ಕಂಚಿನ ಕಂಠ ಅಂದಾಗಲೆಲ್ಲ ನಮ್ಮ ಕಣ್ಮುಂದೆ ಬರುವುದು ದಿ| ಗುಂಡ್ಮಿ ಕಾಳಿಂಗ ನಾವುಡರ ಚಿತ್ರ. ಅವರಿದ್ದಷ್ಟು ಕಾಲ ಭಾಗವತಿಕೆಗೆ ಪರ್ಯಾಯ ಪದವೇ ಕಾಳಿಂಗ ನಾವುಡ ಅನ್ನುವಷ್ಟರ ಮಟ್ಟಿಗೆ ಯಕ್ಷರಂಗದಲ್ಲಿ ಏಕಮೇವಾದ್ವಿತೀಯರಾಗಿ ಮೆರೆದವರವರು. ಇಂದಿಗೂ ಅವರ ಹಾಡುಗಾರಿಕೆಯ ಧ್ವನಿಮುದ್ರಿಕೆಯನ್ನು ಕೇಳಿದಾಗ ಆ ಸ್ವರಾನುಭೂತಿಯ ಮೋಡಿಯಲ್ಲಿ ಮೈಮರೆಯುವ ಲಕ್ಷಾಂತರ ಯಕ್ಷಪ್ರೇಮಿಗಳ ಮನಸ್ಸಿನಲ್ಲಿ ಅವರ ಕಂಚಿನ ಕಂಠದ ನೆನಪು ಸದಾ ಹಸಿರು. ಅಂತಹ ಕಾಳಿಂಗ ನಾವುಡರು ನಿರ್ಮಿಸಿಹೋದ ಪರಂಪರೆಯ ಜಾಡಿನಲ್ಲಿ ಹೆಜ್ಜೆಹಾಕುತ್ತಾ ಪ್ರವರ್ಧಮಾನಕ್ಕೆ ಬರುತ್ತಿರುವ ಭಾಗವತರೊಬ್ಬರು ಕಾಳಿಂಗ ನಾವುಡರ ಸ್ವರದ ಛಾಪನ್ನು [...]
Posts Tagged ‘ಧಾರೇಶ್ವರ್’
ಕಂಚಿನ ಕಂಠದೊಡನೆ ಮಿಂಚಿನ ಸಂವಾದ – ಭಾಗವತ ಹೊಸಂಗಡಿ ರವೀಂದ್ರ ಶೆಟ್ಟಿ ಅವರೊಂದಿಗೆ
Posted: September 1, 2008 in ಯಕ್ಷಗಾನTags: ಕಂಚಿನ ಕಂಠ, ಕಾಳಿಂಗ ನಾವುಡ, ಧಾರೇಶ್ವರ್, ಪೆರ್ಡೂರು ಮೇಳ, ಭಾಗವತ, ಯಕ್ಷಗಾನ, ಸಾಲಿಗ್ರಾಮ, saaligraama, yakshagana
ಪೌರಾಣಿಕ ಪ್ರಸಂಗಗಳ ರಸದೌತಣ…
Posted: August 29, 2008 in ಯಕ್ಷಗಾನTags: ಕೊಳಲಿ, ತೀರ್ಥಳ್ಳಿ, ಥಂಡಿಮನೆ, ಧಾರೇಶ್ವರ್, ನೀಲ್ಕೋಡು, ಪೆರ್ಡೂರು, ಪೌರಾಣಿಕ ಪ್ರಸಂಗ, ಯಕ್ಷಗಾನ, ಸುರೇಶ್ ಶೆಟ್ಟಿ
ಇವತ್ತು ಅಂದ್ರೆ 29 ಆಗಸ್ಟ್ ಶುಕ್ರವಾರ ರಾತ್ರಿ 10:30 ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇವರಿಂದ ಪೌರಾಣಿಕ ಯಕ್ಷಗಾನ ಪ್ರಿಯರಿಗೆ ಹಬ್ಬದೂಟವಿದೆ. ಮೂರು ಪೌರಾಣಿಕ ಪ್ರಸಂಗಗಳನ್ನು ರಂಗವೈಭವದಲ್ಲಿ ಸಾಕ್ಷಾತ್ಕರಿಸಲಿರುವರು. ಪ್ರದರ್ಶನಗೊಳ್ಳಲಿರುವ ಪ್ರಸಂಗಗಳು- ಬಬ್ರುವಾಹನ ಕಾರ್ತವೀರ್ಯಾರ್ಜುನ ಮಾಯಾಬಜಾರ್ ಇವತ್ತಿನ ಪ್ರದರ್ಶನದ ವಿಶೇಷ ಆಕರ್ಷಣೆಗಳು ಇಂತಿವೆ – ಬಬ್ರುವಾಹನನಾಗಿ – ತೀರ್ಥಳ್ಳಿ ಗೋಪಾಲಾಚಾರಿ ಚಿತ್ರಾಂಗದೆ – ನೀಲ್ಕೋಡು ಶಂಕರ ಹೆಗಡೆ ಕಾರ್ತವೀರ್ಯ – ವಿದ್ಯಾಧರ ಜಲವಳ್ಳಿ ರಾವಣ [...]
