ಬಲ್ಲವರ ಮಾತೊಂದಿದೆ ನೊಡಿ… ನದಿ ಮೂಲ, ಋಷಿ ಮೂಲ ಸ್ತ್ರೀ ಮೂಲ ಹುಡುಕಲು ಹೋಗುವ ‘ಮೂಲ’ವ್ಯಾಧಿ ಒಳ್ಳೇದಲ್ಲ ಅಂತ. ಆದ್ರೆ ಪದ ಮೂಲ ಹುಡುಕಲು ಹೋಗೋದ್ರಲ್ಲಿ ತಪ್ಪೇನಿಲ್ಲ ಬಿಡಿ. ಅದರಲ್ಲೂ ಅನ್ಯಭಾಷೆ-ದೇಶ-ಸಂಸ್ಕೃತಿಯಿಂದ ಬಂದ ಪದಗಳ ಮೂಲ ಹುಡುಕುತ್ತಾ ಹೋದಂತೆಲ್ಲಾ, ಸಿಗುವ ಕತೆಗಳು ತುಂಬಾ ಸ್ವಾರಸ್ಯಕರವಾಗಿರುತ್ತೆ. ಅರೆ! ಹೌದಲ್ಲ.. ನಮ್ಮ ನಿತ್ಯ ಬಳಕೆಯಲ್ಲಿ ಹಾಸುಹೊಕ್ಕಾಗಿರುವ ಈ ವಿಶಿಷ್ಟ ಪದಗಳ ಹಿಂದೆ ಇಷ್ಟೆಲ್ಲಾ ಕತೆ ಇದೆಯಾ, ಈ ಕತೆಗಳ ಅಸಲಿಯತ್ತಾದರೂ ಏನು ಎಂದು ಹುಡುಕುತ್ತಾ, ಈ ಪದ ಪ್ರಪಂಚದ ರೋಚಕ [...]
Posts Tagged ‘ಪುಸ್ತಕ ಪರಿಚಯ’
ಡಕೋಟಾ ಬಿಕಿನಿ ಓ.ಕೆ…. ಜಾಕ್ಪಾಟ್ ಲಾಟರಿ ಯಾಕೆ…..?!!
Posted: March 8, 2010 in ಪುಸ್ತಕಗಳು, ಭಾಷೆ, kannada bookTags: ಪುಸ್ತಕ ಪರಿಚಯ, ಭಾಷೆ
‘ನೀನಾ ಪಾಕಿಸ್ತಾನ’ದಲ್ಲಿ ಜೆಹಾದ್ನ ನಾನಾ ಮುಖಗಳು…
Posted: February 6, 2009 in ನೆನಪುಗಳ ಮಾತು ಮಧುರ..Tags: ಜೆಹಾದಿಗಳು, ಧರ್ಮಯುದ್ಧ, ನೀನಾ ಪಾಕಿಸ್ತಾನ, ಪುಸ್ತಕ ಪರಿಚಯ, ಬೆಳಗೆರೆ, ರವಿ ಬೆಳಗೆರೆ
ಇದೊಂದು ಪುಸ್ತಕದ ಬಗ್ಗೆ ಹೇಳಿಕೊಂಡಷ್ಟು ರವಿ ಬೆಳಗೆರೆ ಇನ್ಯಾವ ಪುಸ್ತಕದ ಕುರಿತೂ ಹೇಳಿರಲಿಕ್ಕಿಲ್ಲ. ಈಗ ಕೊಡ್ತೀನಿ… ಆಮೇಲೆ ಕೊಡ್ತೀನಿ ಅಂತ ಸುಮಾರು ಆರೇಳು ವರ್ಷಗಳಲ್ಲಿ ಓದುಗರಲ್ಲಿ ಬೆಟ್ಟದಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದರು. ಕೊನೆಗೂ ಮೊನ್ನೆ ಗಣರಾಜ್ಯೋತ್ಸವದ ಮುನ್ನಾದಿನ ಗಜಗರ್ಭ ಪ್ರಸವವಾಯ್ತು. ಕಾದು ಕಾದು ಬೇಸರಗೊಂಡಿದ್ದ ಓದುಗ ದೊರೆಗಳ ಮುಖ ಪ್ರಸನ್ನವಾಯ್ತು. ಹಿಂದೊಮ್ಮೆ ತಮ್ಮ ಪತ್ರಿಕೆ ‘ಹಾಯ್ ಬೆಂಗಳೂರ್‘ನಲ್ಲಿ ‘ನೀನಾ ಪಾಕಿಸ್ತಾನ‘ ಮಾಲಿಕೆಯನ್ನು ಬೆಳಗೆರೆ ಶುರು ಮಾಡಿದ್ದರು. ಭುಟ್ಟೋ ಮರಣದಂಡನೆಯ ವಿವರಗಳೊಂದಿಗೆ ಪ್ರಾರಂಭವಾದ ಆ ಮಾಲಿಕೆ ಶುರುವಾದ ಕೆಲವೇ ದಿನಗಳಲ್ಲಿ [...]
ಮುಕ್ತ ಮನಸ್ಸಿಂದ ಇದೊಂದು ಪುಸ್ತಕ ಓದಿ…
Posted: July 17, 2008 in ಪುಸ್ತಕಗಳುTags: ಕನ್ನಡ ಪುಸ್ತಕ, ಚಿಂತನೆ, ದೇವರು, ಪುಸ್ತಕ ಪರಿಚಯ, ಶಾಂತಾರಾಮ ಸೋಮಯಾಜಿ
ದೇವರು ಮನುಷ್ಯನನ್ನು ಸೃಷ್ಟಿಸಿದನಾ ಇಲ್ಲಾ ಮನುಷ್ಯನೇ ದೇವರನ್ನು ಸೃಷ್ಟಿಸಿದನಾ? ಈ ಕುರಿತು ನಡೆಯುವ ವಾದ-ಪ್ರತಿವಾದ, ಚರ್ಚೆ, ಜಿಜ್ಞಾಸೆಗಳಿಗೆ ಕೊನೆ ಮೊದಲೆಂಬುದಿಲ್ಲ. ನಾವು ನಂಬಿದ್ದೇ ಸರಿ ಅನ್ನುವ ಎರಡೂ ಪಂಗಡದವರ ಸಂಖ್ಯೆಗಿಂತಲೂ ಯಾವುದು ಸರಿ ಅನ್ನೋ ಗೊಂದಲದಲ್ಲಿರುವವರೇ ಜಾಸ್ತಿ. ನಾವು ಹುಟ್ಟಿ ಬೆಳೆದ ಪರಿಸರ, ನಮ್ಮ ಹಿರಿಯರ ನಂಬಿಕೆಗಳ ಫಲವಾಗಿ ಮೂಡಿದ ದೇವರ ಕುರಿತು ನಮ್ಮ ಅಭಿಪ್ರಾಯ, ನಂಬಿಕೆಗಳು ಕಾಲಕಳೆದಂತೆಲ್ಲಾ ನಮ್ಮ ಅರಿವು, ಚಿಂತನೆಯು ವ್ಯಾಪ್ತಿ ವಿಸ್ತರಿಸಿದೆಂತೆಲ್ಲಾ ಬದಲಾಗಬಹುದು. ದೇವರ ಕುರಿತು ನನ್ನ ಚಿಂತನೆಗೆ ಒಂದು ರೂಪು ಕೊಟ್ಟ [...]
