Archive for the ‘CM’ Category

ಸತ್ಯ ಈಸ್ ಇನ್ ಲವ್ ಚಿತ್ರದ ಟೈಟಲ್ ಸಾಂಗ್ ಹಾಡ್ತಾ ಇರೋದು ಸಾಕ್ಷಾತ್ ಮಾಜಿ ಸಿ.ಎಮ್ ಯಡಿಯೂರಪ್ಪ….. ವೀಡಿಯೋ ಜೊತೆಗೆ ಓದಿ ನೋಡಿ…ಇನ್ನೂ ಮಜಾ ಇರುತ್ತೆ…. ಮುಳುಗೋದೆನು ಮುಳುಗೋದೆನು….. ಸ್ಕ್ಯಾಮ್ಮಲ್ಲೆನೇ.. ಹೊರ ಹೋದೆನು ಹೊರ ಹೋದೆನು….. ಮೊನ್ನೆ ತಾನೇ ನನ್ನ ಡೀಲಿಗೆ, ನನ್ನ ಗಾದಿಗೆ…ಮುಳ್ಳಾದ್ರು ಹೆಗ್ಡೆ…. ಯಡ್ಡಿ ಈಸ್ ಇನ್ ಸ್ಕ್ಯಾಮ್…..ಯಡ್ಡಿ ಈಸ್ ಇನ್ ಸ್ಕ್ಯಾಮ್….. ಯಡ್ಡಿ ಈಸ್ ಇನ್ ಸ್ಕ್ಯಾಮ್…..ಯಡ್ಡಿ ಈಸ್ ಇನ್ ಸ್ಕ್ಯಾಮ್….. ಮುಳುಗೋದೆನು ಮುಳುಗೋದೆನು ಸ್ಕ್ಯಾಮ್ಮಲ್ಲೆನೇ.. ಹೊರ ಹೋದೆನು ಹೊರ ಹೋದೆನು ಮೊನ್ನೆ [...]

ಯಡಿಯೂರಪ್ಪ ಬಣದ ಸದಾನಂದ ಗೌಡ್ರು ಮುಖ್ಯ ಮಂತ್ರಿ ಆದ ಖುಷಿಯಲ್ಲಿ ಮಾಜಿ ಸೀಎಂ ಸಾಹೇಬರು ಕವಿರತ್ನ ಕಾಳಿದಾಸನ ಗೆಟಪ್ಪಿನಲ್ಲಿ.. ಸದಾ ಕಣ್ಣಲಿ ಪ್ರಣಯದ ಕವಿತೆ ಹಾಡನ್ನು ಹಿಂಗೆ ಹಾಡ್ತಿದ್ದಾರೆ… ಕೆಳಗೆ ವೀಡಿಯೊ ಲಿಂಕ್ ಇದೆ ನೋಡಿ…ವೀಡಿಯೊ ನೋಡ್ತಾ ಈ ಹಾಡು ಕೇಳಿ… ಖುಷಿ ಆದ್ರೆ ನಂಗೊಂದ್ ಮಾತು ಮರೀದೆ ಹೇಳಿ….. ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ ಸದಾ ಬೆನ್ನಲಿ… ಇರುವೆ ನಾ…ಹಿಡಿತ ನನ್ನದೇ.. ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ ಸದಾ ಬೆನ್ನಲಿ… ಇರುವೆ ನಾ…ಹಿಡಿತ [...]

ಮೇಯರ್ ಮುತ್ತಣ್ಣ ಚಿತ್ರದ ಹಳ್ಳಿಯಾದರೇನು ಶಿವ ….ದಿಲ್ಲಿಯಾದರೇನು ಶಿವ ಕೇಳಿದ್ದಿರಲ್ವಾ? ಈಗಿನ ಹಗರಣಗಳ ಸರಮಾಲೆ ಕಂಡಿದ್ರೆ…ಅಣ್ಣಾವ್ರು ಬಹುಷಃ ಹೀಗೆ ಹಾಡ್ತಾ ಇದ್ರೇನೋ… ಯಡ್ಡಿಯಾದರೆನು ಶಿವ… ರೆಡ್ಡಿಯಾದರೇನು ಶಿವ ಇವರೆಲ್ಲಾ ಒಂದೇ ಶಿವ… ಎಲ್ಲಾ ತಿಂದವ್ರೇ ಶಿವ ಇವರೆಲ್ಲಾ…. ತಿಂದವ್ರೇ ಶಿವ ಎಲ್ಲಾ ಸಂಪತ್ತು ಕದ್ದೇ…ಎಲ್ಲರಿಗೂ ಲಂಚಾ ಕೊಟ್ಟೇ.. ಎಲ್ಲಾ ಸಂಪತ್ತು ಕದ್ದೇ…ಎಲ್ಲರಿಗೂ ಲಂಚಾ ಕೊಟ್ಟೇ.. ದೋಚಿಕೊಂಡು ಬಾಚುತಿರುವರೋ… ದುರಾಸೆ ಜನ… ಹಗರಣ ಮಾಡುತಿರುವರೋ ಜನಹಿತವ ಮರೆತು…ಸ್ವಜನರನು ಪೊರೆದು.. ಅನ್ಯಾಯ ಮಾಡುತಿರುವರೋ ಯಡ್ಡಿಯಾದರೆನು ಶಿವ… ರೆಡ್ಡಿಯಾದರೇನು ಶಿವ ಇವರೆಲ್ಲಾ [...]

