(ನನ್ನ ಅಂತರಂಗದ ಆಪ್ತಸ್ವರ ಪುಸ್ತಕದಿಂದ ಎತ್ತಿಕೊಂಡಿದ್ದು …. ) ಕಣ್ಣಿನ ಭಾಷೆ ಕಲಿತುಕೋ ಗೆಳತಿ ಕೇಳಿಸಿಕೋ ಈ ಮೌನದ ವಿನತಿ ಹೃದಯ ಸಂವೇದನೆಯ ಮಾತಲಿ ಹೇಳೋದು ಹ್ಯಾಗೆ ಅರಿವಾಗಬೇಕು ನಿನಗೇ ಗೊತ್ತಾಗದ ಹಾಗೆ << >><< >><< >><< >><< >><< >><<< >><< >> ನೀನಿಲ್ಲದೇ ಹೋದರೂ ನೀ ನಿಲ್ಲದೇ ಹೋದರೂ ನಾ ನಿಲ್ಲದಾದರೂ ನಾನಿಲ್ಲವಾದರೂ ಹುಸಿಯಾದೀತೇ ನನ್ನ ನಿನ್ನ ಪ್ರೀತಿ? << >><< >><< >><< >><< [...]
Posts Tagged ‘ನೆನಪು’
ನಾ ಕಳೆದುಕೊಂಡಿದ್ದು….ಮತ್ತೆಂದೂ ಸಿಗಲಾರದ್ದು
Posted: August 7, 2008 in ನೆನಪುಗಳ ಮಾತು ಮಧುರ..Tags: ನೆನಪು, ಬಾಲ್ಯ, ಹಾಡು
ಮಳೆಗಾಲದ ಅಂಗಳದ ದಬ್ಬೆ ಮೇಲಿನ ಪಾಚಿ ಲೋಳೆ ಮೇಲೆ ಕಾಲಿಟ್ಟು ಜಾರಿ ಬಿದ್ದಿದ್ದು ನಿದ್ದೆಯೆಳೆದರೂ ಕಣ್ತೆರೆದು ಸೋಣೆಯಾರತಿ ಪಂಚಕಜ್ಜಾಯಕ್ಕೆ ಕಾಗದದ ಕೊಟ್ಟೆ ಹಿಡಿದಿದ್ದು ಚಾಪೆ ಹಣ್ಣು ಪಿತ್ತವೆಂದು ಎಷ್ಟು ಹೇಳಿದರೂ ಕೇಳದೆ ಸಮಾ ತಿಂದು ಹೊಟ್ಟೆನೋವು ಬಂದಿದ್ದು ಹಬ್ಬದಗುಡಿ ಸುತ್ತಿ ಸುತ್ತಿ ಬತ್ತಿಹೋಗಿ ನೋವಾದ ಪಾದಗಳಿಗೆ ಅಮ್ಮ ಎಣ್ಣೆ ಬಳಿದಿದ್ದು ಕಾಟು ಮಾವಿನ ಮರಕ್ಕೆ ಸ್ಪರ್ಧೆಯ ಮೇಲೆ ಕಲ್ಲು ಹೊಡೆದು ಹುಳಿ-ಸಿಹಿ ಹಣ್ನು ತಿಂದಿದ್ದು ಬಿಂಬಲಕಾಯಿಯ ರುಚಿ ನಾಲಿಗೆಗೆ ಸೋಕಿದಾಗ [...]
ಒಂದಿಷ್ಟು ನೆನಪುಗಳ ತದಿಗಿಣತೋಂ… ಹೆಕ್ಕಿದ್ದು…ಉಕ್ಕಿದ್ದು
Posted: July 28, 2008 in ನೆನಪುಗಳ ಮಾತು ಮಧುರ..Tags: ನೆನಪು, ಬಾಲ್ಯ, ಶಾಲೆ, ಹೋಳಿಗೆ ಪ್ರಸಂಗ
ನಾನು ಹುಸಾರ್….!! ನಾನಾಗ ಹಳ್ಳಿಹೊಳೆಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದೆ. ಇರುವ ಬೆರಳೆಣಿಕೆಯ ಹುಡುಗ ಹುಡುಗಿಯರ ಮಧ್ಯೆ ಓದೋದ್ರಲ್ಲಿ ಸ್ವಲ್ಪ ಆಸಕ್ತಿ ನನಗೆ ಹೆಚ್ಚಾಗಿದ್ದ ಕಾರಣ ಎಲ್ಲಾ ಮಾಷ್ಟ್ರುಗಳ ಅಚ್ಚುಮೆಚ್ಚಿನವನಾಗಿದ್ದೆ. ಆಗ ನಮ್ಮ ಕ್ಲಾಸ್ ಮಾಷ್ಟ್ರು ಗಣಪತಿ ಮಂಜರು ಅನ್ನುವವರು. ಅವರೊಂದು ದಿನ 4ನೇ ಕ್ಲಾಸಿನಲ್ಲಿ ಪಾಠ ಓದಿಸ್ತಾ ಇದ್ದ್ರು. ಆಗ ಕ್ಲಾಸಿನಲ್ಲಿರೋರೆಲ್ಲ ತಪ್ಪು ತಪ್ಪಾಗಿ ಓದ್ತಾ ಇದ್ರು. ಹಾಗಾಗಿ ನನ್ನನ್ನು 4 ನೇ ಕ್ಲಾಸಿಗೆ ಕರೆದುಕೊಂಡು ಹೋಗಿ ‘ಸಮಾಜ’ ಪಾಠದ 2 ಪುಟ ಓದಿಸಿ, [...]
