ಹನಿ ಹನಿ ಕೂಡಿ ಈ ಕಣ್ಣೇ ಹಳ್ಳ …!!

8 10 2009

ಮೊದಲ 5 ಹನಿಗಳು  ಇವತ್ತಿನ ವಿ.ಕೆ. ಯ ಸಿಂಪ್ಲಿಸಿಟಿಯ ಅಂಗಳದಲ್ಲಿ ಬಿದ್ದಿವೆ… :-)

ಹಿಂದಿರುಗಿ ನೀ ಬರಲಾರೆಯೆಂದು 
ನನಗೂ ಗೊತ್ತಿದೆ ಗೆಳತಿ
ಹಿಂದುರುಗಿ ನೋಡಿಬಿಡು ಸಾಕು
ಕಣ್ತುಂಬಿಕೊಳ್ಳುವೆ ಒಂದು ಸರ್ತಿ
————————————
 ಪ್ರೀತಿ ಹಣತೆಗೆ ನೀನೆ ಎಣ್ಣೆ
ನಾ ಉರಿಯುವ ಬತ್ತಿ,
ಎಣ್ಣೆ ತೀರಿದರೂ ಉರಿಯುತಿದೆ
ನನ್ನೀ ದೇಹವೇ ಹೊತ್ತಿ…
ಅದೇ ಕಣೇ ಈ ಪ್ರೀತಿಯ ಶಕ್ತಿ
———————————-
ಮಾತೇ ಇಲ್ಲದೆ ಮುಗಿದೇ ಹೋಯ್ತು
ನಮ್ಮ ಪ್ರೀತಿ ನಾಟಕದ ಏಕಾಂಕ,
ತೆರೆ ಸರಿಯುವ ಮೊದಲೇ ತೆರೆ ಬಿತ್ತು
ಉಳಿದಿದ್ದು ಬರೀ ಏಕಾಂತ
———————————–
ಆಸೆಯೇನೋ ಇದೆ ಗೆಳತಿ ನಿನ್ನ ಮೇಲೆ
ಮುಗಿಲು ಮುಟ್ಟುವಷ್ಟು…
ಕೈಗೆಟುಕಬೇಕಲ್ಲ ಬಯಸಿದ್ದೆಲ್ಲ
ನನ್ನ ಪ್ರಾಪ್ತಿ ಎಷ್ಟೋ ಅಷ್ಟು
————————————
ಮುರಿದೇನೆ ಹೊರತು ಮಣಿಯಲಾರೆ
ಈ ಮುನಿಸು ಹಠ ನಿನಗೆ ತರವೇ ನೀರೆ?
ಮುರಿದೆರಡು ತುಂಡಾದ ಮೇಲೆ ಈ ನಂಟು
ಬದುಕಲಿ ನಮ್ಮ ಪಾಲಿಗೇನುಂಟು ?
ಜೋಡಿಸಬಹುದೇನೆ ಸುರಿದ್ಯಾವ ಅಂಟು?
————————————
ಬಾರದಿರು ಗೆಳತಿ ಮನಸಿನ ಕನಸಿನಂಗಳಕೆ ಆಡಲು
ಬರುವ ಮುನ್ನ ಹುಟ್ಟಿಸಿ ನಿರೀಕ್ಷೆಯ ಕಡಲು
ಬಳಿಕ ಹಿಂದಿರುಗಿ ಮರೀಚಿಕೆಯಂತೆ ಕಾಡಲು
ಸಾಕಿನ್ನು ಭರಿಸಲಾರದೀ ಒಡಲು
ಬರುವೆಯಾದರೆ ಬಾ ಇಲ್ಲೇ ಠಿಕಾಣಿ ಹೂಡಲು
ಮರಳುವ ಮಾತೇ ಇಲ್ಲದೆ ಕೂಡಲು..
ಎದೆಯ ಈ  ಪುಟ್ಟ  ಗೂಡೊಳು


Actions

Information

5 responses

8 10 2009
sughosh s. nigale

ಸಕತ್ತಾಗಿದೆ…..

9 10 2009
Satya

Sir,

This hanis r very good I lik these ಪ್ರೀತಿ ಹಣತೆಗೆ ನೀನೆ ಎಣ್ಣೆ
ನಾ ಉರಿಯುವ ಬತ್ತಿ,
ಎಣ್ಣೆ ತೀರಿದರೂ ಉರಿಯುತಿದೆ
ನನ್ನೀ ದೇಹವೇ ಹೊತ್ತಿ…
ಅದೇ ಕಣೇ ಈ ಪ್ರೀತಿಯ ಶಕ್ತಿ lines very much

9 10 2009
Shrinidhi hande

congrats

15 10 2009
prakash hegde

ಬಹಳ ಸುಂದರ ಕವನ….!
ಅಭಿನಂದನೆಗಳು…

15 10 2009
ಪ್ರದೀಪ್

ಎಂದಿನಂತೆ… ಹನಿಗಳು ಕಂಗೊಳಿಸುತ್ತಿವೆ! ;-)

Leave a comment