ಅದೇ ಸಾರು, ಅದೇ ಪಲ್ಯ, ಅದೇ ಸಾಂಬಾರ್ ತರ ಹೋಯ್.. (ಹಳೆಪಾತ್ರೆ ಹಳೆ ಕಬ್ಣ ಧಾಟಿಯಲ್ಲಿ)

13 07 2009

(ಹಳೆಪಾತ್ರೆ ಹಳೆ ಕಬ್ಣ ಧಾಟಿಯಲ್ಲಿ ಓದಿ ಈ ಅಣಕ)

ಅದೇ ಸಾರು,  ಅದೇ ಪಲ್ಯ, ಅದೇ ಸಾಂಬಾರ್ ತರ ಹೋಯ್..
ಈ ಹೋಟ್ಲು ಈ ಕ್ಯಾಂಟೀನ್ ಬಲು ಬೇಜಾರ್ ಕಣಾ ಹೋಯ್…
 
ಹೆಲ್ತಿನ ಗೊಡವೆಯ ಬಿಡು..
ರುಚಿಯನ್ನು ಮರೆತು ಬಿಡು…
ಹೊಟ್ಟೆಯು ತುಂಬಿತು ಬಿಡು… ಸಾಕು
 
ಊಟಕೆ ಐವತ್ ಕೊಟ್ಟು…
 ತಿಂದ್ಮೇಲೆ ಹೊಟ್ಟೆ ಕೆಟ್ಟು… 
ಡಾಕ್ಟ್ರಿಗೆ ನೂರರ ನೋಟು… ಎಲ್ಲಾ ದುಡ್ ವೇಷ್ಟು 
 
ನೋಡು ಮುಂಗಾರು ಮಳೆ.. ಸುರಿಯುತಿಹ ವೇಳೆಯಲಿ..
ಹೋಟೆಲೂಟ ತಿಂದರೆ ಅತಿಸಾರ… ಭೇದಿ ಕಾಲರಾ
ಬೇಡುವೆನು ನಿನ್ನನ್ನ… ಮಾಡಿ ರುಚಿ ಅಡುಗೆನಾ
ತಂದಿರುವೆ ಊಟದ ಡಬ್ಬಿಯನು… ಮರೆತು ಬಿಡು ಹೋಟ್ಲನ್ನ…
ಒಲೆಯುರಿಸಿ ಅಡುಗೆ ಮನೆಯೊಳಗೆ… ಇನ್ನು ಮುಂದೆ ನಾ ಚಾ ಮಾಡುವೆನು
ದಿನಾ ಊಟ ಮನೆಯಿಂದ್ಲೆ ಕೊಡುವೆನು… ಕೊನೆಯವರೆಗೂ…
 
ಅದೇ ಸಾರು,  ಅದೇ ಪಲ್ಯ, ಅದೇ ಸಾಂಬಾರ್ ತರ ಹೋಯ್.. ||
 
ನಾ ಒಳ್ಳೆ ರೀತಿಯಲಿ… ಅಡ್ಗೆ ಮಾಡ್ವೆ ಪ್ರೀತಿಯಲಿ…
ಹೇಳಿ ಬಿಡು ತುಂಬಾ ಫ್ರಾಂಕಾಗಿ…. ನೀ ತಿನ್ನುವೆಯಾ?
ನೀ ತಿನ್ನೋ ಹೋಟ್ಲಿನಲಿ… ಕಳೆದೆರಡು ವರುಷದಲಿ
ತಿಂದು ನೂರು ಕಾಯಿಲೆ ಬಂದಿದ್ದು… ಮರೆತಿರುವೆಯಾ?
ಕಮ್ಮಿಯಲ್ಲ ಡಾಕ್ಟ್ರ ಫೀಸುಗಳು… ಬೇಡೆನಗೆ  ಹೋಟ್ಟೆನೋವ್  ಮಾತ್ರೆಗಳು
ಅಪ್ಪೆ ಮಿಡಿ ಅನ್ನ  ಮೊಸರಿದ್ರೆ…ಸಾಕು ನನಗೆ…
 
ಅದೇ ಸಾರು,  ಅದೇ ಪಲ್ಯ, ಅದೇ ಸಾಂಬಾರ್ ತರ ಹೋಯ್.. ||

Actions

Information

28 responses

13 07 2009
ಯೋಗೀಶ ಅಡಿಗ

ಸಾಹಿತ್ಯ ಅಂದ್ರೆ ಸಂಗೀತಕ್ಕೆ ಸರೀ ಇತ್ತು… ಭಾರೀ ಲಾಯ್ಕಿತ್ತು …

13 07 2009
ರಂಜಿತ್

ಸಕ್ಕತ್ ಲಿರಿಕ್ಸ್!:)

13 07 2009
satya

ಊಟಕೆ ಐವತ್ ಕೊಟ್ಟು…
ತಿಂದ್ಮೇಲೆ ಹೊಟ್ಟೆ ಕೆಟ್ಟು…
ಡಾಕ್ಟ್ರಿಗೆ ನೂರರ ನೋಟು… ಎಲ್ಲಾ ದುಡ್ ವೇಷ್ಟು I lik these line very much

13 07 2009
ಕಟ್ಟಿಮನಿ 45E

ಸಕ್ಕತ್ತಾಗಿದೆ …
ಕಟ್ಟಿಮನಿ45E

13 07 2009
kallare

Hhehe.. Masth math.
‘Jwara bandu hodamele….’ anta bareeri ondu

best,

13 07 2009
Pramod

ಪರ್ಫೆಕ್ಟ್.. ಟಾಪ್ ಕ್ಲಾಸ್ ಅಣಕ..:)

13 07 2009
armanikanth

sakhataagide.swantha anubhava irbeku….