ಬಂಧನ ಚಿತ್ರದ ವಿಷಾದ ಗೀತೆ… ಪ್ರೇಮದಾ ಕಾದಂಬರಿ…ಯಡ್ಡಿ ಬಾಯಲ್ಲಿ ಹೀಗಾಗಿದೆ ನೋಡಿ… ಯಡ್ಡಿಯ ಕಾದಂಬರಿ…. ಮುಗಿಯಿತು ಕಣ್ಣೀರಲಿ, ಮುಖ್ಯಮಂತ್ರಿ ಗಾದಿಯು ಹೋದರೂ…. ಆಗದಿರಲಿ ಬಂಧನ, ಯಡ್ಡಿಯ ಕಾದಂಬರಿ…. ಮುಗಿಯಿತು ಕಣ್ಣೀರಲಿ, ಮುಖ್ಯಮಂತ್ರಿ ಗಾದಿಯು ಹೋದರೂ… ಆಗದಿರಲಿ ಬಂಧನ ……!! ಮೊದಲ ದಿನಕೂ , ಕೊನೆಯ ನಾಟಕಕೂ, ನಡುವೆ ಏನಿತು ಅವಾಂತರ, ಮೊದಲ ದಿನಕೂ , ಕೊನೆಯ ನಾಟಕಕೂ, ನಡುವೆ ಏನಿತು ಅವಾಂತರ, ಬಂದು ಹೋಯಿತು ಕೋಟಿ ಸಾವಿರ, ತಿಂದೆ ನಾನು ನಿರಂತರ!! ಯಡ್ಡಿಯ ಕಾದಂಬರಿ…. ಮುಗಿಯಿತು ಕಣ್ಣೀರಲಿ, [...]

ಅಮೃತವರ್ಷಿಣಿ ಸಿನೆಮಾದ ತುಂತುರು ಅಲ್ಲಿ ನೀರ ಹಾಡು… ಪ್ರಸ್ತುತ ಹಗರಣಗಳ ಮಧ್ಯೆ ಹೀಗೆ ಅಣಕವಾಗಿ…ಬದಲಾಗಿದೆ… ಸೆಂಟರು… ಅಲ್ಲಿ 2ಜೀ ಪಾಡು… ಸ್ಟೇಟಲಿ.. ಯಡ್ಡಿ ಡ್ರಾಮ ನೋಡು… ಕಾಂಗ್ರೆಸ್ಸಿರಲಿ…ಬಿಜೆಪಿ ಇರಲೀ… ಸ್ಕ್ಯಾಮಿನದೇ ಗೋಳಿನಲಿ… ನಮ್ಮ ದೇಶ ತಿಂದರು.. ನಮ್ಮ ಲೀಡರು… ಎಲ್ಲ ಅಧಿಕಾರದ ಲಾಭಿಗಾಗಿ…. ಏರಿ ಮೆರೆಯೋದು ಲಾಭಕಾಗಿ… ||ತು೦ತುರು|| ಕನಿಮೊಳೀ ರಾಜ… ಜೈಲಿನಲಿ.. ಕಲ್ಮಾಡಿಗೀಗ… ಮರೆವ ಕಾಯ್ಲೆ.. ಗಣಿ-ಭೂಮಿ ಧೂಳು… ಎಡ್ಡಿ ಮೇಲೆ.. ಕೋಟಿ ಕೋಟಿ ಡೀಲು… ತರಂಗದಲೆ.. ಸ್ಕ್ಯಾಮು ರೇಡು ಲ್ಯಾಂಡು ಮೈನ್ಸು… ಪೇಪರ್ ತುಂಬಾ [...]