ಅನುವಾದ-ಭಾವಾನುವಾದ ನನಗೆ ಬರುತ್ತೆ ಅನ್ನೋದು ಅನುಮಾನ.. ಆದ್ರೂ ಒಂದ್ ಕೈ ನೋಡೇ ಬಿಡೋಣ ಅಂತ ಶೋರ್ ಚಿತ್ರದ “ಇಕ್ ಪ್ಯಾರ್ ಕಾ ನಗ್ಮಾ ಹೈ” ಹಾಡಿಗೆ ಕೈ ಇಟ್ಟಿದ್ದೇನೆ.. ಪಾಪ ಇನ್ನು ಹಾಡಿನ ಗತಿ ಒಂದು ಪ್ರೇಮ ಪಲ್ಲವಿಯ ಪಲುಕಿದು…ಭಾವ ಲಹರಿಯ ಝರಿಯಿದು… ಬಾಳಿನರ್ಥ..ಬೇರೇನಲ್ಲ…ನನ್ನ ನಿನ್ನ ಕಥೆಯೇ ಎಲ್ಲಾ ಒಂದು ಪ್ರೇಮ ಪಲ್ಲವಿಯ ಪಲುಕಿದು….|| ಏನೋ ಗಳಿಸಲೆಂದು ಕಳಕೊಂಡು…ಕಳೆದುಕೊಂಡು ಮತ್ತೆ ಗಳಿಸಲೆಂದು.. ಬಾಳಿನರ್ಥದ ಸಾರ…ಬಂದು ಹೋಗೋ ನಡುವೆ ವ್ಯಾಪಾರ… ಎರಡು ಕ್ಷಣಗಳ ಬಾಳಿಂದ…ಕದ್ದು ಬಾಳಬೇಕಿದೆ ಖುಷಿಯಿಂದ.. ಬಾಳಿನರ್ಥ..ಬೇರೇನಲ್ಲ…ನನ್ನ [...]
Posts Tagged ‘ಅನುವಾದ’
ಒಂದು ಪ್ರೇಮ ಪಲ್ಲವಿಯ ಪಲುಕಿದು (ಇಕ್ ಪ್ಯಾರ್ ಕಾ ನಗ್ಮಾ ಹೈ)
Posted: May 21, 2011 in ಭಾವ ಭಿತ್ತಿ, ಮನಸಿನ ಹಾಡು, ಹಾಗೆ ಸುಮ್ಮನೆTags: ಅನುವಾದ, ಇಕ್ ಪ್ಯಾರ್ ಕಾ ನಗ್ಮಾ ಹೈ, ಭಾವಾನುವಾದ, ಶೋರ್
ಇದೂ ಕೂಡಾ ಇನ್ನೊಂದು ಭಾವಾನುವಾದ. ಈ ಪದ್ಯ ಕೂಡಾ ನಾನು ಒಂಬತ್ತನೇ ಕ್ಲಾಸಿನಲ್ಲಿದ್ದಾಗ ಓದಿದ್ದು. ಅಂತೆಯೇ ಅಚ್ಚುಮೆಚ್ಚಿನದ್ದು. ಇದು ಭಾವಾನುವಾದವೇ ಹೊರತು ಭಾಷಾನುವಾದವಲ್ಲ. ಮೂಲ: ಸುಭದ್ರಾ ಕುಮಾರಿ ಚೌಹಾಣ್ ಕವಿತೆ : ಮೇರಾ ನಯಾ ಬಚ್‌ಪನ್ ಮತ್ತೆ ಮತ್ತೆ ನೆನಪಾಗುತಿದೆ ಆ ಬಾಲ್ಯಕಾಲ, ಮತ್ತೆಂದಾದರೂ ಬಂದೀತೆ ಆ ರಮ್ಯ ಚೈತ್ರಕಾಲ? ಬಡವ ಬಲ್ಲಿದ ಎಂಬ ಭೇದ ಗೊತ್ತಿರದ, ಜಾತಿ-ಧರ್ಮಗಳ ಸೋಂಕೇ ಇರದ ನನ್ನ ಪುಟ್ಟ ಗುಡಿಸಲಿಗೆ ನಾನೇ ರಾಣಿ, ಹಂಸತೂಲಿಕಾ ಕಲ್ಪವಾಗಿ ಹರಕು [...]
ಅವಳ ಹುತಾತ್ಮ ಯೋಧನ ಅವರು ಮನೆಗೆ ತಂದರು….
Posted: July 16, 2008 in ಮನಸಿನ ಹಾಡುTags: ಅನುವಾದ, ಟೆನಿಸನ್, ಪದ್ಯ, ಮಗು, ಯೋಧ
ಇದು ಲಾರ್ಡ್ ಟೆನಿಸನ್‌ನ ‘ಹೋಮ್ ದೆ ಬ್ರಾಟ್ ಹರ್ ವಾರಿಯರ್ ಡೆಡ್’ನ ಭಾವಾನುವಾದ. ಈ ಪದ್ಯ ನಮಗೆ 10ನೇ ಕ್ಲಾಸಿನ ಇಂಗ್ಲೀಷ್ ಪಠ್ಯದ ಭಾಗವಾಗಿತ್ತು. ಈ ಪದ್ಯ ಅದರ ಭಾವ ತೀವ್ರತೆಯಿಂದಾಗಿ ನನ್ನನ್ನು ಗಾಢವಾಗಿ ತಟ್ಟಿತ್ತು. ಅದನ್ನು ಕನ್ನಡದಲ್ಲಿ ಬರೆಯುವ ಪ್ರಯತ್ನ ನನ್ನದು. ಅದರ ಮೂಲದ ತೀವ್ರತೆಯ ನೂರರಲ್ಲೊಂದು ಭಾಗ ಇಲ್ಲಿ ಬಂದಿದ್ದರೂ ನನ್ನ ಪ್ರಯತ್ನ ಸಾರ್ಥಕ ಹೆಮ್ಮೆಯ ವೀರಯೋಧ ಆಕೆಯ ಪತಿ, ಯುದ್ಧದಲಿ ಮಡಿದ ಅವನೀಗ ಬರೀ ಸ್ಮೃತಿ, ಯೋಧನ ಶವವೀಗ ಮನೆಯ ಮುಂದಿದೆ, [...]
