Posts Tagged ‘ಪುಸ್ತಕ’

ನಾವು ಹುಟ್ಟಿ ಬೆಳೆದ ನೆಲದ ಬಗೆಗಿನ ಪ್ರೀತಿ-ಸೆಳೆತ-ಆಕರ್ಷಣೆಯು ನಾವು ಎಲ್ಲೇ ಇದ್ದರೂ ಕೂಡಾ ಸದಾ ನಮ್ಮ ನೆರಳಿನಂತೆ ಹಿಂಬಾಲಿಸುವುದು ಸಹಜ. ನಾವು ಆಡಿ ಬೆಳೆದ ಪರಿಸರ, ಅಲ್ಲಿನ ಆಚರಣೆ-ಹಬ್ಬ-ಹರಿದಿನ, ಅಲ್ಲಿನ ಜನ-ಜೀವನ ನಮಗೆಲ್ಲರಿಗೂ ಆಪ್ಯಾಯಮಾನ. ತುಳುನಾಡಿನಲ್ಲಿ ಹುಟ್ಟಿ ಬೆಳೆದ ಎಚ್.ನಾಗವೇಣಿಯವರ ಕತೆಗಳಲ್ಲಿ ಕೂಡಾ ಈ ತಾಯ್ನೆಲದ ಮಣ್ಣಿನ ತುಡಿತ ಮಿಡಿತಗಳು ನರನಾಡಿಯಂತೆ ವ್ಯಾಪಿಸಿರುತ್ತವೆ. ಅ ಮಣ್ಣಿನ ಸಾರದಲ್ಲಿನ ಜೀವಂತಿಕೆಯನ್ನು ತುಂಬಿಕೊಂಡು ನಳನಳಿಸುತ್ತಿರುವಂತೆ ಭಾಸವಾಗುತ್ತದೆ. ನಾಗವೇಣಿಯವರ ಕಥಾಸಂಕಲನಗಳಾದ ‘ವಸುಂಧರೆಯ ಗ್ಯಾನ’, ‘ನಾಕನೇ ನೀರು’, ‘ಮೀಯುವ ಆಟ,’ಗಳಲ್ಲಿ ನಮಗೆ ಕಾಣಸಿಗುವುದು [...]

ಹಾಡುಗಳ ಹುಟ್ಟು.. ಹುಟ್ಟಿನ ಹಿಂದಿರುವ ಗುಟ್ಟು… ಹಾಡಿನೋಳಗಡಗಿಹ ಭಾವ… ನಗೆ ಸಾಲಿನ ಹಿಂದಿರುವ ನೋವ.. ಹೀಗೆ ಪ್ರತಿಯೊಂದು ಕಾಡುವ ಹಾಡಿನ ಹುಟ್ಟಿನ ಜಾಡು ಹುಡುಕುತ್ತಾ ಹೊರಟ ಮಣಿಕಾಂತ್ ಬರೆದ ಪದ್ಯಗಳ ಕುರಿತಾದ ಹೃದ್ಯ ಗದ್ಯ ಸಂಕಲನ.. ಸಧ್ಯದಲ್ಲೇ ನಿಮ್ಮ ಕೈ ಸೇರಲಿದೆ… ಹೊತ್ತಗೆ ಬಿಡುಗಡೆಯಾಗುವ ಹೊತ್ತಿನಲ್ಲಿ ಚಿತ್ರನಟ ರಮೇಶ್ ನಿಮ್ಮೊಟ್ಟಿಗೆ ಇರ್ತಾರೆ…ಪುಸ್ತಕ ಬಿಡುಗಡೆಯನ್ನು ಕೂಡ ಅವ್ರೆ ಮಾಡ್ತಾರೆ… ಪುಸ್ತಕದ ಬಗ್ಗೆ ಅನಂತ್ ಚಿನಿವಾರರ ಮಾತಿನ ಚಿನಕುರಳಿಯಿದೆ…. ಮಣಿಯ ಬರಹಗಳಿಗೆ ಸದಾ ಪ್ರೋತ್ಸಾಹ ನೀಡುವ ವಿಶ್ವೇಶ್ವರ್ ಭಟ್ ಈ ಸಂಭ್ರಮದಲ್ಲಿ ಜೊತೆಗಿರ್ತಾರೆ… ಮತ್ತೇನಿದೆ ಅಂತೀರಾ? ಏನಿಲ್ಲ [...]