ಸುಮಾರು ಎರಡು-ಮೂರು ವರ್ಷಗಳ ಹಿಂದಿನ ಮಾತು. ಊರಿಗೆ (ಕುಂದಾಪುರಕ್ಕೆ) ಹೋಗಲು ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ಬಸ್ ಹತ್ತಿ ಕುಳಿತಿದ್ದೆ. ಪ್ರಯಾಣ ಮಾಡುವಾಗ ನಿದ್ರಾದೇವಿ ನನ್ನೊಂದಿಗೆ ‘ಚಾಳಿ ಟೂ’ ಮಾಡೋ ಕಾರಣದಿಂದ ಕಣ್ಣರಳಿಸಿಕೊಂಡು ಕತ್ತಲಲ್ಲಿ ಅಸ್ಪಷ್ಟವಾಗಿ ಕಾಣುವ ಸುತ್ತಲಿನ ಸೊಬಗನ್ನು ಆಸ್ವಾದಿಸುತ್ತಿದ್ದೆ. ಯಾವತ್ತಿನಂತೆ ಚನ್ನರಾಯಪಟ್ಟಣ ದಾಟಿದ ಮೇಲೆ ಸಿಗುವ ಕಾಮತ್ ಹೋಟೆಲ್‌ನಲ್ಲಿ ಬಸ್ ನಿಲ್ಲಲಿಲ್ಲ. ಹಾಸನ, ಸಕಲೇಶಪುರಗಳನ್ನೂ ಹಿಂದೆ ಹಾಕಿ ಬಸ್ಸೆಂಬೋ ಬಸ್ಸು ಶರವೇಗದ ಸರದಾರನಂತೆ ಓಡುತ್ತಿತ್ತು. ಸಕಲೇಶಪುರ ದಾಟಿದ ನಂತರ ಶುರುವಾಗೋದೇ ಶಿರಾಡಿ ಘಾಟ್‌ನ ರುದ್ರ-ರಮ್ಯ ದಾರಿ [...]
ನಾಸ್ಟಾಲ್ಜಿಯಾದಲ್ಲೊಂದು ‘ಚಿತ್ರಮಾಲೆ’ !!
Posted: June 18, 2008 in ನೆನಪುಗಳ ಮಾತು ಮಧುರ..Tags: ಚಿತ್ರಮಾಲ, ಟಿ.ವಿ. ನಾಸ್ಟಾಲ್ಜಿಯಾ, ನೆನಪು
ಕಳೆದೊಂದು ದಶಕದಲ್ಲಿ ಮನೋರಂಜನಾ ಮಾಧ್ಯಮವಾಗಿ ಟಿ.ವಿ. ಬೆಳೆದ ಪರಿ ಯಾರಿಗೇ ಆಗಲಿ ಅಚ್ಛರಿ ಮೂಡಿಸುವಂತದ್ದು. ರಿಮೋಟಿನ ಗುಂಡಿಯೊತ್ತುತ್ತಿದ್ದಂತೆ ಸಂಗೀತ, ಸುದ್ದಿ, ಚಲನಚಿತ್ರ, ಕ್ರೀಡೆ, ಫ್ಯಾಷನ್, ಭಕ್ತಿ..ಹೀಗೆ ನಿರ್ದಿಷ್ಟ ವಿಷಯಕ್ಕೇ ಮೀಸಲಾದ ನೂರಾರು ವಾಹಿನಿಗಳು ಸಿಗುತ್ತವೆ. ನಿಮಗೆ ಬೇಕಿರಲಿ ಬೇಡದಿರಲಿ, ಅವ್ಯಾಹತವಾಗಿ ೨೪X7 ಬಿತ್ತರಗೊಳ್ಳುತ್ತಿರುತ್ತವೆ. ಮೊಟ್ಟ ಮೊದಲು ಟಿ.ವಿ. ಬಂದಾಗ ನಮಗಿದ್ದ ಏಕೈಕ ಆಯ್ಕೆಯೆಂದರೆ ದೂರದರ್ಶನ… ಅದೂ ಡಿ.ಡಿ. ಯ ರಾಷ್ಟ್ರೀಯ ವಾಹಿನಿ. ಇಂದು ಕನ್ನಡಕ್ಕೆಂದೇ ಮೀಸಲಾದ ಈ ಟಿ.ವಿ, ಜೀ ಟಿ.ವಿ, ಸುವರ್ಣ, ಕಸ್ತೂರಿ, ಚಂದನ, [...]
