ಕವಿತೆ ಎಂದು ಹೆಸರಿಟ್ಟೆ…ನಿಟ್ಟುಸಿರಿಟ್ಟೆ !!

3 11 2009

ಮನಸಿನ ಪುಟಗಳ ನಡುವೆ
ಖಾಲಿ ಹಾಳೆಗಳಿವೆ ಕೆಲವು..
ನೀ ಬರೆಯದೇ ಹೋದ
ಒಲವಿನ ಸಾಲುಗಳವು…
————————————
ನಿನ್ನ ನೆನಪುಗಳಿಂದ
ನನ್ನಲಿ ಮೂಡಿದ ಸಂಚಲನಗಳ ಸಂಕಲಿಸಿ
ಕವಿತೆ ಎಂದು ಹೆಸರಿಟ್ಟೆ…
ನಿಟ್ಟುಸಿರಿಟ್ಟೆ !!
————————————-
ಈ ಹನಿಗಳೆಲ್ಲ ನನ್ನವಲ್ಲ ಗೆಳತಿ,
ನೀನೇ ಬರೆಸಿದ್ದು…ಮತ್ತು ನೀನೇ ಬರಿಸಿದ್ದು                             
ನಾನೋ ಬರಿ ನೆಪಮಾತ್ರದವ
ಬರೆದಿದ್ದು ಮತ್ತು ಭರಿಸಿದ್ದು !!
————————————
ನಾನೇ ಬಯಸಿ ಪಡೆದರೆ ಅದು
ದಿವ್ಯ ಏಕಾಂತ…
ನೀನಿಲ್ಲದ ಒಂಟಿತನದಲಿ ಅನಿಸೋದು
ಈ ಬದುಕು ಏಕಂತ?
————————————
ಬರೆದು ಬರಿದಾಗಿಹೆನು ನಾ,
ಬರಿದೆ ನೆನಪಾಗುತಿಹೆ ನೀ,
ಬರದೆ ಹೋದರಿನ್ನು ನೀ,
ಬರದ ಬಯಲಂತೆ  ನಾ
—————————————-


Actions

Information

6 responses

4 11 2009
ಶೆಟ್ಟರು (Shettaru)

ವಿಜಯ್,

ಎಲ್ಲೋ ಒಂದು ಕಡೇ ಜಯಂತ ಕಾಯ್ಕೀಣಿ ನೇನಪಾಗ್ತಾರೆ.

-ಶೆಟ್ಟರು

4 11 2009
goutam hegde

olleya putta putta kavanagalu. muddagive:)

4 11 2009
ವಿಜಯರಾಜ್ ಕನ್ನಂತ

thankx goutam and ಶೆಟ್ಟರು.. :-)

5 11 2009
svatimuttu

ಚೆನ್ನಾಗಿದೆ…… ಸರ್..
-ಇಂಚರ(ಸ್ವಾತಿಮುತ್ತು)

12 11 2009
Yogeesh

ಶೈಲಿ ಏನೋ ಹೊಸತಾಗಿದೆ… ಚೆನ್ನಾಗಿದೆ ಹನಿಗವಿತೆಗಳು

16 11 2009
ಪ್ರದೀಪ್

ಎಂದಿನಂತೆ.. ಭಾವಪೂರಿತವಾಗಿ, ಚೆನ್ನಾಗಿರುವ ಹನಿಗಳು… :-)

Leave a comment