ಆ ದಿನಗಳು ಚಿತ್ರದ ಸಿಹಿಗಾಳಿ ಹಾಡು ಈ ದಿನಗಳಲ್ಲಿ ಬಿಸಿಗಾಳಿಯಾಗಿ ಬದಲಾಗಿದೆ… J
ಬಿಸಿಗಾಳಿ…ಬಿಸಿಗಾಳಿ
ಸುಳಿದಾಡಿದೆ ಮನೆಯೊಳಗೆ…
ಬರಿ ಬಿಸಿಲು… ಬರಿ ಬಿಸಿಲು
ಒದ್ದೆಯಾದನು ಬೆವರಿನಲಿ
ಬನ್ಯನ್ ಒಂದೇ ಸಾಕು…
ಶರ್ಟು ಯಾತಕೆ ಬೇಕು…
ತಣ್ಣೀರ್ ಫ್ರಿಜ್ಜಲಿ ಐತೆ…
ಕುಡಿಯೋಣಾ… ಬಾ…
ಬಿಸಿಗಾಳಿ…ಬಿಸಿಗಾಳಿ…||
ಬಾಯಾರಿದಾಗ… ಎಳನೀರು ಕುಡಿಯುವ…
ಆಗೀಗ ಒಂದು… ಲಿಂಬು ಸೋಡ ಕುಡಿಯುವ…
ಪಾರ್ಲರ್‌ಗಳಿಗೆ… ಹೋಟ್ಲುಗಳಿಗೆ… ಹೋಗಿ ಜ್ಯೂಸು ಕುಡಿವ…
ಫ್ಯಾನಿನಡಿಗೆ… ಏ.ಸಿ.ಯೊಳಗೆ ಸ್ವಲ್ಪ ಕೂತು ಬರುವ
ಏ..ನೇ..ನು… ಮಾಡಿದ್ರೂ ವ್ಯರ್ಥವೇ… ತುಂಬಾ ಸೆಕೆಯಲ್ಲವೇ…
ಕರೆಂಟೇ… ಇಲ್ದಿದ್ ಮೇಲೆ… ಫ್ಯಾನು, ಏ.ಸಿ. ಯಾಕೆ?
ಬಿಸಿಗಾಳಿ…ಬಿಸಿಗಾಳಿ…||

ಇವ್ರೆಲ್ಲಾ ಏನ್ ಹೇಳ್ತಾರೆ ಕೇಳಿ...