ಒಂದು ಸಂತೋಷದ ಸಂಗತಿ ಅಂದ್ರೆ ಚಂದನ ವಾಹಿನಿಯ ಬಹು ಜನಪ್ರಿಯ ಹಾಗು ವಿಶಿಷ್ಟ ಕಾರ್ಯಕ್ರಮ ‘ಥಟ್ ಅಂತ ಹೇಳಿ’ಯ ಕ್ವಿಜ್ ಮಾಸ್ಟರ್ ನಾ.ಸೋಮೇಶ್ವರ ಅವರು ಈ ಎಲ್ಲಾ ಒಗಟುಗಳಿಗೂ ಸರಿಯುತ್ತರ ನೀಡಿದ್ದಾರೆ. ಅವರು ನನ್ನ ಬ್ಲಾಗಿಗೆ ಬಂದಿದ್ದು, ಇಲ್ಲಿನ ಪ್ರಶ್ನೆಗಳಿಗೆ ಉತ್ತರಿಸಿದ್ದು ನನಗಂತೂ ಹಿಡಿಸಲಾಗದಷ್ಟು ಖುಶಿಯಾಗಿದೆ. ಅವರಿಗೆ ಅಭಿನಂದನೆ ಹೇಳುತ್ತ ಉತ್ತರಗಳನ್ನು ನೋಡೋಣವೇ? ( ಈ ಖುಶಿಯ ನಡುವೆಯೂ…ಈ ಒಗಟನ್ನು ಐವತ್ತಕ್ಕೂ ಮಿಕ್ಕಿ ಮಂದಿ ನೋಡಿದ್ದರೂ, ಉತ್ತರಿಸಲು ಯತ್ನಿಸಿದ್ದು ಕೆಲವೇ ಕೆಲವರು ಅನ್ನೋ ಬೇಜಾರೂ ಇದೆ) [...]
Posts Tagged ‘ಒಗಟು’
ಈ ಸಲ ಸ್ವಲ್ಪ ಸುಲಭವಾಗಿರುವ ಒಂದಿಷ್ಟು ಒಗಟು ಕೇಳ್ತಾ ಇದ್ದೇನೆ. ಉತ್ತರ ನಿಮಗೆ ಖಂಡಿತವಾಗಿಯೂ ಗೊತ್ತಿರುತ್ತೆ ಬಿಡಿ. ಹಾಗಾಗಿ ಒಗಟು ನೋಡಿದ ತಕ್ಷಣ ಉತ್ತರ ಕೊಟ್ಟು ಬಿಡಿ ೧. ದೇವರಿಲ್ಲದ ಗುಡಿಗೆ ಬಗ್ಗಿ ಬಗ್ಗಿ ಸಲಾಮು ೨. ಕಪ್ಪೆ ಮುಟ್ಟದ ಕೈಲಾಸದ ನೀರು ೩. ಅಜ್ಜನ ಹೊಟ್ಟೆ ಹಿಡ್ಕೊಂಡು ಮೊಮ್ಮಗ ನೇತಾಡ್ತಾನೆ ೪. ಕಾಸಿನ ಕುದುರೆಗೆ ಮಾರುದ್ದ ಲಗಾಮು ೫. ಕೈ ಹಿಡಿತಾನೆ ಗಂಡನಲ್ಲ. ಬಟ್ಟೆ ಹರಿಯುತ್ತಾನೆ ಹುಚ್ಚನಲ್ಲ ಉತ್ರ ಗೊತ್ತಾಯ್ತಲ್ವಾ? ಬೇಗ ಬೇಗ [...]
ಈ ವಾರದ ಶುರುವಿನಲ್ಲಿ ಒಂದು ಒಗಟು ಪೋಸ್ಟ್ ಮಾಡಿದ್ದೆ. ನಿಮ್ಮಲ್ಲಿ ಕೆಲವರು ಉತ್ತರ ನೀಡಲು ಪ್ರಯತ್ನ ಪಟ್ಟರೂ ಸರಿ ಉತ್ತರ ಹೇಳಿದ್ದು ಇಬ್ಬರು. ಅವರಲ್ಲಿ ಪವನ್ ಮಾತ್ರ ಸಮರ್ಪಕ ವಿವರಣೆಯೊಂದಿಗೆ ಸರಿ ಉತ್ತರ ನೀಡಿದ್ದಾರೆ. ನೀಲಗಿರಿ ಅವರು ಉತ್ತರ ಕೊಟ್ಟಿದ್ದರೂ ಅನುಮಾನದಲ್ಲಿ ಹೇಳಿದ್ದಾರೆ. ನಿಮ್ಮ ಉತ್ತರಗಳು ಹಾಗೂ ಸರಿಯುತ್ತರ ಕೆಳಗಿದೆ ನೋಡಿ… “ಕತ್ತಲೆ ಮನೆಯೊಳಗಿದ್ದಾತನ ಕೊಂದಾತನ ಅಗ್ರಜನ ಪಿತನ ವಾಹನದಂತೆ ಇದ್ದೀಯಲ್ಲೋ..” ಸರಿಯುತ್ತರ ಕೋಣ ಹೇಗೆ ಅಂತ ಕೇಳ್ತೀರಾ? ಕತ್ತಲೆ ಮನೆಯೊಳಗಿದ್ದಾತ – [...]
ಒಬ್ಬರು ಅಧ್ಯಾಪಕರು ತರಗತಿಯಲ್ಲಿ ಪಾಠ ಮಾಡುತ್ತಿದ್ದರು. ಆಗ ಗುಂಡ ಎಂದಿನಂತೆ ತರಲೆ ಮಾಡಲು ಶುರುಮಾಡಿದ. ಅಧ್ಯಾಪಕರಿಗೆ ತುಂಬಾ ಸಿಟ್ಟು ಬಂತು. ಅವನನ್ನು ಬಯ್ಯಲು ಹೊರಟರು. ಆದರೆ ಅವರಿಗೊಂದು ವಿಲಕ್ಷಣ ಅಭ್ಯಾಸವಿತ್ತು. ಯಾರನ್ನು ಬಯ್ಯುವುದಾದರೂ ಕೆಟ್ಟ ಶಬ್ದಗಳನ್ನು ಬಳಸದೆ, ಬಯ್ಗುಳವನ್ನು ಒಗಟಿನ ರೂಪದಲ್ಲಿ ಹೇಳುತ್ತಿದ್ದರು. ಹಾಗಾಗಿ ಗುಂಡನನ್ನು ಬಯ್ಯಲು ಕೂಡ ಒಂದು ಒಗಟನ್ನು ಹೇಳಿದರು. ಗುಂಡನಿಗೆ ಏನೂ ಅರ್ಥವಾಗದೆ ಪಿಳಿಪಿಳಿ ಕಣ್ಣುಬಿಟ್ಟುಕೊಂಡು ನಿಂತ. ನಿಮಗೆ ಏನಾದರು ಅರ್ಥವಾಗುತ್ತದೆಯೆ ನೋಡಿ…ಗೊತ್ತಾದರೆ ಗುಂಡನಿಗೂ ಹೇಳಿ.. J “ಕತ್ತಲೆ ಮನೆಯೊಳಗಿದ್ದಾತನ ಕೊಂದಾತನ [...]
