ನಿನ್ನೆ(29 ಸೆಪ್ಟಂಬರ್, 2008) ವಿಜಯ ಕರ್ನಾಟಕದ ಸಿಂಪ್ಲಿಸಿಟಿ ಪುಟದಲ್ಲಿ ಬಂದ ನನ್ನ ಹನಿಗಳು…..
* * * * * * * * * * * * * * * * * *
ಮರೆತು ಕೂಡ ನಿನ್ನ ನೆನಪಾಗದಿರಲಿ ಅಂತ
ಮೊನ್ನೆ ದೇವರನ್ನು ಬೇಡುತ್ತಿದ್ದೆ
ಅಷ್ಟರಲ್ಲಿ ನಿನ್ನ ನೆನಪಾಯ್ತು ನೋಡು
ಏನು ಬೇಡುತ್ತಿದ್ದೆ ಅನ್ನೋದನ್ನೇ ಮರೆತುಬಿಟ್ಟಿದ್ದೆ
* * * * * * * * * * * * * * * * * *
ಮೊನ್ನೆ ಸಿಕ್ಕಾಗ ನೀ
ಗುರುತೇ ಇಲ್ಲದವಳಂತೆ
ಮುಖ ತಿರುಗಿಸಿ ಹೋದೆಯಲ್ಲ
ನಿಜ ಹೇಳಬೇಕೆಂದ್ರೆ
ನನಗೂ ನಿನ್ನ ಈ ಮುಖದ
ಪರಿಚಯವೇ ಇರಲಿಲ್ಲ
* * * * * * * * * * * * * * * * * *
ನೀ ತೊರೆದು ಹೋದೆ ಅಂತ
ನನಗೆ ಬೇಜಾರೇನಿಲ್ಲ
ಆದರೆ ಹೋಗುವ ಮುನ್ನ
ನಿನ್ನ ಮರೆಯೋದು
ಹೇಗೆ ಅಂತಾದ್ರೂ ಕಲಿಸಬಹುದಿತ್ತಲ್ಲ
* * * * * * * * * * * * * * * * * *
ಅಳುವಿನ ಹಿಂದಿರುವ
ನಗೆಯ ಹುಡುಕ ಹೊರಟವನ
ನಗೆಯ ಹಿಂದಿದ್ದ ಅಳು
ಯಾರಿಗೂ ಕಾಣಲೇ ಇಲ್ಲ
* * * * * * * * * * * * * * * * * *
ಹೆಣ್ಣಿನಲ್ಲಿ ಇರುತ್ತಂತೆ
ಸಹನೆ ಪ್ರೀತಿ ಕರುಣೆ
ಜೊತೆಗೆ ಮೋಸ ಕೂಡಾ ಇರುತ್ತೇಂತ
ತಿಳಿಸಿದ್ದು ನೀನೇ ಕಣೆ
* * * * * * * * * * * * * * * * * *

ಇವ್ರೆಲ್ಲಾ ಏನ್ ಹೇಳ್ತಾರೆ ಕೇಳಿ...