Archive for the ‘kannada book’ Category

ನಾವು ಹುಟ್ಟಿ ಬೆಳೆದ ನೆಲದ ಬಗೆಗಿನ ಪ್ರೀತಿ-ಸೆಳೆತ-ಆಕರ್ಷಣೆಯು ನಾವು ಎಲ್ಲೇ ಇದ್ದರೂ ಕೂಡಾ ಸದಾ ನಮ್ಮ ನೆರಳಿನಂತೆ ಹಿಂಬಾಲಿಸುವುದು ಸಹಜ. ನಾವು ಆಡಿ ಬೆಳೆದ ಪರಿಸರ, ಅಲ್ಲಿನ ಆಚರಣೆ-ಹಬ್ಬ-ಹರಿದಿನ, ಅಲ್ಲಿನ ಜನ-ಜೀವನ ನಮಗೆಲ್ಲರಿಗೂ ಆಪ್ಯಾಯಮಾನ. ತುಳುನಾಡಿನಲ್ಲಿ ಹುಟ್ಟಿ ಬೆಳೆದ ಎಚ್.ನಾಗವೇಣಿಯವರ ಕತೆಗಳಲ್ಲಿ ಕೂಡಾ ಈ ತಾಯ್ನೆಲದ ಮಣ್ಣಿನ ತುಡಿತ ಮಿಡಿತಗಳು ನರನಾಡಿಯಂತೆ ವ್ಯಾಪಿಸಿರುತ್ತವೆ. ಅ ಮಣ್ಣಿನ ಸಾರದಲ್ಲಿನ ಜೀವಂತಿಕೆಯನ್ನು ತುಂಬಿಕೊಂಡು ನಳನಳಿಸುತ್ತಿರುವಂತೆ ಭಾಸವಾಗುತ್ತದೆ. ನಾಗವೇಣಿಯವರ ಕಥಾಸಂಕಲನಗಳಾದ ‘ವಸುಂಧರೆಯ ಗ್ಯಾನ’, ‘ನಾಕನೇ ನೀರು’, ‘ಮೀಯುವ ಆಟ,’ಗಳಲ್ಲಿ ನಮಗೆ ಕಾಣಸಿಗುವುದು [...]

ಬಲ್ಲವರ ಮಾತೊಂದಿದೆ ನೊಡಿ… ನದಿ ಮೂಲ, ಋಷಿ ಮೂಲ ಸ್ತ್ರೀ ಮೂಲ ಹುಡುಕಲು ಹೋಗುವ ‘ಮೂಲ’ವ್ಯಾಧಿ ಒಳ್ಳೇದಲ್ಲ ಅಂತ. ಆದ್ರೆ ಪದ ಮೂಲ ಹುಡುಕಲು ಹೋಗೋದ್ರಲ್ಲಿ ತಪ್ಪೇನಿಲ್ಲ ಬಿಡಿ. ಅದರಲ್ಲೂ ಅನ್ಯಭಾಷೆ-ದೇಶ-ಸಂಸ್ಕೃತಿಯಿಂದ ಬಂದ ಪದಗಳ ಮೂಲ ಹುಡುಕುತ್ತಾ ಹೋದಂತೆಲ್ಲಾ, ಸಿಗುವ ಕತೆಗಳು ತುಂಬಾ ಸ್ವಾರಸ್ಯಕರವಾಗಿರುತ್ತೆ. ಅರೆ! ಹೌದಲ್ಲ.. ನಮ್ಮ ನಿತ್ಯ ಬಳಕೆಯಲ್ಲಿ ಹಾಸುಹೊಕ್ಕಾಗಿರುವ ಈ ವಿಶಿಷ್ಟ ಪದಗಳ ಹಿಂದೆ ಇಷ್ಟೆಲ್ಲಾ ಕತೆ ಇದೆಯಾ, ಈ ಕತೆಗಳ ಅಸಲಿಯತ್ತಾದರೂ ಏನು ಎಂದು ಹುಡುಕುತ್ತಾ, ಈ ಪದ ಪ್ರಪಂಚದ ರೋಚಕ [...]

ಬರಹಗಾರನೊಬ್ಬನ ಮನಸ್ಸಿನ ಆಂದೋಳನದ ಹಾದಿಯಲ್ಲಿ ಜೋಗಿ-ಜಂಗಮನಂತೆ ಸುತ್ತಿ ಸುಳಿವ ಅವನ ಮನೋಲಹರಿಯ ಗೊಂದಲ-ದ್ವಂದ್ವ-ತಳಮಳ-ಜಿಜ್ಞಾಸೆಗಳ ಜಾಡು ಹಿಡಿಯುತ್ತಾ ಯಾಮಿನಿ ಬಂದಿದ್ದಾಳೆ. ಜೋಗಿಯ ಬರಹಗಳ ವಿಶೇಷತೆ ಅಂದ್ರೆ ಕಥೆಯೊಳಗೊಂದು ಕಥೆಯ ತರಹದ ಪುಟ್ಟ-ಪುಟ್ಟ ಅಧ್ಯಾಯಗಳ ಈ ಪುಟ್ಟ ಕಾದಂಬರಿಯನ್ನು ಕಥಾ ಸಂಕಲನ ಅಂದ್ಕೊಂಡು ಬೇಕಿದ್ರೆ ಓದಬಹುದು. ಪ್ರತಿ ಅಧ್ಯಾಯವೂ ಒಂದು ಸಣ್ಣ ಕಥೆಯೊಂತಿದೆ. ಆ ಅಧ್ಯಾಯಗಳಿಗೆ ಬಹುತೇಕ ಜನಪ್ರಿಯ ಕವನಗಳ ಸಾಲುಗಳನ್ನು ತಲೆಬರಹವಾಗಿ ಬಳಸಿದ್ದು ಮಾತ್ರವಲ್ಲದೆ ಆ ಅಧ್ಯಾಯದ ಅರ್ಥವನ್ನು ಬಿಂಬಿಸುವಂತೆ ಅದನ್ನು ಆರಿಸಿರುವುದು ಕೂಡಾ ಮೆಚ್ಚಿಕೊಳ್ಳಲೇಬೇಕು.   ಚಿರಾಯು [...]