ಇದನ್ನು ಕವನ ಅಥವ ಪದ್ಯ ಅನ್ನೋ ಎದೆಗಾರಿಕೆ ನನ್ನಲ್ಲಿಲ್ಲ…ಅದ್ರೂ ಮನಸಿನ ಮರ್ಮರಗಳೆಲ್ಲ ಕವಿತೆಗಳಾಗಬೇಕೆಂಬ ನಿಯಮವೇನಿಲ್ಲವಲ್ಲ. ಹಾಗಾಗಿ ಕೆಲವು ಸಾಲುಗಳು ಹಾಗೇ ಸುಮ್ಮನೆ… ಸುಮ್ ಸುಮ್ನೆ ನೆನಪಾಗಿ ಕಾಡಬೇಡ್ವೇ.. ಯಾವಾಗ್ಲೂ ಕಣ್ಣಿಗೆ ಕಸ ಬಿತ್ತಂದ್ರೆ ಯಾರೂ ನಂಬಲ್ವೇ ! -.-.-.-.-.-.-.-.-.-.-.-.-.–.-.-.-.-.-.-.-.- ಈ ಜಗತ್ತಲ್ಲಿ ಬದಲಾವಣೆ ನಿರಂತರ ಅನ್ನುತ್ತೆ ವೇದಾಂತ ಆದರೆ ನೀನೂ ಬದಲಾಗಿ ಬಿಟ್ಟೆ ನೋಡು… ಅದೇ ದುರಂತ -.-.-.-.-.-.-.-.-.-.-.-.-.–.-.-.-.-.-.-.-.- ಬಹಳ ದೂರ ನೀ ಹೋಗಿಬಿಟ್ಟೆ ಹಿಂದಿರುಗಿ ಬರಲಾಗದಷ್ಟು… ಬೇಸರವಾಗಿದ್ದು [...]
Posts Tagged ‘ಪದ್ಯ’
ಕಣ್ಣಿಗೆ ಕಸ ಬಿತ್ತಂದ್ರೆ ಯಾರೂ ನಂಬಲ್ವೇ….!
Posted: August 29, 2008 in ಮನಸಿನ ಹಾಡು, ಹಾಗೆ ಸುಮ್ಮನೆTags: ಕವನ, ಕವಿತೆ, ಪದ್ಯ, ಮನಸಿನ ಇನಿದನಿ, ಲಹರಿ, ಹಾಗೆ ಸುಮ್ಮನೆ, ಹಾಡು
ಅವಳ ಹುತಾತ್ಮ ಯೋಧನ ಅವರು ಮನೆಗೆ ತಂದರು….
Posted: July 16, 2008 in ಮನಸಿನ ಹಾಡುTags: ಅನುವಾದ, ಟೆನಿಸನ್, ಪದ್ಯ, ಮಗು, ಯೋಧ
ಇದು ಲಾರ್ಡ್ ಟೆನಿಸನ್‌ನ ‘ಹೋಮ್ ದೆ ಬ್ರಾಟ್ ಹರ್ ವಾರಿಯರ್ ಡೆಡ್’ನ ಭಾವಾನುವಾದ. ಈ ಪದ್ಯ ನಮಗೆ 10ನೇ ಕ್ಲಾಸಿನ ಇಂಗ್ಲೀಷ್ ಪಠ್ಯದ ಭಾಗವಾಗಿತ್ತು. ಈ ಪದ್ಯ ಅದರ ಭಾವ ತೀವ್ರತೆಯಿಂದಾಗಿ ನನ್ನನ್ನು ಗಾಢವಾಗಿ ತಟ್ಟಿತ್ತು. ಅದನ್ನು ಕನ್ನಡದಲ್ಲಿ ಬರೆಯುವ ಪ್ರಯತ್ನ ನನ್ನದು. ಅದರ ಮೂಲದ ತೀವ್ರತೆಯ ನೂರರಲ್ಲೊಂದು ಭಾಗ ಇಲ್ಲಿ ಬಂದಿದ್ದರೂ ನನ್ನ ಪ್ರಯತ್ನ ಸಾರ್ಥಕ ಹೆಮ್ಮೆಯ ವೀರಯೋಧ ಆಕೆಯ ಪತಿ, ಯುದ್ಧದಲಿ ಮಡಿದ ಅವನೀಗ ಬರೀ ಸ್ಮೃತಿ, ಯೋಧನ ಶವವೀಗ ಮನೆಯ ಮುಂದಿದೆ, [...]
