ಇವತ್ತಿನ ವಿಜಯ ಕರ್ನಾಟಕದಲ್ಲಿ ಸಿಂಪ್ಲಿಸಿಟಿ ಪುಟದಲ್ಲಿ ಬಂದ ನನ್ನ ನಾಲ್ಕು ಹನಿಗಳು…
ಜೊತೆಯಲ್ಲಿ ಮತ್ತೊಂದು ಬೋನಸ್ (?) ಹನಿ…
ಓದಿ ಮೆಚ್ಚಿಕೊಂಡ್ರೆ ಮತ್ತಷ್ಟು ಬರೆದೇನು… ಹುಷಾರ್!! ಈಗ್ಲೇ ಎಚ್ಚರಿಸ್ತಾ ಇದಿನಿ..
ಕಡಲಿನ ತಲ್ಲಣಕೆ ಸಾಕ್ಷಿ
ದಡಕ್ಕಪ್ಪಳಿಸುವ ತೆರೆಗಳು
ಒಡಲಿನ ತಲ್ಲಣಕೆ ಸಾಕ್ಷಿ
ಕೆನ್ನೆ ಮೇಲಿನ ಕಣ್ಣೀರ ಕರೆಗಳು
——————————-
ಕಾಡುವ ನೆನಪುಗಳ ಮರೆಯಲೆಂದು
ಕಾಡಿಗೆ ಹೋದರೂ
ಕಾಡುತಿವೆ ನೆನಪಾಗಿ ನಿನ್ನ
ಕಾಡಿಗೆ ಕಂಗಳು
——————————-
ನಡುರಾತ್ರಿಯಲೆದ್ದು ಹಟ ಮಾಡಿ
ಅಳುವ ಮಗುವಿನಂತೆ…
ದಿನ ರಾತ್ರಿ ರಚ್ಚೆ ಹಿಡಿದು ಕಾಡುತಿವೆ
ನಿನ್ನ ನೆನಪುಗಳ ಕಂತೆ
———————————
ನಿನ್ನ ನೆನಪು ಎದೆಯ ಕರೆಗಂಟೆಯ
ಅದುಮಿದಾಗ
ಕವಿತೆಯಾಗಿ ಹೊರಬಂತು
ಅಂತರಂಗದನುರಾಗ
—————————————————
ಬಿಟ್ಟು ಹೋದವಳ ಬಿಟ್ಟಿರಲಾಗದಾಗ
ಬಿಟ್ಟೂ ಬಿಡದೆ ನೆನಪಾಗಿ ಬಿಟ್ಟವಳು…
ಬರಿ ನೆನಪೇ ಆಗಿ ಬಿಟ್ಟಳವಳು…
———————————-

ಆಹಾ ಎಲ್ಲವೂ ಚೆನ್ನಾಗಿವೆ!
Super Vijay….Olle ide ella !
Nice sir…
ಚೆನ್ನಾಗಿವೆ ಸಾರ್
bhagnapremi
Vijay Sir, all are superb, really I like it very much. That second one wahhhh……
wow!
Lovely kaNo!!
ಭಲಾರೆ…
ವಿ.ಕ ದಲ್ಲಿ ಓದಿದ್ದೆ, ಕಾಮೆಂಟ್ ಮಾಡಲು ಆಗಿರಲಿಲ್ಲ. ಎಲ್ಲವೂ ಚಂದ ಇದೆ.. ೪+೧…
ಸ್ನೇಹಪೂರ್ವಕ,
ಶಮ, ನಂದಿಬೆಟ್ಟ.