ನನ್ನ ಉಸಿರುಸಿರಲೂ
ನೀನಿರುವೆ ಅಂತೇನಿಲ್ಲ
ನಿಟ್ಟುಸಿರಲಿ ನೀನಿರೋದು
ನಿಂಗೇ ಗೊತ್ತಲ್ಲ…
———————————
ನೀನಿರುವೆ ಅಂತೇನಿಲ್ಲ
ನಿಟ್ಟುಸಿರಲಿ ನೀನಿರೋದು
ನಿಂಗೇ ಗೊತ್ತಲ್ಲ…
———————————
ಹುಟ್ಟಿ ಸಾಯೋ ನೂರಾರು ಸಾಲುಗಳ ಬಿಟ್ಟು ಬಿಡು,
ನಡುವಿನ ನಿಟ್ಟುಸಿರಿನಂತಹ ಮೌನಕ್ಕೆ ಕಿವಿಗೊಡು,
ಅಂತಾದರೂ ನಿನ್ನ ಮುಟ್ಟಿ ತಟ್ಟೀತು..
ಹಾಡಾಗದೆ ಎದೆಯೊಳಗುಳಿದ ಪುಟ್ಟ ಸಾಲು
————————————-
ನಡುವಿನ ನಿಟ್ಟುಸಿರಿನಂತಹ ಮೌನಕ್ಕೆ ಕಿವಿಗೊಡು,
ಅಂತಾದರೂ ನಿನ್ನ ಮುಟ್ಟಿ ತಟ್ಟೀತು..
ಹಾಡಾಗದೆ ಎದೆಯೊಳಗುಳಿದ ಪುಟ್ಟ ಸಾಲು
————————————-
ಪ್ರೀತಿಯ ಮುಗಿಲ ಸಾಲು ಕರಗಿ ಮಳೆಯಾಗಲೇ ಇಲ್ಲ..
ಪದಗಳ ಜೋಡಿಸಿ ಬರೆದ ಸಾಲು ಕವಿತೆಯಾಗಲೇ ಇಲ್ಲ..
ಮುಗಿಲು ಇನ್ನೆಲ್ಲೋ ಮಳೆಯಾಗಿರಬೇಕು..
ಕವಿತೆ ಕಣ್ಣಲ್ಲೇ ಹೊಳೆಯಾಗಿರಬೇಕು
ಪದಗಳ ಜೋಡಿಸಿ ಬರೆದ ಸಾಲು ಕವಿತೆಯಾಗಲೇ ಇಲ್ಲ..
ಮುಗಿಲು ಇನ್ನೆಲ್ಲೋ ಮಳೆಯಾಗಿರಬೇಕು..
ಕವಿತೆ ಕಣ್ಣಲ್ಲೇ ಹೊಳೆಯಾಗಿರಬೇಕು
————————————————
ನಿನ್ನ ನೆನಪೇ ಬರದ ಜಾಗಕ್ಕೆ
ಹೋಗೋಣವೆಂದು ಹೊರಟಿರುವೆ,
ಜೊತೆಗೆ ನೀನೂ ಬರ್ತೀಯಾ
ಕೇಳೋಕೆ ಬಂದಿರುವೆ !!!
————————————-
ಹೋಗೋಣವೆಂದು ಹೊರಟಿರುವೆ,
ಜೊತೆಗೆ ನೀನೂ ಬರ್ತೀಯಾ
ಕೇಳೋಕೆ ಬಂದಿರುವೆ !!!
————————————-
ಪ್ರೇಮ ರಾಗದ ಪಲುಕುಗಳು…
ಮಧುರ ಸಹಚರ್ಯದ ಮೆಲುಕುಗಳು
ಅಡಕವಾಗಿವೆ ಎದೆಯ ಮುದ್ರಿಕೆಯೊಳಗೆ
ಎಂದೂ ಮರೆಯದ ಹಾಡಿನ ಸಾಲುಗಳಂತೆ
————————————
ಮಧುರ ಸಹಚರ್ಯದ ಮೆಲುಕುಗಳು
ಅಡಕವಾಗಿವೆ ಎದೆಯ ಮುದ್ರಿಕೆಯೊಳಗೆ
ಎಂದೂ ಮರೆಯದ ಹಾಡಿನ ಸಾಲುಗಳಂತೆ
————————————
ಗುರುತಿಲ್ಲದೂರಿನಲಿ ಗುರಿಯಿಲ್ಲದಂತಲೆದು
ನಾ ಗುರುತಿಲ್ಲದಂತಾಗಿ ಹೋದೆ
ಗುರುತೇ ಇಲ್ಲದವಳಂತೆ ನೀ ಮುಖ ತಿರುವಿ ಹೋದೆ
ಎದೆಯಲಿ ಎಂದೂ ಮಾಯದ ಗುರುತೇ ನೀನಾದೆ
—————————————

nice.
Really heloke maathe illa, adbhutha adarallu 3rd and 6th pyara supreme
3rd one ishta aaytu.
ಕವಿತೆ ಕಣ್ಣಲ್ಲೇ ಹೊಳೆಯಾಗಿರಬೇಕು.. Just too gud!
5th one first 3 lines chennaagive.. koneya saalu yaako saath needtaa illa annistu
ತುಂಬಾ ಚೆನ್ನಾಗಿ ಬರೇತೀರ
-ಧರಿತ್ರಿ
Thumbaa dhanyavaada… nimma blog kooda nodide… thumbaa chennagive barahagaLu…
ಕೊನೆಯದು ಚೆನ್ನಾಗಿದೆ.
ಆದರೆ 3 ನೇದು ವಂಡರ್ ಫುಲ್!
“ಪ್ರೀತಿಯ ಮುಗಿಲ ಸಾಲು ಕರಗಿ ಮಳೆಯಾಗಲೇ ಇಲ್ಲ..
ಪದಗಳ ಜೋಡಿಸಿ ಬರೆದ ಸಾಲು ಕವಿತೆಯಾಗಲೇ ಇಲ್ಲ..
ಮುಗಿಲು ಇನ್ನೆಲ್ಲೋ ಮಳೆಯಾಗಿರಬೇಕು..
ಕವಿತೆ ಕಣ್ಣಲ್ಲೇ ಹೊಳೆಯಾಗಿರಬೇಕು”…..
“ಪ್ರೇಮ ರಾಗದ ಪಲುಕುಗಳು…
ಮಧುರ ಸಹಚರ್ಯದ ಮೆಲುಕುಗಳು
…………”
ಚೊಲೋ ಉಂಟು ಮಾರಾಯ್ರೇ!!!
wow.. just superb…
ನಿನ್ನ ನೆನಪೇ ಬರದ ಜಾಗಕ್ಕೆ
ಹೋಗೋಣವೆಂದು ಹೊರಟಿರುವೆ,
ಜೊತೆಗೆ ನೀನೂ ಬರ್ತೀಯಾ
ಕೇಳೋಕೆ ಬಂದಿರುವೆ !!! (i liked this very much.. )