ತೀರ್ಥಳ್ಳಿ ಸಿಡಿಲು, ಕಾರ್ಕಳ ಗುಡುಗು, ತೊಂಬಟ್ಟು-ಕೊಳಲಿ ಮಿಂಚು
Posted: August 18, 2008 in ಕಲಾವೇದಿಕೆ, ಯಕ್ಷಗಾನTags: aata, ಆಟ, ಕೂಡಾಟ, ತೀರ್ಥಹಳ್ಳಿ ಗೋಪಾಲಾಚಾ, ಧಾರೇಶ್ವರ್, ಪೆರ್ಡೂರು, ಭೀಷ್ಮ ವಿಜಯ, ಯಕ್ಷಗಾನ, ರವೀಂದ್ರ ಶೆಟ್ಟಿ, ಶಶಿಕಾಂತ್ ಶೆಟ್ಟಿ, ಸಾಲಿಗ್ರಾಮ, koodaata, perdur, saligrama, yakshagana
ಇದೇನು ಮಲೆನಾಡು-ಕರಾವಳಿಗಳ ಹವಾಮಾನ ಮುನ್ಸೂಚನೆಯಂತಿದೆಯಲ್ಲ ಅಂತ ತಲೆ ತುರಿಸಿಕೊಳ್ತಾ ಇದ್ದೀರಾ? ಇದು ಸ್ವಾತಂತ್ರ್ಯೋತ್ಸವದ ಮುನ್ನಾದಿನ ಸೋನೆ ಮಳೆಯಲ್ಲಿ ಮಿಂದು ತಂಪಾದ ಬೆಂಗಳೂರಿನ ಯಕ್ಷಗಾನಪ್ರಿಯರ ಮನಕ್ಕೆ ರಾತ್ರಿ ಪೂರಾ ತಂಪೆರೆದ ಯಕ್ಷರಸ ಧಾರೆಯ ಒಂದೆರಡು ಹುಂಡುಗಳು. ಎರಡು ಪ್ರಚಂಡ ಯಕ್ಷಗಾನ ಮೇಳಗಳ ಸಮ್ಮಿಲನದಲ್ಲಿ ನಡೆದ ಕೂಡಾಟದ ಮಳೆಯಲ್ಲಿ ಮಿಂದ ಮನಸ್ಸಿನಿಂದ ಆಟ ಮುಗಿದ ಮೇಲೂ ನೆನಪಾಗಿ ತೊಟ್ಟಿಕ್ಕಿದ ರಸ ಬಿಂದುಗಳು. ‘ಯಕ್ಷರಂಗದ ಸಿಡಿಲಮರಿ’ ಎಂದೇ ಖ್ಯಾತಿವೆತ್ತ ತೀರ್ಥಳ್ಳಿ ಗೋಪಾಲಾಚಾರಿಯವರ ಸುಧನ್ವ, ಅಬ್ಬರದ ಪಾತ್ರಗಳಲ್ಲಿ ಆರ್ಭಟಿಸುವ ಮದನಾರಿಯಾಗುವ ಕಾರ್ಕಳ ಶಶಿಕಾಂತ [...]
