ಇತ್ತೀಚೆಗೆ ಒಂದು ಒಳ್ಳೆಯ ಪುಸ್ತಕ ಓದಲು ಸಿಕ್ಕಿತ್ತು. ಪೇರೂರು ಜಾರು ಅವರು ಬರೆದಿರುವ ‘ನಿಜಗನ್ನಡ’ ಅನ್ನುವ ಕೃತಿ. ನಮ್ಮ ಬರಹಗಳಲ್ಲಿ ನಮಗೆ ಗೊತ್ತಿಲ್ಲದ ಹಾಗೆ ಎಷ್ಟು ತಪ್ಪುಗಳು ನುಸುಳಿರುತ್ತವೆ (ಬೆರಳಚ್ಚು ದೋಷಗಳನ್ನು ಹೊರತುಪಡಿಸಿ) ಅನ್ನುವುದು ಇದನ್ನು ಓದಿದ ಮೇಲೆ ಗೊತ್ತಾಯ್ತು. ಯಾವ ಶಬ್ದ ಸರಿ, ಅದು ಯಾಕೆ ಸರಿ, ಯಾವ ಪ್ರಭಾವದಿಂದ ಅಥವ ಕಾರಣದಿಂದ ತಪ್ಪಾದ ರೂಪ ಹುಟ್ಟಿಕೊಂಡಿದೆ… ಇವೆಲ್ಲವನ್ನು ಸೂಕ್ತ ಉದಾಹರಣೆಗಳೊಂದಿಗೆ ಸೊಗಸಾಗಿ ತಿಳಿಸಿದ್ದಾರೆ. ಕನ್ನಡದಲ್ಲಿ ಬರೆಯುವವರೆಲ್ಲರೂ ಅಗತ್ಯವಾಗಿ ಓದಲೇಬೇಕಾದ ಪುಸ್ತಕ. ಆದರೆ ಇದು ಪ್ರಕಟವಾಗಿ [...]
Posts Tagged ‘ಕನ್ನಡ’
ನಾವು ಎಷ್ಟು ತಪ್ಪು ಮಾಡುತ್ತೇವೆ ನೋಡಿ….!
Posted: September 22, 2008 in ಪುಸ್ತಕಗಳು, ಭಾಷೆTags: ಕನ್ನಡ, ನಿಜಗನ್ನಡ, ಪದ ಪ್ರಯೋಗ, ಪೇರೂರು ಜಾರು
5
ಕುಂದಾಪುರ ಕನ್ನಡಕ್ಕೆ ಅಂದೇಳಿಯೇ ಶುರು ಮಾಡಿದ್ ಈ ಹೊಸ ಬ್ಲಾಗ್ ಒಂದ್ಸಲ ಕಂಡ್ಕಂಡ್ ಬಪ್ರ್ಯೆಲಾ…
Posted: May 11, 2008 in ಕುಂದಾಪ್ರ ಕನ್ನಡTags: ಕನ್ನಡ, ಕುಂದಗನ್ನಡ, ಕುಂದಾಪುರ ಕನ್ನಡ, ಕುಂದಾಪ್ರ ಕನ್ನಡ, kannada, kundagannada, kundapra kannada, kundapur kannada
ಕುಂದಾಪ್ರ ಕನ್ನಡದಗೆ ಒಂದು ಬ್ಲಾಗ್ ಮಾಡ್ಕ್ ಮಾಡ್ಕ್ ಅಂದೇಳಿ ಸುಮಾರ್ ದಿವ್ಸದಿಂದ ಎಣ್ಸಕಂಡಿದ್ದೆ. ಅದನ್ನ್ ಇವತ್ ಶುರು ಮಾಡಿದೆ…ಒಂದ್ಸಲ ಕಾಣಿ ಬನ್ನಿ http://kundaaprakannada.wordpress.com
ನಾವು ಇರುವುದೇ ಹಾಗೆ. ಕಾರ್ಗಿಲ್ ಯುದ್ಧಕಾಲದಲ್ಲಿ ಜಾಗೃತಗೊಂಡ ದೇಶಪ್ರೇಮದ ಕಾವು ಯುದ್ಧ ಮುಗಿದ ಮರುಕ್ಷಣವೇ ಗೋರ್ಕಲ್ಲ ಮೇಲಿನ ಮಳೆಯ ನೀರಂತೆ ಆವಿಯಾಗಿದೆ.. ಆರಿಹೋಗಿದೆ. ಕಾವೇರಿದ ಕಾವೇರಿ ವಿವಾದದ ಬಿಸಿ ಬೇಸಿಗೆ ಮುಗಿದ ಮೇಲೆ ಯಾರ ನೆನಪಿಗೂ ಬಾರದೆ ತಣ್ಣಗಾಗುತ್ತದೆ. ಇನ್ನು ಕನ್ನಡಾಭಿಮಾನ ಅನ್ನೋದು ಬರೀ ನವೆಂಬರ್ ತಿಂಗಳ ಉತ್ಸವಮೂರ್ತಿ… ಮಿಕ್ಕಂತೆ ಇಂಗ್ಲೀಷ್, ಕಂಗ್ಲೀಷ್, ಹಿಂಗ್ಲೀಷ್, ಎನ್ನಡಾ, ಎಕ್ಕಡಾ ವರ್ಷಪೂರ್ತಿ. ನಮ್ಮ ನಾಡು-ನುಡಿ, ನೆಲ-ಜಲ ಕುರಿತು ಇರುವ ಅಭಿಮಾನ ತೋರಿಸಲೂ ಯಾಕಿಷ್ಟು ಜಿಪುಣತನ? ನಾವು ಹುಟ್ಟಿ-ಬೆಳೆದು ಬದುಕುತ್ತಿರುವ ನಾಡಿನ [...]
