Posts Tagged ‘ಬಾಲ್ಯ’

ಮಳೆಗಾಲದ ಅಂಗಳದ ದಬ್ಬೆ ಮೇಲಿನ ಪಾಚಿ ಲೋಳೆ ಮೇಲೆ ಕಾಲಿಟ್ಟು ಜಾರಿ ಬಿದ್ದಿದ್ದು   ನಿದ್ದೆಯೆಳೆದರೂ ಕಣ್ತೆರೆದು ಸೋಣೆಯಾರತಿ ಪಂಚಕಜ್ಜಾಯಕ್ಕೆ ಕಾಗದದ ಕೊಟ್ಟೆ ಹಿಡಿದಿದ್ದು   ಚಾಪೆ ಹಣ್ಣು ಪಿತ್ತವೆಂದು ಎಷ್ಟು ಹೇಳಿದರೂ ಕೇಳದೆ ಸಮಾ ತಿಂದು ಹೊಟ್ಟೆನೋವು ಬಂದಿದ್ದು   ಹಬ್ಬದಗುಡಿ ಸುತ್ತಿ ಸುತ್ತಿ ಬತ್ತಿಹೋಗಿ ನೋವಾದ ಪಾದಗಳಿಗೆ ಅಮ್ಮ ಎಣ್ಣೆ ಬಳಿದಿದ್ದು   ಕಾಟು ಮಾವಿನ ಮರಕ್ಕೆ ಸ್ಪರ್ಧೆಯ ಮೇಲೆ ಕಲ್ಲು ಹೊಡೆದು ಹುಳಿ-ಸಿಹಿ ಹಣ್ನು ತಿಂದಿದ್ದು   ಬಿಂಬಲಕಾಯಿಯ ರುಚಿ ನಾಲಿಗೆಗೆ ಸೋಕಿದಾಗ [...]

ನಾನು ಹುಸಾರ್….!! ನಾನಾಗ ಹಳ್ಳಿಹೊಳೆಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದೆ. ಇರುವ ಬೆರಳೆಣಿಕೆಯ ಹುಡುಗ ಹುಡುಗಿಯರ ಮಧ್ಯೆ ಓದೋದ್ರಲ್ಲಿ ಸ್ವಲ್ಪ ಆಸಕ್ತಿ ನನಗೆ ಹೆಚ್ಚಾಗಿದ್ದ ಕಾರಣ ಎಲ್ಲಾ ಮಾಷ್ಟ್ರುಗಳ ಅಚ್ಚುಮೆಚ್ಚಿನವನಾಗಿದ್ದೆ. ಆಗ ನಮ್ಮ ಕ್ಲಾಸ್ ಮಾಷ್ಟ್ರು ಗಣಪತಿ ಮಂಜರು ಅನ್ನುವವರು. ಅವರೊಂದು ದಿನ 4ನೇ ಕ್ಲಾಸಿನಲ್ಲಿ ಪಾಠ ಓದಿಸ್ತಾ ಇದ್ದ್ರು. ಆಗ ಕ್ಲಾಸಿನಲ್ಲಿರೋರೆಲ್ಲ ತಪ್ಪು ತಪ್ಪಾಗಿ ಓದ್ತಾ ಇದ್ರು. ಹಾಗಾಗಿ ನನ್ನನ್ನು 4 ನೇ ಕ್ಲಾಸಿಗೆ ಕರೆದುಕೊಂಡು ಹೋಗಿ ‘ಸಮಾಜ’ ಪಾಠದ 2 ಪುಟ ಓದಿಸಿ, [...]

ಇದೂ ಕೂಡಾ ಇನ್ನೊಂದು ಭಾವಾನುವಾದ. ಈ ಪದ್ಯ ಕೂಡಾ ನಾನು ಒಂಬತ್ತನೇ ಕ್ಲಾಸಿನಲ್ಲಿದ್ದಾಗ ಓದಿದ್ದು. ಅಂತೆಯೇ ಅಚ್ಚುಮೆಚ್ಚಿನದ್ದು. ಇದು ಭಾವಾನುವಾದವೇ ಹೊರತು ಭಾಷಾನುವಾದವಲ್ಲ. ಮೂಲ: ಸುಭದ್ರಾ ಕುಮಾರಿ ಚೌಹಾಣ್ ಕವಿತೆ : ಮೇರಾ ನಯಾ ಬಚ್‌ಪನ್   ಮತ್ತೆ ಮತ್ತೆ ನೆನಪಾಗುತಿದೆ ಆ ಬಾಲ್ಯಕಾಲ, ಮತ್ತೆಂದಾದರೂ ಬಂದೀತೆ ಆ ರಮ್ಯ ಚೈತ್ರಕಾಲ?   ಬಡವ ಬಲ್ಲಿದ ಎಂಬ ಭೇದ ಗೊತ್ತಿರದ, ಜಾತಿ-ಧರ್ಮಗಳ ಸೋಂಕೇ ಇರದ   ನನ್ನ ಪುಟ್ಟ ಗುಡಿಸಲಿಗೆ ನಾನೇ ರಾಣಿ, ಹಂಸತೂಲಿಕಾ ಕಲ್ಪವಾಗಿ ಹರಕು [...]