ಈ ವಿಜ್ಞಾನಿಗಳು ಎಲ್ಲಾ ಹಾಳು ಮಾಡಿಬಿಟ್ರು… ಚಂದಮಾಮನ ತೋರಿಸಿ ಮೊಲದ ಕಥೆ ಹೇಳಿದ್ರೆ ಚಂದ್ರಕಂದಕಗಳ ಬಗ್ಗೆ ಮಗು ಕೇಳುತ್ತೆ, ಪುಷ್ಪಕವಿಮಾನದ ಸೊಗಸು ಹೇಳೋಕೆ ಹೋದ್ರೆ ಆಗ ಪೆಟ್ರೋಲ್ ಎಲ್ಲಿತ್ತು ಅಂತ ಕೆಣಕುತ್ತೆ ರಕ್ತಬೀಜಾಸುರರ ಕಥೆ ಹೇಳೋಣ ಅಂದ್ರೆ ಆಗ ಕ್ಲೋನಿಂಗ್ ಎಲ್ಲಿತ್ತು ಅಂತ್ ಸವಾಲೆಸೆಯುತ್ತೆ ಈ ವಿಜ್ಞಾನಿಗಳು ಎಲ್ಲಾ ಕಲ್ಪನೆಗಳ ಕಥೆ ಕೆಡಿಸಿಬಿಟ್ಟಿದ್ದಾರೆ.. ನೂರಿನ್ನೂರು ವರ್ಷಗಳ ಮುಂಚೆ ಹುಟ್ಬೇಕಿತ್ತು ಅಂತ ಒಮ್ಮೊಮ್ಮೆ ಅನ್ಸುತ್ತೆ
ನಾನು ಚಿಕ್ಕವನಿದ್ದಾಗ ಕೇಳಿದ ಒಂದು ಪದ್ಯ ಇದು. ಇದು ಬಾಯಿಂದ ಬಾಯಿಗೆ ಹರಿದು ಬರುವಾಗ ಇದರ ರೂಪದಲ್ಲಿ ಅನೇಕ ಬದಲಾವಣೆಗಳಾಗಿರಬಹುದು. ಚಿಕ್ಕ ಮಕ್ಕಳಲ್ಲಿ ಕುತೂಹಲ, ಆಸಕ್ತಿ ಕೆರಳಿಸುವ, ನೆನಪಿನ ಶಕ್ತಿಯನ್ನು ಉತ್ತಮ ಪಡಿಸಿಕೊಳ್ಳಲು ನೆರವಾಗುವ ಈ ಪದ್ಯ ಯಾರು ಸೃಷ್ಟಿಸಿದ್ದೋ ಗೊತ್ತಿಲ್ಲ. ನನಗೆ ಚಿಕ್ಕಂದಿನಲ್ಲಿ ಕೇಳಿದ್ದು ಇನ್ನೂ ಬಾಯಿಪಾಠ ಇದೆ. ಈ ಪದ್ಯದಲ್ಲಿ ಸಿಂಡಿಕೇಟ್ ಬ್ಯಾಂಕು ಬರುತ್ತೆ. ಅದ್ಯಾವುದೋ ಕಮಲಾ ಸರ್ಕಸ್ ಅನ್ನೋ ಸರ್ಕಸ್ ಬರುತ್ತೆ. ಹಾಗೆಯೇ ಬಡ್ಡಿ ಕಮಲ ಅನ್ನೋ ಹೆಂಗಸಿನ ಪ್ರಸ್ತಾಪವೂ ಬರುತ್ತೆ. [...]
ತಾಳಿ(ಟ್ಯಾಲಿ) ಇಲ್ಲದ ಮದುವೆ…
Posted: May 9, 2008 in ಗಮ್ಮತ್ತಿನ ಹಾಡುTags: ಇಂಟರ್ನೆಟ್ ಮದುವೆ, ಪದ್ಯ, ಹಾಡು, ಹಾಸ್ಯ, funny kannada poem, funny poem, kannada, kannada poem, poem
ಅವನೊಬ್ಬ ಅನಿವಾಸಿ ಅವಳ್ಹೆಸರು ಅವಿನಾಶಿ ಭೇಟಿಯಾದರು ಅಂತರ್ಜಾಲದಿ ಚಾಟಿಸಿ ಅರಳಿದ ಪ್ರೇಮವು ಶುದ್ಧ ಫ್ಯಾಂಟಸಿ ಅಂತರ್ಜಾಲದ ಅಂತರ್‌ಪಟವ ಸೇರಿಸಿ ದಂಪತಿ ಅವರೀಗ ‘ನೆಟ್’ ಅಲ್ಲೇ ವರಿಸಿ ಬಂಧುಗಳು ಇವರ ‘ಮೇಲ್’ ಅಲ್ಲೇ ಹರಸಿ ವೆಬಕ್ಯಾಮ್‌ನೊಳಗೆ ಕಣ್ಣೀರು ಸುರಿಸಿ ಮನೆತುಂಬಿಸಿಕೊಂಡರು ಮೌಸ್ ಕ್ಲಿಕ್ಕಿಸಿ ತಾಳಿ (ಟ್ಯಾಲಿ) ಇಲ್ಲದ ಇ-ಮದುವೆ ಕತೆ ಆಲಿಸಿ ನಿಮ್ಮ ಅನಿಸಿಕೆಗಳನು ‘ಬ್ಲಾಗ್’ ಅಲ್ಲಿ ಬ್ಲಾಗಿಸಿ
