ಈ ಮೂರು ಮತ್ತೊಂದು ಹನಿಗಳು ಇವತ್ತಿನ ವಿಜಯಕರ್ನಾಟಕದ ಸಿಂಪ್ಲಿಸಿಟಿ ಪುಟದಲ್ಲಿ ಪ್ರಕಟವಾಗಿವೆ ———————————————————————- ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಬದುಕಿರಲಿ ಬಿಡು ಗೆಳತಿ ಸುಳ್ಳು ಸಮರ್ಥನೆಗಳ ನೆಪದಲಿ ಅವುಗಳ ಉತ್ತರ ಕ್ರಿಯೆ ಆಗೋದು ಬೇಡ ———————————- ಎಷ್ಟು ಕೂಡಿ ಕಳೆದರೂ ತಾಳೆಯಾಗದ ಈ ಗಣಿತವೇ ಹೀಗೆ, ಎಷ್ಟು ಕೂಡಿ ಕಲೆತರೂ ಅರ್ಥವಾಗದ ವನಿತೆಯ ಹಾಗೆ !! ———————————- ಪರೀಕ್ಷೆಯಲಿ ಬಿಟ್ಟ ಸ್ಥಳ ತುಂಬೋದು ಎಷ್ಟು ಸುಲಭ ಅನ್ನಿಸುತ್ತಿತ್ತು ಅದರ ಕಷ್ಟ ಗೊತ್ತಾಗಿದ್ದು ನೀ ಬಿಟ್ಟು ಹೋದ ಮೇಲೇನೇ !! ————————- ಬಾಳಿನ ಪುಟದ ಸಾಲಿನಲಿ [...]
Posts Tagged ‘ಕವನಗಳು’
ಎಷ್ಟು ಕೂಡಿ ಕಲೆತರೂ..ಅರ್ಥವಾಗದ ವನಿತೆಯ ಹಾಗೆ !!!
Posted: June 24, 2010 in ಆಪ್ತಸ್ವರ, ಕವನ, ಕವಿತೆ, ನೆನಪುಗಳ ಮಾತು ಮಧುರ.., ಮನಸಿನ ಹಾಡು, ಹನಿ ಹನಿ, ಹಾಗೆ ಸುಮ್ಮನೆTags: ಕವನಗಳು, ಕವಿತೆ, ಮನಸಿನ ಹಾಡು, ಹನಿ ಹನಿ, ಹಾಗೆ ಸುಮ್ಮನೆ
ಹನಿ ಹನಿ ಕೂಡಿ ಈ ಕಣ್ಣೇ ಹಳ್ಳ …!!
Posted: October 8, 2009 in ಆಪ್ತಸ್ವರ, ನೆನಪುಗಳ ಮಾತು ಮಧುರ.., ಭಾವ ಭಿತ್ತಿ, ಮನಸಿನ ಹಾಡು, ಹನಿ ಹನಿ, ಹಾಗೆ ಸುಮ್ಮನೆTags: ಕವನಗಳು, ಹನಿ ಹನಿ
ಮೊದಲ 5 ಹನಿಗಳು ಇವತ್ತಿನ ವಿ.ಕೆ. ಯ ಸಿಂಪ್ಲಿಸಿಟಿಯ ಅಂಗಳದಲ್ಲಿ ಬಿದ್ದಿವೆ… ಹಿಂದಿರುಗಿ ನೀ ಬರಲಾರೆಯೆಂದು ನನಗೂ ಗೊತ್ತಿದೆ ಗೆಳತಿ ಹಿಂದುರುಗಿ ನೋಡಿಬಿಡು ಸಾಕು ಕಣ್ತುಂಬಿಕೊಳ್ಳುವೆ ಒಂದು ಸರ್ತಿ ———————————— ಪ್ರೀತಿ ಹಣತೆಗೆ ನೀನೆ ಎಣ್ಣೆ ನಾ ಉರಿಯುವ ಬತ್ತಿ, ಎಣ್ಣೆ ತೀರಿದರೂ ಉರಿಯುತಿದೆ ನನ್ನೀ ದೇಹವೇ ಹೊತ್ತಿ… ಅದೇ ಕಣೇ ಈ ಪ್ರೀತಿಯ ಶಕ್ತಿ ———————————- ಮಾತೇ ಇಲ್ಲದೆ ಮುಗಿದೇ ಹೋಯ್ತು ನಮ್ಮ ಪ್ರೀತಿ ನಾಟಕದ ಏಕಾಂಕ, ತೆರೆ ಸರಿಯುವ ಮೊದಲೇ ತೆರೆ ಬಿತ್ತು ಉಳಿದಿದ್ದು ಬರೀ ಏಕಾಂತ [...]
ಹುಡುಕಾಟ…
Posted: June 2, 2008 in ಮನಸಿನ ಹಾಡುTags: ಕನ್ನಡ ಕವನ, ಕವನ, ಕವನಗಳು, kannada poem, kavanagalu, poem
ಕಳೆದು ಹೋಗಿದೆ ಕನಸೊಂದು ಹುಡುಕಿಕೊಡುವೆಯಾ ಹಳೆಯ ನೆನಪುಗಳ ಹಾಳೆಯ ನಡುವೆಲ್ಲೋ.. ಮರೆತು ಹೋಗಿದೆ ರಾಗವೊಂದು ನುಡಿಸುವೆಯಾ ಅನುರಾಗ ಪಲ್ಲವಿಯ ಚರಣಗಳ ನಡುವೆಲ್ಲೋ… ಮೂಕವಾಗಿದೆ ಮಾತು ದನಿಗೂಡಿಸುವೆಯಾ ಏಕಾಂತ ಮೌನದ ಮುಸುಕಿನ ಅಡಿಯೆಲ್ಲೋ… ಬಾಡಿಹೋಗಿದೆ ವನಸುಮವೊಂದು ಅರಳಿಸುವೆಯಾ ನೆನಪುಗಳ ಕಾನನದ ನಟ್ಟ ನಡುವೆಯೆಲ್ಲೋ… ಅಳಿದು ಹೋಗಿದೆ ನಂಬಿಕೆ ಉಳಿಸಿಕೊಡುವೆಯಾ ಮುರಿದ ಸಂಬಂಧ ಸಂಕೋಲೆಯ ಕೊಂಡಿಯಲೆಲ್ಲೋ… ಆತ್ಮೀಯತೆಯ ಅರ್ಥ ಕಲಿಸಿಕೊಡುವೆಯಾ ಕೃತಕ ನಗುವಿನ [...]
