್ನ ನಂಬಿಕೆದ್ರೋಹಕ್ಕೆ
ಶಿಕ್ಷೆ ಕೊಡಿಸೋಣ ಅಂದುಕೊಂಡರೆ
ಸಾಕ್ಷಿ ತರಲೆಲ್ಲಿಂದ ಹೇಳು?
ನಿನ್ನ ಅಂತಃಸಾಕ್ಷಿಗಿಂತ
ಅನ್ಯ ಸಾಕ್ಷಿಯು ಬೇಕೆ
ಏಕಾಂತದಲೊಮ್ಮೆ ಕಿವಿಗೊಟ್ಟು ಕೇಳು
ಹನಿದುಂಬಿ
ಎಲ್ಲೋ ಸುರಿದ ಮಳೆಗೆ ನದಿ
ಕೆಂಪಾಗಿ ಮೈತುಂಬಿಕೊಂಡಂತೆ
ಎಲ್ಲೋ ಇರುವ ನಿನ್ನ ನೆನಪಾಗಿ
ನನ್ನ ಕಣ್ತುಂಬಿ ಬಂತು
ಆದರೂ...
ಎತ್ತಲಾರೆ ನಿನಗಾಗಿ ಹತ್ತಾರು ಜನ್ಮ
ಬೆನ್ನಟ್ಟಲಾರೆ ಹಿಂಬಾಲಿಸಿ ಹಗಲಿರುಳು ನಿನ್ನ
ಆದರೇನು ಮಾಡಲಿ ಮರೆಯಲಾರೆ ಚಿನ್ನ
ನೆನಪಾಗುವೆ ಮತ್ತೊಮ್ಮೆ ಕೊನೆಯುಸಿರೆಳೆಯೋ ಮುನ್ನ
( ಕೊನೆಯ 2 ಕವನಗಳನ್ನು ನನ್ನ ಕವನ ಸಂಕಲನ ‘ಅಂತರಂಗದ ಆಪ್ತಸ್ವರ’ ದಿಂದ ಹೆಕ್ಕಿದ್ದು..)

ಚೆಲುವಾದ ಕವಿತೆಗಳು