Posts Tagged ‘ದೇವರು’

ಯಾಕೆ ಬೇಕಿತ್ತು ಈ ಅವತಾರಗಳೆಲ್ಲಾ ದುಷ್ಟರು-ದುರುಳರು ಹುಟ್ಟಿ ಬೆಳೆದು, ಅಮಾಯಕ ಜನಗಳ ಮೆಟ್ಟಿ ತುಳಿದು, ಅಟ್ಟಹಾಸಗೈದು ಮೆರೆದಾಡಿದ ಮೇಲೆ   ಅವತಾರಗಳ ಹೆಸರಲಿ ಜನ್ಮಪಡೆದು, ಅದೆಷ್ಟೋ ಕಾಲಗಳ ತನಕ ತಡೆದು, ದುಷ್ಟರೊಡನೆ ಕಾದಾಟವು ನಡೆದು ಯುದ್ಧದಲಿ ಅಮಾಯಕರ ನೆತ್ತರು ಹರಿದು   ಬೇಕಿತ್ತೆ ಈ ಅವತಾರಗಳ ರಗಳೆಯೆಲ್ಲಾ..? ಸರ್ವಶಕ್ತ ಅವನು ಅನ್ನುವರಲ್ಲ ದುಷ್ಟರೇ ಹುಟ್ಟದಂತೆ ಮಾಡಿಬಿಡಬಹುದಲ್ಲ ಆಗ ಕಾಯುವ ಕೊಲ್ಲುವ ರಗಳೆಯೇ ಇಲ್ಲ.   ಹಾಗೆನಾದರೂ ಆದರೆ ಅವನ ನೆನೆಯುವವರೇ ಇಲ್ಲವಾಗಿ ಭಗವಂತನ ಕುರಿತು ಜನಕೆ ಆದರ [...]

ದೇವರು ಮನುಷ್ಯನನ್ನು ಸೃಷ್ಟಿಸಿದನಾ ಇಲ್ಲಾ ಮನುಷ್ಯನೇ ದೇವರನ್ನು ಸೃಷ್ಟಿಸಿದನಾ? ಈ ಕುರಿತು ನಡೆಯುವ ವಾದ-ಪ್ರತಿವಾದ, ಚರ್ಚೆ, ಜಿಜ್ಞಾಸೆಗಳಿಗೆ ಕೊನೆ ಮೊದಲೆಂಬುದಿಲ್ಲ. ನಾವು ನಂಬಿದ್ದೇ ಸರಿ ಅನ್ನುವ ಎರಡೂ ಪಂಗಡದವರ ಸಂಖ್ಯೆಗಿಂತಲೂ ಯಾವುದು ಸರಿ ಅನ್ನೋ ಗೊಂದಲದಲ್ಲಿರುವವರೇ ಜಾಸ್ತಿ. ನಾವು ಹುಟ್ಟಿ ಬೆಳೆದ ಪರಿಸರ, ನಮ್ಮ ಹಿರಿಯರ ನಂಬಿಕೆಗಳ ಫಲವಾಗಿ ಮೂಡಿದ ದೇವರ ಕುರಿತು ನಮ್ಮ ಅಭಿಪ್ರಾಯ, ನಂಬಿಕೆಗಳು ಕಾಲಕಳೆದಂತೆಲ್ಲಾ ನಮ್ಮ ಅರಿವು, ಚಿಂತನೆಯು ವ್ಯಾಪ್ತಿ ವಿಸ್ತರಿಸಿದೆಂತೆಲ್ಲಾ ಬದಲಾಗಬಹುದು. ದೇವರ ಕುರಿತು ನನ್ನ ಚಿಂತನೆಗೆ ಒಂದು ರೂಪು ಕೊಟ್ಟ [...]

ಇದೇನಪ್ಪಾ… ಒಂದಕ್ಕೊಂದು ಅರ್ಥಾರ್ಥ ಸಂಬಂಧವಿಲ್ಲದ ತಲೆಬರಹ; ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಏನಯ್ಯಾ ಸಂಬಂಧ ಅಂದ್ಕೋತಿದ್ದೀರಾ? ಈಗ ಟಿ.ವಿ. ಸೀರಿಯಲ್ಲುಗಳು ಒಂದೊಂದಾಗಿ ದೇವರಿಗೆ ಇರುವ ಬಿರುದು, ಬಾವಲಿ, ಮಾನ್ಯತೆಗಳನ್ನೆಲ್ಲಾ ಕಿತ್ತುಕೊಂಡು ದೇವರ ಸ್ಥಾನಕ್ಕೇ ಸಂಚಕಾರ ತಂದಿರುವ ವಿಷಯ ನಿಮಗೆ ಗೊತ್ತಿಲ್ವಾ? ಹಾಗಿದ್ರೆ ಓದಿ ನೋಡಿ.   ಮೊಟ್ಟ ಮೊದಲನೆಯದಾಗಿ ‘ದೇವನೊಬ್ಬ ನಾಮ ಹಲವು’ ಅನ್ನುವ ಮಾತಿದೆಯಷ್ಟೇ? ಈಗಿನ ಧಾರಾವಾಹಿಗಳನ್ನು ಗಮನಿಸಿ ನೋಡಿ. ಇರುವ ಹತ್ತಾರು-ನೂರಾರು ವಾಹಿನಿಗಳು ತಮ್ಮ ‘ಪ್ರೈಮ್ ಟೈಮ್‌’ನಲ್ಲಿ ವಿವಿಧ ಆಕರ್ಷಕ ಹೆಸರುಗಳ ಧಾರಾವಾಹಿಗಳನ್ನು ಬಿತ್ತರಿಸುತ್ತಿದ್ದರೂ ಕೂಡಾ, [...]