(ಹಳೆಪಾತ್ರೆ ಹಳೆ ಕಬ್ಣ ಧಾಟಿಯಲ್ಲಿ ಓದಿ ಈ ಅಣಕ)
ಅದೇ ಸಾರು, ಅದೇ ಪಲ್ಯ, ಅದೇ ಸಾಂಬಾರ್ ತರ ಹೋಯ್..
ಈ ಹೋಟ್ಲು ಈ ಕ್ಯಾಂಟೀನ್ ಬಲು ಬೇಜಾರ್ ಕಣಾ ಹೋಯ್…
ಹೆಲ್ತಿನ ಗೊಡವೆಯ ಬಿಡು..
ರುಚಿಯನ್ನು ಮರೆತು ಬಿಡು…
ಹೊಟ್ಟೆಯು ತುಂಬಿತು ಬಿಡು… ಸಾಕು
ಊಟಕೆ ಐವತ್ ಕೊಟ್ಟು…
ತಿಂದ್ಮೇಲೆ ಹೊಟ್ಟೆ ಕೆಟ್ಟು…
ಡಾಕ್ಟ್ರಿಗೆ ನೂರರ ನೋಟು… ಎಲ್ಲಾ ದುಡ್ ವೇಷ್ಟು
ಡಾಕ್ಟ್ರಿಗೆ ನೂರರ ನೋಟು… ಎಲ್ಲಾ ದುಡ್ ವೇಷ್ಟು
ನೋಡು ಮುಂಗಾರು ಮಳೆ.. ಸುರಿಯುತಿಹ ವೇಳೆಯಲಿ..
ಹೋಟೆಲೂಟ ತಿಂದರೆ ಅತಿಸಾರ… ಭೇದಿ ಕಾಲರಾ
ಬೇಡುವೆನು ನಿನ್ನನ್ನ… ಮಾಡಿ ರುಚಿ ಅಡುಗೆನಾ
ತಂದಿರುವೆ ಊಟದ ಡಬ್ಬಿಯನು… ಮರೆತು ಬಿಡು ಹೋಟ್ಲನ್ನ…
ಒಲೆಯುರಿಸಿ ಅಡುಗೆ ಮನೆಯೊಳಗೆ… ಇನ್ನು ಮುಂದೆ ನಾ ಚಾ ಮಾಡುವೆನು
ದಿನಾ ಊಟ ಮನೆಯಿಂದ್ಲೆ ಕೊಡುವೆನು… ಕೊನೆಯವರೆಗೂ…
ಅದೇ ಸಾರು, ಅದೇ ಪಲ್ಯ, ಅದೇ ಸಾಂಬಾರ್ ತರ ಹೋಯ್.. ||
ನಾ ಒಳ್ಳೆ ರೀತಿಯಲಿ… ಅಡ್ಗೆ ಮಾಡ್ವೆ ಪ್ರೀತಿಯಲಿ…
ಹೇಳಿ ಬಿಡು ತುಂಬಾ ಫ್ರಾಂಕಾಗಿ…. ನೀ ತಿನ್ನುವೆಯಾ?
ನೀ ತಿನ್ನೋ ಹೋಟ್ಲಿನಲಿ… ಕಳೆದೆರಡು ವರುಷದಲಿ
ತಿಂದು ನೂರು ಕಾಯಿಲೆ ಬಂದಿದ್ದು… ಮರೆತಿರುವೆಯಾ?
ಕಮ್ಮಿಯಲ್ಲ ಡಾಕ್ಟ್ರ ಫೀಸುಗಳು… ಬೇಡೆನಗೆ ಹೋಟ್ಟೆನೋವ್ ಮಾತ್ರೆಗಳು
ಅಪ್ಪೆ ಮಿಡಿ ಅನ್ನ ಮೊಸರಿದ್ರೆ…ಸಾಕು ನನಗೆ…
ಅದೇ ಸಾರು, ಅದೇ ಪಲ್ಯ, ಅದೇ ಸಾಂಬಾರ್ ತರ ಹೋಯ್.. ||

ಇವ್ರೆಲ್ಲಾ ಏನ್ ಹೇಳ್ತಾರೆ ಕೇಳಿ...