ಚಿಕ್ಕಂದಿನಲ್ಲಿ ಮನೆಯವರಿಂದ ಹಿಡಿದು, ಬಂಧು ಮಿತ್ರರು, ಮನೆಗೆ ಬಂದ ಅತಿಥಿ ಅಭ್ಯಾಗತರಾದಿಯಾಗಿ ಎಲ್ಲರೂ ಕೇಳುವ ಪ್ರಶ್ನೆ – ‘ನೀನು ದೊಡ್ಡವನಾದ ಮೇಲೆ ಏನಾಗ್ತೀಯಾ?’ ಅಂತ. ಆ ವಯಸ್ಸಿನಲ್ ಇರುವ ಕಲ್ಪನೆ, ದೊಡ್ಡವರು ಹೇಳಿದ್ದು-ಕೇಳಿದ್ದು, ಟಿ.ವಿ. ಸಿನೆಮಾಗಳಲ್ಲಿ ನೋಡಿದ್ದು ಎಲ್ಲಾ ಸೇರಿ ಮನಸ್ಸಿಗೆ ಹೊಳೆದಂತಹ ಒಂದು ಉತ್ತರವನ್ನು ಕೊಟ್ಟಿರುತ್ತೇವೆ. ‘ನಾನು ಪೈಲಟ್ ಆಗ್ತೀನಿ, ಸಿನೆಮಾ ಹೀರೋ ಆಗ್ತೀನಿ, ಡಾಕ್ಟರ್, ಸೈನಿಕ, ಮೇಷ್ಟ್ರು ಆಗ್ತೀನಿ, ಅಮೇರಿಕಾಕ್ಕೆ ಹೋಗ್ತೀನಿ… ಹೀಗೆ ತರಹೇವಾರಿ ಉತ್ತರಗಳನ್ನು ನಾವು ನೀವೆಲ್ಲಾ ಕೊಟ್ಟಿರುತ್ತೀವಿ. ಯಾವ ಆಧಾರವೂ [...]
Posts Tagged ‘ಕನಸು’
ಕುರ್ಚಿ ಎಂಬ ಕನಸೂ…ಸ್ವಾಮಿ ಎಂಬ ನಾವೂ…
Posted: June 7, 2008 in ಸಿನಿಮಾTags: ಕನಸು, ಚಿತ್ರ ವಿಮರ್ಶೆ, ಜೂಹಿ ಚಾವ್ಲಾ, ವಿಮರ್ಶೆ, ಸ್ವಾಮಿ, ಹಿಂದಿ ಚಿತ್ರ ವಿಮರ್ಶೆ, film review, swami film review
ಪ್ರಕೃತಿ ಸೌಂದರ್ಯದ ಮಡಿಲಲ್ಲಿ ತಣ್ಣಗೆ ಮಲಗಿರುವ ಮಹಾರಾಷ್ಟ್ರದ ಒಂದು ಹಳ್ಳಿ. ಬೆಟ್ಟದ ಮೇಲೊಂದು ಗುಬ್ಬಚ್ಚಿ ಗೂಡಿನಂತಹ ಬೆಚ್ಚನೆಯ ಮನೆ. ವೆಚ್ಚಕ್ಕೆ ಹೊನ್ನಿನಂಗಡಿಯ ಕೆಲಸ. ಇಚ್ಛೆಯನರಿತು ನಡೆವ ನೆಚ್ಚಿನ ಹೆಂಡತಿ ರಾಧಾ. ಇವಳು ಅಪ್ಪಟ ಮದರಾಸಿ ಬ್ರಾಹ್ಮಣ ಗೃಹಿಣಿ. ಇದು ಸ್ವಾಮಿ ಅನ್ನೋ ಮಹಾರಾಷ್ಟ್ರಿಯನ್ ಬ್ರಾಹ್ಮಣನ ಬಯೋಡೇಟಾ. ಅಪ್ಪಟ ಮಧ್ಯಮ ವರ್ಗೀಯ ದಂಪತಿಗಳ ಬದುಕಿನ ನೋಟ. ಮುದ್ದು ಕುವರನೊಬ್ಬ ಜನಿಸಿ ಬದುಕಾಯ್ತು ಸುಂದರ ಹೂದೋಟ. ಮಗುವಿನ ಭವಿಷ್ಯದ ಸುತ್ತ ದಂಪತಿಗಳ ಕನಸಿನ ಓಟ. ಸ್ವಾಮಿಯ ಬಡತನದ ಬಾಲ್ಯದಲ್ಲಿ [...]
ಕನಸುಗಳನ್ನು ಕಾಣದವರು ಯಾರಾದರು ಈ ಭೂಮಿಯ ಮೇಲೆ ಇದ್ದಾರೆಯೇ? ಅರಿವು ಮೂಡಿದಂದಿನಿಂದ ಅರಿವಿಲ್ಲದ ಲೋಕಕ್ಕೆ ತೆರಳುವ ತನಕ ಕನಸುಗಳ ಕಟ್ಟಿ, ಕಟ್ಟಿದ ಕನಸುಗಳ ಬೆನ್ನಟ್ಟಿ -ಬೇಟೆಯಾಡುತ, ಕೈಗೂಡಿದರೆ ಹಿಗ್ಗುತ, ಕೈ ಜಾರಿದರೂ ಮುನ್ನುಗ್ಗುತ ಸಾಗುವುದೀ ಸ್ವಪ್ನಲೋಕದ ಪಯಣ. ಕನಸುಗಳು ಕೈಗೂಡದೆ ಬದುಕಲ್ಲಿ ಬೇಸರ ಮೂಡಿ ಆಶಾವಾದದ ಸೆಲೆ ಇಂಗಿ ಹೋದಾಗ, ಹೊಸ ಹೊಸ ಕನಸುಗಳು ನವ ಚೈತನ್ಯವ ಮೂಡಿಸಿ ಜೀವನೋತ್ಸಾಹದ ಚಿಲುಮೆಯನ್ನು ಚಿಮ್ಮಿಸುತ್ತವೆ. ಬದುಕೆಂಬ ಕ್ಯಾನ್‌ವಾಸ್ ಮೇಲೆ ಬಣ್ಣಬಣ್ಣದ ಕನಸುಗಳು ಮೂಡಿಸುವ ಚಿತ್ತಾರಗಳು ಭವಿಷ್ಯದ ಬಗೆಗೆ ಉತ್ಸಾಹ [...]
