Posts Tagged ‘ಕವನ’

ನಿನ್ನೆಯ ನೆನಪುಗಳ ಗಲ್ಲಿಗಳಲಿ ನಿನ್ನಯ ನಿರೀಕ್ಷೆಗಳ ನಾಳೆಗಳಲಿ ಸರಿದು ಹೋಗುತಿದೆ ಸದ್ದೇ ಇಲ್ಲದೆ… ನಿಲ್ಲದೇ ನೀ-ನಿಲ್ಲದೇ ವರ್ತಮಾನ -+-+-+-+-+-+-+-+-+-+-+-+-+-+-+- ಹಿಡಿಯಷ್ಟು ಪ್ರೀತಿ ಬಯಸಿ ಕೈಚಾಚಿದೆ ನಿನ್ನೆದುರು ಸಖಿ… ಬೊಗಸೆಯಷ್ಟು ಕಂಬನಿ ತುಂಬಿಸಿ ನಿನ್ನ ಲೋಕದಿ ನೀನು ಸುಖಿ… -+-+-+-+-+-+-+-+-+-+-+-+-+-+-+- ಹೇಳದೆ ಕೇಳದೆ ಎದೆಯ ಕೊಳದೊಳಗಿಳಿದು ಜೊತೆಯಲೇ ನನ್ನನೂ ಪ್ರೀತಿಯಾಳಕ್ಕೆಳೆದು ನಡುನೀರಲಿ ನನ್ನ ಬಿಟ್ಟು ಹೋದ ನೀರೆ ನಿನ್ನ ಪ್ರೀತಿ ಬಯಸಿದ ನನಗೆ ಮುಳುಗು ನೀರೆ? -+-+-+-+-+-+-+-+-+-+-+-+-+-+-+-

ನನ್ನೆದೆಯ ಮಹಲಿನ ಮಜಲುಗಳ ತುಂಬೆಲ್ಲಾ ನಿನ್ನ ನೆನಪುಗಳ ಕಾಲ್ಗೆಜ್ಜೆ ದನಿಯ ಗಝಲು ———————– ಕನಸು ಸಾಯುವುದಿಲ್ಲ ಗೆಳತಿ… ಕನವರಿಕೆಗಳಾಗಿ ಕಾಡುತಾವೆ ನೆನಪುಗಳ ಗವಿಯೊಳಗೆ ಪಳೆಯುಳಿಕೆಯಂತುಳಿದು

ಎಡೆಬಿಡದೆ ಸುರಿವ ಮಳೆಯ ಕಂಡರೇಕೋ ಭೀತಿ… ಹೀಗೆಯೇ  ಸುರಿದಿತ್ತಲ್ಲ ಧಾರೆಯಾಗಿ ನಿನ್ನ ಪ್ರೀತಿ… ಒಮ್ಮೆಲೇ ಸುರಿದು ಬರಿದಾದ ನಂತರ… ಬರಡಾದೀತಲ್ಲವೆ ಈ ಭೂಮಿಯೂ ನನ್ ತರ !!

ನನ್ನ ಉಸಿರುಸಿರಲೂ ನೀನಿರುವೆ ಅಂತೇನಿಲ್ಲ ನಿಟ್ಟುಸಿರಲಿ ನೀನಿರೋದು ನಿಂಗೇ ಗೊತ್ತಲ್ಲ… ——————————— ಹುಟ್ಟಿ ಸಾಯೋ ನೂರಾರು ಸಾಲುಗಳ ಬಿಟ್ಟು ಬಿಡು, ನಡುವಿನ ನಿಟ್ಟುಸಿರಿನಂತಹ ಮೌನಕ್ಕೆ ಕಿವಿಗೊಡು, ಅಂತಾದರೂ ನಿನ್ನ ಮುಟ್ಟಿ ತಟ್ಟೀತು.. ಹಾಡಾಗದೆ ಎದೆಯೊಳಗುಳಿದ ಪುಟ್ಟ ಸಾಲು ————————————- ಪ್ರೀತಿಯ ಮುಗಿಲ ಸಾಲು ಕರಗಿ ಮಳೆಯಾಗಲೇ ಇಲ್ಲ.. ಪದಗಳ ಜೋಡಿಸಿ ಬರೆದ ಸಾಲು ಕವಿತೆಯಾಗಲೇ ಇಲ್ಲ.. ಮುಗಿಲು ಇನ್ನೆಲ್ಲೋ ಮಳೆಯಾಗಿರಬೇಕು.. ಕವಿತೆ ಕಣ್ಣಲ್ಲೇ ಹೊಳೆಯಾಗಿರಬೇಕು ———————————————— ನಿನ್ನ ನೆನಪೇ ಬರದ ಜಾಗಕ್ಕೆ ಹೋಗೋಣವೆಂದು ಹೊರಟಿರುವೆ, ಜೊತೆಗೆ ನೀನೂ [...]

ಪ್ರಶಾಂತ ಕೊಳದ ಮೇಲೆ ಕಲ್ಲು ಚಿಮ್ಮಿಸಿ ಅದು ಕುಪ್ಪಳಿಸುವುದ ಕಂಡು ಖುಷಿಪಡುವವರಿಗೆ ಕೇಳಿಸಿದರೂ ಅರ್ಥವಾದೀತೇ…. ಕೊಳದ ಆಂತರ್ಯದಲಿ ಉದ್ಭವಿಸುವ ತಳಮಳಗಳು… ಅಲೆಅಲೆಯಾಗಿ ದಡಕ್ಕಪ್ಪಳಿಸುವ ನಿಟ್ಟುಸಿರಿನಂತಹ ನಿರರ್ಥಕ ಸದ್ದುಗಳು…