Posts Tagged ‘ಕವಿತೆ’

ನಿನ್ನೆಯ ನೆನಪುಗಳ ಗಲ್ಲಿಗಳಲಿ ನಿನ್ನಯ ನಿರೀಕ್ಷೆಗಳ ನಾಳೆಗಳಲಿ ಸರಿದು ಹೋಗುತಿದೆ ಸದ್ದೇ ಇಲ್ಲದೆ… ನಿಲ್ಲದೇ ನೀ-ನಿಲ್ಲದೇ ವರ್ತಮಾನ -+-+-+-+-+-+-+-+-+-+-+-+-+-+-+- ಹಿಡಿಯಷ್ಟು ಪ್ರೀತಿ ಬಯಸಿ ಕೈಚಾಚಿದೆ ನಿನ್ನೆದುರು ಸಖಿ… ಬೊಗಸೆಯಷ್ಟು ಕಂಬನಿ ತುಂಬಿಸಿ ನಿನ್ನ ಲೋಕದಿ ನೀನು ಸುಖಿ… -+-+-+-+-+-+-+-+-+-+-+-+-+-+-+- ಹೇಳದೆ ಕೇಳದೆ ಎದೆಯ ಕೊಳದೊಳಗಿಳಿದು ಜೊತೆಯಲೇ ನನ್ನನೂ ಪ್ರೀತಿಯಾಳಕ್ಕೆಳೆದು ನಡುನೀರಲಿ ನನ್ನ ಬಿಟ್ಟು ಹೋದ ನೀರೆ ನಿನ್ನ ಪ್ರೀತಿ ಬಯಸಿದ ನನಗೆ ಮುಳುಗು ನೀರೆ? -+-+-+-+-+-+-+-+-+-+-+-+-+-+-+-

ನನ್ನೆದೆಯ ಮಹಲಿನ ಮಜಲುಗಳ ತುಂಬೆಲ್ಲಾ ನಿನ್ನ ನೆನಪುಗಳ ಕಾಲ್ಗೆಜ್ಜೆ ದನಿಯ ಗಝಲು ———————– ಕನಸು ಸಾಯುವುದಿಲ್ಲ ಗೆಳತಿ… ಕನವರಿಕೆಗಳಾಗಿ ಕಾಡುತಾವೆ ನೆನಪುಗಳ ಗವಿಯೊಳಗೆ ಪಳೆಯುಳಿಕೆಯಂತುಳಿದು

ಈ ಮೂರು ಮತ್ತೊಂದು ಹನಿಗಳು ಇವತ್ತಿನ ವಿಜಯಕರ್ನಾಟಕದ ಸಿಂಪ್ಲಿಸಿಟಿ ಪುಟದಲ್ಲಿ ಪ್ರಕಟವಾಗಿವೆ ———————————————————————- ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಬದುಕಿರಲಿ ಬಿಡು ಗೆಳತಿ ಸುಳ್ಳು ಸಮರ್ಥನೆಗಳ ನೆಪದಲಿ ಅವುಗಳ ಉತ್ತರ ಕ್ರಿಯೆ ಆಗೋದು ಬೇಡ ———————————- ಎಷ್ಟು ಕೂಡಿ ಕಳೆದರೂ ತಾಳೆಯಾಗದ ಈ ಗಣಿತವೇ ಹೀಗೆ, ಎಷ್ಟು ಕೂಡಿ ಕಲೆತರೂ ಅರ್ಥವಾಗದ ವನಿತೆಯ ಹಾಗೆ !! ———————————- ಪರೀಕ್ಷೆಯಲಿ ಬಿಟ್ಟ ಸ್ಥಳ ತುಂಬೋದು ಎಷ್ಟು ಸುಲಭ ಅನ್ನಿಸುತ್ತಿತ್ತು ಅದರ ಕಷ್ಟ ಗೊತ್ತಾಗಿದ್ದು ನೀ ಬಿಟ್ಟು ಹೋದ ಮೇಲೇನೇ !! ————————- ಬಾಳಿನ ಪುಟದ ಸಾಲಿನಲಿ [...]

ಮನಸಿನ ಪುಟಗಳ ನಡುವೆ ಖಾಲಿ ಹಾಳೆಗಳಿವೆ ಕೆಲವು.. ನೀ ಬರೆಯದೇ ಹೋದ ಒಲವಿನ ಸಾಲುಗಳವು… ———————————— ನಿನ್ನ ನೆನಪುಗಳಿಂದ ನನ್ನಲಿ ಮೂಡಿದ ಸಂಚಲನಗಳ ಸಂಕಲಿಸಿ ಕವಿತೆ ಎಂದು ಹೆಸರಿಟ್ಟೆ… ನಿಟ್ಟುಸಿರಿಟ್ಟೆ !! ————————————- ಈ ಹನಿಗಳೆಲ್ಲ ನನ್ನವಲ್ಲ ಗೆಳತಿ, ನೀನೇ ಬರೆಸಿದ್ದು…ಮತ್ತು ನೀನೇ ಬರಿಸಿದ್ದು                              ನಾನೋ ಬರಿ ನೆಪಮಾತ್ರದವ ಬರೆದಿದ್ದು ಮತ್ತು ಭರಿಸಿದ್ದು !! ———————————— ನಾನೇ ಬಯಸಿ ಪಡೆದರೆ ಅದು ದಿವ್ಯ ಏಕಾಂತ… ನೀನಿಲ್ಲದ ಒಂಟಿತನದಲಿ ಅನಿಸೋದು ಈ ಬದುಕು ಏಕಂತ? ———————————— ಬರೆದು ಬರಿದಾಗಿಹೆನು [...]

ನನ್ನ ಉಸಿರುಸಿರಲೂ ನೀನಿರುವೆ ಅಂತೇನಿಲ್ಲ ನಿಟ್ಟುಸಿರಲಿ ನೀನಿರೋದು ನಿಂಗೇ ಗೊತ್ತಲ್ಲ… ——————————— ಹುಟ್ಟಿ ಸಾಯೋ ನೂರಾರು ಸಾಲುಗಳ ಬಿಟ್ಟು ಬಿಡು, ನಡುವಿನ ನಿಟ್ಟುಸಿರಿನಂತಹ ಮೌನಕ್ಕೆ ಕಿವಿಗೊಡು, ಅಂತಾದರೂ ನಿನ್ನ ಮುಟ್ಟಿ ತಟ್ಟೀತು.. ಹಾಡಾಗದೆ ಎದೆಯೊಳಗುಳಿದ ಪುಟ್ಟ ಸಾಲು ————————————- ಪ್ರೀತಿಯ ಮುಗಿಲ ಸಾಲು ಕರಗಿ ಮಳೆಯಾಗಲೇ ಇಲ್ಲ.. ಪದಗಳ ಜೋಡಿಸಿ ಬರೆದ ಸಾಲು ಕವಿತೆಯಾಗಲೇ ಇಲ್ಲ.. ಮುಗಿಲು ಇನ್ನೆಲ್ಲೋ ಮಳೆಯಾಗಿರಬೇಕು.. ಕವಿತೆ ಕಣ್ಣಲ್ಲೇ ಹೊಳೆಯಾಗಿರಬೇಕು ———————————————— ನಿನ್ನ ನೆನಪೇ ಬರದ ಜಾಗಕ್ಕೆ ಹೋಗೋಣವೆಂದು ಹೊರಟಿರುವೆ, ಜೊತೆಗೆ ನೀನೂ [...]