ಎಕ್ಸಾಮ್ ಡೇಟು ಬಂದ ಮೇಲೆ… ಓದ್ಬೇಕಂತ ಮಾಡಿದೆ,
ಫ್ರೆಂಡ್ಸ್‌ನೆಲ್ಲಾ ಕಾಡಿ ಬೇಡಿ… ನೋಟ್ಸು ಕಾಪಿ ಮಾಡಿದೆ,
ಓದುವುದು ತುಂಬಾ ಉಳಿದು ಹೋಗಿದೆ…
ಓದಲಿ ಹೇಗೆ ತಿಳಿಯದಾಗಿದೆ…
ಮ್ಯಾತ್ಸು ಅಂದ್ರೆ ಕಷ್ಟ ಕಷ್ಟ… ಇರಲಿ ನಂತರ
ಕೆಮಿಸ್ಟ್ರಿ ಸೂತ್ರ ಓದಲು… ಭಯವು ಒಂಥರ
ನಿನ್ನೆ ಓದಲಿಲ್ಲ ಇಂದೂ… ಬಾಟ್ನಿ ಬೇಸರ
ಕಣ್ಣು ಭಾರಿ ಎಳೀತಿದೆ… ನಿದ್ದೆ ಮಂಪರಾ?
ಮನಸಲ್ಲಿ ಓದಿದ್ ಎಲ್ಲಿ ಉಳಿದಿದೆ?
ನೆನಪಿಡಲಿ ಹೇಗೆ ತಿಳಿಯದಾಗಿದೆ
ಎಕ್ಸಾಮ್ ಡೇಟು ಬಂದ ಮೇಲೆ…||
ಕಣ್ಣು ತೆರೆದು ರಾತ್ರಿಡಿ… ಎದ್ದು ಓದೋಣ
ಹಠವ ಮಾಡಿ ಕುಳಿತೆನು… ಬಿಡದೆ ಮೂರ್ದಿನ
ನಿದ್ದೆಯು ಮಂಪರಲ್ಲಿಯೇ… ಎಕ್ಸಾಮಿಗೆ ಬಂದ್ನಣ್ಣ
ಕೇಳು ಗೆಳೆಯನೇ ನೀ… ನನ್ನ ಅಧ್ವಾನ
ಹಾಲ್‌ಟಿಕೇಟು ಎಲ್ಲೋ ಕಳೆದು ಹೋಗಿದೆ…
ಹುಡುಕಲಿ ಹೇಗೆ ತಿಳಿಯದಾಗಿದೆ…
ಎಕ್ಸಾಮ್ ಡೇಟು ಬಂದ ಮೇಲೆ…||

ಇವ್ರೆಲ್ಲಾ ಏನ್ ಹೇಳ್ತಾರೆ ಕೇಳಿ...