ಹಾಗೆ(ಯ್ಕು) ಸುಮ್ಮನೆ…

9 03 2009

ಇವತ್ತಿನ (ಮಾರ್ಚ್ 9, 2009) ವಿಜಯ ಕರ್ನಾಟಕದ ಸಿಂಪ್ಲಿಸಿಟಿ ಪುಟದಲ್ಲಿ ನನ್ನ ಕೆಲವು ಹಾಯ್ಕುಗಳು ಬಂದಿವೆ…ನೀವು ನೋಡಿಲ್ಲವಾದ್ರೆ ಇಲ್ಲಿವೆ ನೋಡಿ

ನಿನ್ನ ನೆನಪಿಂದ ಹೊಳೆಯುತ್ತಿದ್ದ
ಕಣ್ಣುಗಳೇ ಈಗ
ನಿನ್ನ ನೆನಪಿಂದಲೇ
ಹೊಳೆಯಾಗುತ್ತಿವೆ
—————————-
ನನ್ನ ತೋಳ ತೆಕ್ಕೆಯೊಳಗೆ
ಹುದುಗಿ ಕುಳಿತಿದ್ದ ಹುಡುಗಿ,
ಯಾವ ತೋಳದ ತೆಕ್ಕೆಯೊಳಗೆ
ಕುಳಿತಿರುವಳೋ ಈಗ ಅಡಗಿ
—————————-
ಅವಳ ಕುರಿತು ಕಟ್ಟಿದ
ಕವನ ಶಾಯರಿಗಳಿಗೆ ಲೆಕ್ಕವೇ ಇಲ್ಲ
ಬೇಸರದ ಸಂಗತಿಯೆಂದರೆ
ಅವಳಿಗೂ ಇದ್ಯಾವುದೂ ಲೆಕ್ಕಕ್ಕೇ ಇಲ್ಲ
——————————-
ಅಂದು ಮಳೆಯಾಗಿ
ಭೋರ್ಗರೆಯದೇ ಹೋದ ತಪ್ಪಿಗೆ,
ಇಂದು ಹನಿಹನಿಯಾಗಿ ಸುರಿದು
ಭಾವಗಳ ತಪ್ಪೊಪ್ಪಿಗೆ
——————————
ನನ್ನ ಹನಿಗಳಿಗೇ
ಯಾವ ಹೆಸರಿನ ಹಂಗೂ ಇಲ್ಲ
ಕಣ್ಣ ಹನಿಗಳಿಗೇಕೆ
ನಿನ್ನ ನೆನಪಿನ ಹಂಗು
——————————
ಮದುವೆ ದಲ್ಲಾಳಿಗಳ ಬಳಿಯಿರೋ
ಜಾತಕ ಫೋಟೋಗಳ ಲಿಸ್ಟಲಿ,
ಸಾಫ್ಟ್ವೇರ್ ತಂತ್ರಜ್ಞರೀಗ
ಕುಳಿತಿದ್ದಾರೆ ಲಾಸ್ಟಲಿ


Actions

Information

10 responses

10 03 2009
ಪ್ರದೀಪ್

ತುಂಬಾ ಚೆನ್ನಾಗಿವೆ ಸಾರ್! :-)

10 03 2009
pavankir

Gud Vijay Raj..

Tumba dinavaagittu..nimma blog ge comment madade…idarartha odutta iralilla antha alla…

idannella naanu ninne paper nalli odidde..matte ellarigoo namma vijayaraj baredaddu antha torsidde…really its gud…thanks for hanigavana’s

11 03 2009
ಗುರುಪ್ರಸಾದ್ ಸಿ. ಎಂ

ಹಾಯ್ಕುಗಳ ಬಗ್ಗೆ ಮಾಹಿತಿ ಕೊಡಿ

11 03 2009
ರಂಜಿತ್

ಎಲ್ಲವೂ ಬಹಳ ಚೆನ್ನಾಗಿದೆ ಸರ್.

13 03 2009
Nandan

thumbaane channagide sir.

15 03 2009
Rajesh Manjunath

ವಿಜಯ್ ಸರ್,
ಸಕತ್ತಾಗಿವೆ ಹಾಯ್ಕುಗಳು…
ಕೊನೆಯ ನಾಲ್ಕು ಸಾಲಂತೂ ನಮ್ಮ ಇಂದಿನ ಅವಸ್ಥೆಗೆ ಕನ್ನಡಿ ಹಿಡಿದಂತಿವೆ… :)
ನಿಮ್ಮ ಬ್ಲಾಗಿನ ಕೊಂಡಿ ಸಾಗಿಸುತ್ತಿದ್ದೇನೆ :D

21 03 2009
ಕಂಡಕ್ಟರ್ ಕಟ್ಟಿಮನಿ 45E

ಎಲ್ಲಾ ಹನಿಗಳು ಮೆಚ್ಚುಗೆಯನ್ನು ಪಡೆದರು.೫ನೇ ಹನಿಮಾತ್ರ ಮನಕಲುಕಿತು….ಪ್ಲಿಸ್ ಕಂಟಿನಿವ್..

24 03 2009
ರಂಜಿತ್

ಬ್ಲಾಗಿನ ಹುಟ್ಟುಹಬ್ಬದ ಶುಭಾಶಯಗಳು..

happy blogging!

2 04 2009
manjunath

ಒಳ್ಳೆ ಹನಿಗಳು ….ಇನು ಹೆಚ್ಹಿನ ಹನಿಗಳು ತಮ್ಮಿಂದ ಹುದುರಲಿ …:)

12 08 2009
Balaji

ಯಾಕೆ ಸ್ವಾಮೀ ? ವಿರಹ ಹಾಗೂ ವಿಷಾದ ಗಳೇ ತುಂಬಿವೆ ಇಲ್ಲಿ ??? ಆದರೂ ಚೆನ್ನಾಗಿವೆ.

ಬಾಲಾಜಿ

Leave a comment