Posts Tagged ‘ಕತೆ’

ಉತ್ತರಕನ್ನಡ ಜಿಲ್ಲೆಗೂ ಸಣ್ಣಕತೆಗಳಿಗೂ ಅದೆಂತಹ ಅನ್ಯೋನ್ಯವೋ ಗೊತ್ತಿಲ್ಲ. ಆ ಜಿಲ್ಲೆಯ ಸೌಂದರ್ಯ, ಕಡಲು, ಘಟ್ಟ, ಮಲೆನಾಡಿನ ಮಾಧುರ್ಯವನ್ನೆಲ್ಲಾ ಹೀರಿಕೊಂಡುಬಿಟ್ಟವರಂತೆ ಇಲ್ಲಿನ ಕತೆಗಾರರು ಕತೆಗಳ ಅದ್ಭುತಲೋಕವನ್ನೇ ಕಟ್ಟಿಕೊಟ್ಟಿದ್ದಾರೆ; ಕೊಡುತ್ತಲೇ ಇದ್ದಾರೆ. ಆ ನೆಲದ ಮಣ್ಣಿನ ಸಾರದಲ್ಲಿ ಹುಲುಸಾಗಿ ಬೆಳೆದು ತೆನೆಗಟ್ಟುವ ಕತೆಗಳಿಂದಾಗಿ, ಅಲ್ಲಿನ ಪರಿಸರದಲ್ಲಿ ಮೊಗೆದಷ್ಟೂ ಬರಿದಾಗದ ಕತೆಗಳ ಕಣಜವೇ ಇರಬೇಕು. ಈ ಮಾತಿನಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲವೆಂದು ನಿಮಗೆ ಮನವರಿಕೆಯಾಗಬೇಕಿದ್ದರೆ ಯಶವಂತ ಚಿತ್ತಾಲರ – ಕುಮಟೆಗೆ ಬಂದಾ ಕಿಂದರ ಜೋಗಿ, ಪುಟ್ಟನ ಹೆಜ್ಜೆ ಕಾಣೋದಿಲ್ಲ, ಜಯಂತ ಕಾಯ್ಕಿಣಿ [...]

ಇದು ಗಾಂಪರ ಕಥೆ ಹೌದೋ ಅಲ್ವೋ ಗೊತ್ತಿಲ್ಲ. ಪ್ರಾಥಮಿಕ ಶಾಲೆಯಲ್ಲಿದ್ದಾಗ ಕೇಳಿದ್ದು. ನೀವೂ ಈ ಕಥೆ ಕೇಳಿರಬಹುದು. ಅಳಿದುಳಿದ ನೆನಪಿನೊಂದಿಗೆ ಕಥೆ ಹೀಗಿದೆ…   ಒಮ್ಮೆ ಗಾಂಪರ ಗುರುವಿಗೆ ಕುದುರೆ ಮೇಲೆ ತಿರುಗಬೇಕು ಅಂತ ಆಸೆಯಾಗುತ್ತೆ. ಆದ್ರೇನು ಮಾಡೋದು? ಕುದುರೆಯ ಬೆಲೆ ಭಾರಿ ದುಬಾರಿ. ಜೊತೆಗೆ ಈಗಿನ ತರಕಾರಿ. ತೈಲದ ಬೆಲೆಯೆ ತರಹವೇ ದಿನದಿನಕ್ಕೂ ಬೆಲೆ ಹೆಚ್ಚಾಗ್ತಾ ಇದೆ. ಹಾಗಾಗಿ ತಮ್ಮ ಆಸೆಯನ್ನು ಗುರುಗಳು ಅದುಮಿಟ್ಟುಕೊಂಡಿದ್ರು. ಅವರ ಶಿಷ್ಯರಿಗೆ ಗುರುಗಳ ಈ ಆಸೆಯ ಬಗ್ಗೆ ಹ್ಯಾಗೋ ಗೊತ್ತಾಯ್ತು. [...]

ನಾವೆಲ್ಲ ಚಿಕ್ಕವರಾಗಿದ್ದಾಗ ಅನೇಕ ಕಥೆ, ಗಾದೆ ಒಗಟು ಇವನ್ನೆಲ್ಲಾ ಕೇಳಿಯೇ ಇರುತ್ತೇವೆ. ಅವುಗಳಲ್ಲಿ ಕೆಲವು ಎಷ್ಟು ಕಾಲವಾದರೂ ಹಸಿ ಗೋಡೆಯಲ್ಲಿ ನೆಟ್ಟ ಹರಳಿನಂತೆ ಗಟ್ಟಿಯಾಗಿ ಮನಸ್ಸಿನಲ್ಲಿ ಅಂಟಿಕೊಂಡಿರುತ್ತವೆ. ಅಂಥಾ ಒಂದು ನೆನಪು ಈ ಸುಕ್ರನ ಕಥೆ. ನೀವು ಕುಂದಾಪ್ರ ಕಡೆಯವರಾಗಿದ್ರೆ ಕಂಡಿತಾ ಈ ಕಥೆ ಕೇಳೇ ಇರುತ್ತೀರಿ. ಇಲ್ಲವಾದಲ್ಲಿ ಕೂಡಾ ನಿಮ್ಮ ಕಡೆಯದೇ ಆದ ಇದಕ್ಕೆ ಹತ್ತಿರವಾದ ಕಥೆಯನ್ನಾದ್ರೂ ಕೇಳಿರಬಹುದು.   ಕಥೆ ಏನಪ್ಪಾ ಅಂದ್ರೆ …   “ಸುಳ್ ಹೇಳೋ ಸುಕ್ರಾ ಅಂದ್ರೆ.. ವಾಟಿ ಅಂಡಿಯೊಳ್ಗೆ [...]