Posts Tagged ‘ಕುಂದಾಪ್ರ’

ಹೀಗೊಂದು ಮಾತು ನಮ್ ಕುಂದಾಪ್ರ ಕಡೆ ಇದೆ – “ಕಲ್ತ್‌ದ್ ಹೆಚ್ಚಾಯ್ತ್ ಕಾಲ್ ಮೇಲಾಯ್ತ್…ಗಾಳಿ ಬರ್ಕ್ ಮನಿಗ್ ಹೋಯ್ಕ್”. ಇದರ ಮೊದಲ ಭಾಗ ನೀವೂ ಕೇಳಿರಬಹುದು. ಆದರೆ ಈ ಮಾತಿಗೂ ಹಿನ್ನೆಲೆಯಾಗಿ ಒಂದು ಕತೆಯೋ ಕಟ್ಟು ಕತೆಯೋ ಇರಬೇಕಲ್ವೇ? ಈ ಮಾತನ್ನು ಯಾವ ಅರ್ಥದಲ್ಲಿ ಉಪಯೋಗಿಸುತ್ತಾರೆ ಅಂತ ಗೊತ್ತಿದ್ದರೂ ಕೂಡಾ ಇದರ ಹಿಂದಿನ ಕತೆ ಗೊತ್ತಿರಲಿಲ್ಲ. ಮೊನ್ನೆ ಒಂದು ಹಾಸ್ಯ ಯಕ್ಷಗಾನ ಪ್ರಸಂಗ ಕೇಳ್ತಾ ಇದ್ದೆ. ಅದರಲ್ಲಿನ ಪಾತ್ರಧಾರಿಯೊಬ್ಬರು ಸಂದರ್ಭೋಚಿತವಾಗಿ ಈ ಮಾತನ್ನು ಬಳಸಿದಾಗ ಅದರ ಹಿನ್ನೆಲೆಯನ್ನು [...]

ನಾನು ಚಿಕ್ಕವನಿದ್ದಾಗ ಕೇಳಿದ ಒಂದು ಪದ್ಯ ಇದು. ಇದು ಬಾಯಿಂದ ಬಾಯಿಗೆ ಹರಿದು ಬರುವಾಗ ಇದರ ರೂಪದಲ್ಲಿ ಅನೇಕ ಬದಲಾವಣೆಗಳಾಗಿರಬಹುದು. ಚಿಕ್ಕ ಮಕ್ಕಳಲ್ಲಿ ಕುತೂಹಲ, ಆಸಕ್ತಿ ಕೆರಳಿಸುವ, ನೆನಪಿನ ಶಕ್ತಿಯನ್ನು ಉತ್ತಮ ಪಡಿಸಿಕೊಳ್ಳಲು ನೆರವಾಗುವ ಈ ಪದ್ಯ ಯಾರು ಸೃಷ್ಟಿಸಿದ್ದೋ ಗೊತ್ತಿಲ್ಲ. ನನಗೆ ಚಿಕ್ಕಂದಿನಲ್ಲಿ ಕೇಳಿದ್ದು ಇನ್ನೂ ಬಾಯಿಪಾಠ ಇದೆ.   ಈ ಪದ್ಯದಲ್ಲಿ ಸಿಂಡಿಕೇಟ್ ಬ್ಯಾಂಕು ಬರುತ್ತೆ. ಅದ್ಯಾವುದೋ ಕಮಲಾ ಸರ್ಕಸ್ ಅನ್ನೋ ಸರ್ಕಸ್ ಬರುತ್ತೆ. ಹಾಗೆಯೇ ಬಡ್ಡಿ ಕಮಲ ಅನ್ನೋ ಹೆಂಗಸಿನ ಪ್ರಸ್ತಾಪವೂ ಬರುತ್ತೆ. [...]

ನಾವೆಲ್ಲ ಚಿಕ್ಕವರಾಗಿದ್ದಾಗ ಅನೇಕ ಕಥೆ, ಗಾದೆ ಒಗಟು ಇವನ್ನೆಲ್ಲಾ ಕೇಳಿಯೇ ಇರುತ್ತೇವೆ. ಅವುಗಳಲ್ಲಿ ಕೆಲವು ಎಷ್ಟು ಕಾಲವಾದರೂ ಹಸಿ ಗೋಡೆಯಲ್ಲಿ ನೆಟ್ಟ ಹರಳಿನಂತೆ ಗಟ್ಟಿಯಾಗಿ ಮನಸ್ಸಿನಲ್ಲಿ ಅಂಟಿಕೊಂಡಿರುತ್ತವೆ. ಅಂಥಾ ಒಂದು ನೆನಪು ಈ ಸುಕ್ರನ ಕಥೆ. ನೀವು ಕುಂದಾಪ್ರ ಕಡೆಯವರಾಗಿದ್ರೆ ಕಂಡಿತಾ ಈ ಕಥೆ ಕೇಳೇ ಇರುತ್ತೀರಿ. ಇಲ್ಲವಾದಲ್ಲಿ ಕೂಡಾ ನಿಮ್ಮ ಕಡೆಯದೇ ಆದ ಇದಕ್ಕೆ ಹತ್ತಿರವಾದ ಕಥೆಯನ್ನಾದ್ರೂ ಕೇಳಿರಬಹುದು.   ಕಥೆ ಏನಪ್ಪಾ ಅಂದ್ರೆ …   “ಸುಳ್ ಹೇಳೋ ಸುಕ್ರಾ ಅಂದ್ರೆ.. ವಾಟಿ ಅಂಡಿಯೊಳ್ಗೆ [...]