13 07 2009
Sushrutha

hehehe! :D

13 07 2009
Shubhada

hi hhi hhi :) Original lyrics-ginta nimma lyrics-e laykitt..

13 07 2009
ಸಂದೇಶ

ಬಾರಿ ಒಳ್ಳೆದಿತ್ತ್ ಮಾರಾಯ…

13 07 2009
Suhas

bombat!!

13 07 2009
T G Srinidhi

Hehe :-)

Yava hotel ee haadige inspiration kottiddu? ;-)

13 07 2009
ರಾಜೇಶ್ ನಾಯ್ಕ

ಸೂಪರ್ ಸೂಪರ್!!

13 07 2009
ಶೆಟ್ಟರು (Shettaru)

ಭಾರಿ ಕಾತರ್ನಾಕ್ ಟಾಪಿಕ್ಕಿಗೆ ಲಿರಿಕ್ಸ್ ಬರ್ದಿರಿ ಬಿಡ್ರಿ :)

ಮಸ್ತ್, ಮಸ್ತ್, ಮತ್ತು ಮಸ್ತ್

-ಶೆಟ್ಟರು

13 07 2009
sandesh karanth

Hehehe! thumba chennagide. =)

13 07 2009
shivu.k

sir,

sakkat majavagide….Odi tuMba kuShiyaithu…

13 07 2009
sadanand

good one, rahter the best one. look at the responses.
keep writing.

13 07 2009
ನೀರ ತೆರೆ

ವಿಜಯರೇ ಬಾರೀ ಲಾಯಿಕ್ ಉಂಡು ಮರಾಯರೇ. ಓದುದು ತೆಲಿಕೆಲ ಬತ್ತ್ಂಡ್.

14 07 2009
ವಿಜಯರಾಜ್ ಕನ್ನಂತ

ಯೋಗೀಶ್ ಅಡಿಗ, ರಂಜಿತ್ ಅಡಿಗ, ಸತ್ಯ, ಕಟ್ಟೀಮನಿ, ಪ್ರಮೋದ್, ಸಂದೇಶ್, ಸುಹಾಸ್, ರಾಜೇಶ್, ಸಂದೇಶ್ ಕಾರಂತ್,ಶಿವು ಕೆ, ಸದಾನಂದ್ .. ನಿಮಗೆಲ್ಲರಿಗೂ ವಂದನೆಗಳು

ಮಹೇಶ್.. ಬರ್ಯೋಣ ಬಿಡಿದ… ಅದ್ಕೆನಂತೆ…

ಮಣಿ .. ಅದು ಹೋಟೆಲ್ ನಲ್ಲಿ ತಿನ್ನುವ ಎಲ್ಲರ ಅನುಭವ ಅಲ್ವಾ?

ಶುಭದ… ಸುಮ್ ಸುಮ್ನೆ ಹೋಗ್ಳಬೇಡಿ… :-)

ಶ್ರೀನಿಧಿ – ಬೆಂಗಳೂರಿನ.. ಅಷ್ಟ್ಯಾಕೆ ಯಾವ ಊರಿನ ಯಾವ್ ಹೋಟೆಲು ಅಂತ ಬೇಕಾದ್ರೆ ಇಟ್ಕೊಬೋದು

ಶೆಟ್ಟರು … ಭಾಳ ದಿನದ ನಂತರ ಈ ಕಡೆ ಬಂದಿದ್ದೀರಾ.. ಸ್ವಾಗತ

ಪಡುವಣದವರೆ … ಖುಷಿ ಆಂಡ್ ಅತ್ತೆ… ಇಡೆಗ್ ಇಂಚನೆ ಬರೋಡು ಆವಾ

15 07 2009
ಪ್ರದೀಪ್

ಸಖತ್ತಾಗಿದೆ ಸಾರ್! ದೂಸ್ರಾ ಮಾತಿಲ್ಲ! ;-)

15 07 2009
ಸುನಾಥ

ಮೂಲಕವನ ಗೊತ್ತಿಲ್ಲ. ಆದರೆ ನಿಮ್ಮ ಅಣಕುವಾಡು ಮಸ್ತಾಗಿದೆ ಹೋಯ್!

19 07 2009
Nimma Snehitha

Neevu UVCE collegina studentaa? Dayavittu reply maadthira? My Id is nk04madhukumar@gmail.com

28 07 2009
muktha

nimma anakada haadu yeshtu chennagide andre, moola haadu marthu hoagi, nimma haade haadohangaagide…funny yaar..good work!

29 07 2009
Tanuja

Super agide marayre……..keep it going…….

Odi thumba kusjiyayirhu…….

13 08 2009
asha

thumba chennagithu masth maja madidhe. igina swin flu bage bariri

25 08 2009
Ravindra Shettar

Soooooper lyrixpa sirrrra… Odakkhathidre… nam jaavna engaagythalla antha byasara aagthythi… prathiondu shabdanu kkhare aythri…

5 11 2009
Abhishek S N

Hey I wanna record this in my voice ! pls permit me ;)

24 11 2009
Rajesh L Gowda

Superbbbbbbbbbbb..

Leave a comment