ತಣ್ಣಗಿದ್ದರೂ ಒಳಗೊಳಗೇ ದಹಿಸಿ ಕೊರೆವ ಮಂಜಿನಂತೆ… ನಿನ್ನ ತಂಪು ನೆನಪೂ ನನ್ನ ಸುಡುತಿದೆ ಬೆಂಕಿಯಂತೆ ———————————– ಕವಿತೆ ಅನ್ನುವರೇನು ಸಖಿ ಪೋಣಿಸಿದ ಪದಗಳ ಸಾಲಿಗೆ? ಕವಿತೆಯ ಅರ್ಥವೇ ಬೇರೆ ಇದೆ ಗೆಳತಿ ನನ್ನ ಪಾಲಿಗೆ ಅದು… ಮುರಿದು ಹೋದ ಕನಸೊಂದರ ತುಣುಕು ಮುಗಿದು ಹೋದ ಕ್ಷಣವೊಂದರ ಮೆಲುಕು ಮರೆಯಲಾಗದ ನಿನ್ನೊಂದು ಮಧುರ ನೆನಪು —————————————- ಕನಸಿನ ಕನ್ನಡಿಯ ಬಿಂಬಗಳೆಲ್ಲಾ ಮನಸಿನೊಳಗೆಯೇ ಬೆತ್ತಲಾಯ್ತು ನಿನ್ನ ಕಣ್-ಬೆಳಕಿಗೆ ಬೀಳುವ ಮೊದಲೇ ಮರೆಯಾಗಿ ಕತ್ತಲಾಯ್ತು ———————————— ನನ್ನ ಯಾತನೆಗಳನೆಲ್ಲ ನಿನ್ನ ಬಳಿ [...]
Archive for the ‘ಹೀಗೊಂದು ಕತೆ…’ Category
ಹೇಳಹೇಸರಿಲ್ಲದಂತಾದ ಭಾವಗಳ ಹೇಳುತಿವೆ….. ಹೇಳಲು ಹೆಸರಿಲ್ಲದ ಹನಿಗಳು !!!!
Posted: February 10, 2010 in ಆಪ್ತಸ್ವರ, ನೆನಪುಗಳ ಮಾತು ಮಧುರ.., ಭಾವ ಭಿತ್ತಿ, ಮನಸಿನ ಹಾಡು, ಹನಿ ಹನಿ, ಹಾಗೆ ಸುಮ್ಮನೆ, ಹೀಗೊಂದು ಕತೆ...Tags: hani, hani kavite, kannada hani
0
ಮಾಧವಿ…ಹೊರಟಳು ಕಾನನಕೆ…
Posted: August 7, 2008 in ಹೀಗೊಂದು ಕತೆ...Tags: ಗಾಲವ, ಪುರಾಣ, ಪುರಾಣ ಕಥೆ, ಮಾಧವಿ, ಯಕ್ಷಗಾನ, ಯಯಾತಿ, ವಧು ಮಾಧವಿ, ಶೋಷಣೆ, gaalava, maadhavi, yakshagana, yayati
ನನಗೀಕೆಯ ಪರಿಚಯವಾಗಿದ್ದು ಸುಮಾರು ಹದಿನಾರು ವರ್ಷಗಳಷ್ಟು ಹಿಂದೆ. ಅವಳ ಬದುಕಿನ ದುರಂತ ಕಥೆಯನ್ನು ಕೇಳಿ ಕಣ್ಣೀರು ಮಿಡಿದದ್ದೂ ಆಗಲೇ. ಅಲ್ಲಿಂದ ಮುಂದೆ ಆಗೊಮ್ಮೆ ಈಗೊಮ್ಮೆ ಮನಸಿನ ಮೂಲೆಯಿಂದೆದ್ದು ಬರುತ್ತಿದ್ದಳು. ನೂರಾರು ಪ್ರಶ್ನೆಗಳ ಕೇಳಿ ಕಾಡುತ್ತಿದ್ದಳು. ಮತ್ತೆ ಸದ್ದಿಲ್ಲದೆ ತಟಕ್ಕನೆದ್ದು ಮನಸಿನ ಮೂಲೆ ಸೇರಿ ಬಿಡುತ್ತಿದ್ದಳು. ಮೊನ್ನೆ ಟಿ.ವಿ.ಯಲ್ಲಿ ಅವಿನಾಶ್-ಮಾಳವಿಕ ದಂಪತಿಗಳ ಸಂದರ್ಶನ ನೋಡುತ್ತಿದ್ದಾಗ ಮತ್ತೆ ಮನಸಿನ ಮಹಡಿಯಿಂದ ಇಣುಕಿದಳು – ಅದೇ ಉತ್ತರವಿಲ್ಲದ ನೂರಾರು ಪ್ರಶ್ನೆಗಳನ್ನು ಹೊತ್ತ ಮುಖಭಾವದೊಂದಿಗೆ. ಈಕೆ ಹೀಗೆ ನೆನಪಾಗಲು ಕಾರಣ ಅವಿನಾಶ್-ಮಾಳವಿಕ ದಂಪತಿಗಳ [...]