ಮೊದಲಿಗೆ ಕಾಡಿಗೊಂದು ಥ್ಯಾಂಕ್ಸ್ ಹೇಳಲೇಬೇಕು. ಬಾಲ್ಯಕಾಲದಲ್ಲಿ ಭಾವಕೋಶದೊಳಕ್ಕಿಳಿದು… ನೆನಪಿನಾಳದಲ್ಲಿ ಬೆಚ್ಚಗೆ ಕುಳಿತು… ತನ್ನೆಲ್ಲಾ ನಿಗೂಡತೆ, ಬೆರಗು-ಬೆಡಗು-ಸೊಬಗುಗಳ ಬೀಜಗರ್ಭದಿಂದ ಕತೆಯಾಗಿ ಮೊಳೆತು… ಈಗ ನಮ್ಮನ್ನೂ ಆ ನಿಗೂಢ ಜಗತ್ತಿನ ಅಲೆದಾಟಕ್ಕೆ ಕೊಂಡೊಯ್ಯುವಂತೆ ಜೋಗಿಯನ್ನು ಕಾಡಿದ ಕಾಡಿಗೊಂದು ಕೃತಜ್ಞತೆ ಹೇಳದಿದ್ರೆ ಪುಸ್ತಕ ನೀಡಿದ ಸಂತೋಷಕ್ಕೆ ಮೋಸ ಮಾಡಿದ ಹಾಗೆ. ಜೋಗಿ ಬಾಲ್ಯಕಾಲದಲ್ಲಿ ಕಂಡು ಸಂಭ್ರಮಿಸಿದ, ಅಗಾಧತೆಯಿಂದ ಬೆರಗಿಗೀಡಾದ, ನಿಗೂಢತೆಯಿಂದ ದಿಗಿಲುಗೊಂಡ, ಪ್ರಕೃತಿ ಮಾತೆಯ ಮಡಿಲಲ್ಲಿ ಆರಾಮದಿಂದ ವಿಹರಿಸಿದ ವಿರಮಿಸಿದ ಆ ಕಾಡಿನ ಜಾಡಿನಲ್ಲಿ ಹೆಜ್ಜೆ ಹಾಕುತ್ತಾ ಸಾಗಿದಂತೆಲ್ಲ ಕತೆ ಮರೆಯುತ್ತದೆ; [...]

ಉತ್ತರಕನ್ನಡ ಜಿಲ್ಲೆಗೂ ಸಣ್ಣಕತೆಗಳಿಗೂ ಅದೆಂತಹ ಅನ್ಯೋನ್ಯವೋ ಗೊತ್ತಿಲ್ಲ. ಆ ಜಿಲ್ಲೆಯ ಸೌಂದರ್ಯ, ಕಡಲು, ಘಟ್ಟ, ಮಲೆನಾಡಿನ ಮಾಧುರ್ಯವನ್ನೆಲ್ಲಾ ಹೀರಿಕೊಂಡುಬಿಟ್ಟವರಂತೆ ಇಲ್ಲಿನ ಕತೆಗಾರರು ಕತೆಗಳ ಅದ್ಭುತಲೋಕವನ್ನೇ ಕಟ್ಟಿಕೊಟ್ಟಿದ್ದಾರೆ; ಕೊಡುತ್ತಲೇ ಇದ್ದಾರೆ. ಆ ನೆಲದ ಮಣ್ಣಿನ ಸಾರದಲ್ಲಿ ಹುಲುಸಾಗಿ ಬೆಳೆದು ತೆನೆಗಟ್ಟುವ ಕತೆಗಳಿಂದಾಗಿ, ಅಲ್ಲಿನ ಪರಿಸರದಲ್ಲಿ ಮೊಗೆದಷ್ಟೂ ಬರಿದಾಗದ ಕತೆಗಳ ಕಣಜವೇ ಇರಬೇಕು. ಈ ಮಾತಿನಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲವೆಂದು ನಿಮಗೆ ಮನವರಿಕೆಯಾಗಬೇಕಿದ್ದರೆ ಯಶವಂತ ಚಿತ್ತಾಲರ – ಕುಮಟೆಗೆ ಬಂದಾ ಕಿಂದರ ಜೋಗಿ, ಪುಟ್ಟನ ಹೆಜ್ಜೆ ಕಾಣೋದಿಲ್ಲ, ಜಯಂತ ಕಾಯ್ಕಿಣಿ [...]