ಬಲ್ಲವರ ಮಾತೊಂದಿದೆ ನೊಡಿ… ನದಿ ಮೂಲ, ಋಷಿ ಮೂಲ ಸ್ತ್ರೀ ಮೂಲ ಹುಡುಕಲು ಹೋಗುವ ‘ಮೂಲ’ವ್ಯಾಧಿ ಒಳ್ಳೇದಲ್ಲ ಅಂತ. ಆದ್ರೆ ಪದ ಮೂಲ ಹುಡುಕಲು ಹೋಗೋದ್ರಲ್ಲಿ ತಪ್ಪೇನಿಲ್ಲ ಬಿಡಿ. ಅದರಲ್ಲೂ ಅನ್ಯಭಾಷೆ-ದೇಶ-ಸಂಸ್ಕೃತಿಯಿಂದ ಬಂದ ಪದಗಳ ಮೂಲ ಹುಡುಕುತ್ತಾ ಹೋದಂತೆಲ್ಲಾ, ಸಿಗುವ ಕತೆಗಳು ತುಂಬಾ ಸ್ವಾರಸ್ಯಕರವಾಗಿರುತ್ತೆ. ಅರೆ! ಹೌದಲ್ಲ.. ನಮ್ಮ ನಿತ್ಯ ಬಳಕೆಯಲ್ಲಿ ಹಾಸುಹೊಕ್ಕಾಗಿರುವ ಈ ವಿಶಿಷ್ಟ ಪದಗಳ ಹಿಂದೆ ಇಷ್ಟೆಲ್ಲಾ ಕತೆ ಇದೆಯಾ, ಈ ಕತೆಗಳ ಅಸಲಿಯತ್ತಾದರೂ ಏನು ಎಂದು ಹುಡುಕುತ್ತಾ, ಈ ಪದ ಪ್ರಪಂಚದ ರೋಚಕ [...]
Posts Tagged ‘ಭಾಷೆ’
ಡಕೋಟಾ ಬಿಕಿನಿ ಓ.ಕೆ…. ಜಾಕ್ಪಾಟ್ ಲಾಟರಿ ಯಾಕೆ…..?!!
Posted: March 8, 2010 in ಪುಸ್ತಕಗಳು, ಭಾಷೆ, kannada bookTags: ಪುಸ್ತಕ ಪರಿಚಯ, ಭಾಷೆ
ನಾಗರಾಜ್ ವಸ್ತಾರೆಯವರದ್ದೊಂದು ಕಥಾ ಸಂಕಲನದ ಹೆಸರು ‘ಹಕೂನ ಮಟಾಟ’. ಇದೇನಿದು ವಿಚಿತ್ರ ಹೆಸರು ಅಂತ ತಲೆಕೆಡಿಸಿಕೊಳ್ಳುವಷ್ಟರಲ್ಲಿ ಗೊತ್ತಯ್ತು ಅದೊಂದು ಆಫ್ರಿಕನ್ ಪದ ಅಂತ. ಅದರರ್ಥ ‘ನೋ ಪ್ರಾಬ್ಲಂ’ ಅಂತ. ಭಾಷೆಗಳ ಬಗ್ಗೆ ನನಗಿರುವ ಹುಚ್ಚು ಆಕರ್ಷಣೆಯಿಂದಾಗಿ ಈ ಬಾರಿ ಟಾಂಜಾನಿಯಾದಿಂದ ರಜೆಯ ಮೇಲೆ ಊರಿಗೆ ಬಂದ ಅತ್ತೆ, ಮಾವನನ್ನು ಕೇಳಿ ಟಾಂಜಾನಿಯಾದ ಭಾಷೆ ಸ್ವಹಿಲಿಯ ( ಅಥವಾ ಅವರದೇ ಭಾಷೆಯಲ್ಲಿ ಹೇಳುವಂತೆ ಕಿಸ್ವಹಿಲಿ) ಬಗ್ಗೆ ಅಲ್ಪ ಸ್ವಲ್ಪ ತಿಳಿದುಕೊಂಡೆ. ಹಿಂದಿ/ಉರ್ದು/ಅರೇಬಿಯಬ್ ಭಾಷೆಗಳಿಂದ ಸ್ವಹಿಲಿಯು ಎರವಲು ಪಡೆದ ಅನೇಕ [...]
ತೊಂಬತ್ತರ ದಶಕದ ಆದಿಯಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಈ ಹಾಡು ಇಂದಿಗೂ ನನ್ನ ಅಚ್ಚುಮೆಚ್ಚಿನದು. ರಾಷ್ಟ್ರೀಯ ಭಾವೈಕ್ಯವನ್ನು ಸಾರುವ ಈ ಗೀತೆಯ ಹಿಂದಿರುವ ಭಾವ, ಅದನ್ನು ಮನಮುಟ್ಟುವಂತೆ ನಿರೂಪಿಸಿದ ರೀತಿಯಿಂದಾಗಿ ಅದು ಮನಸ್ಸನ್ನು ತಟ್ಟಿ ಅಲ್ಲೇ ಗಟ್ಟಿಯಾಗಿ ನಿಂತುಬಿಟ್ಟಿದೆ. ಇತ್ತೀಚೆಗೆ ಜಾತಿ, ಭಾಷೆ, ಗಡಿಗಳ ವಿಷಯದಲ್ಲಿ ಜನರಲ್ಲಿ ಮನೆ ಮಾಡುತ್ತಿರುವ ಒಂದು ರೀತಿಯ ಅಸಹನೆಯ ಹಿನ್ನೆಲೆಯಲ್ಲಿ ಈ ಹಾಡು ಮತ್ತೊಮ್ಮೆ ನೆನಪಾಗಿ ನನ್ನಲ್ಲಿ ಪ್ರಶ್ನೆಗಳ ಸರಮಾಲೆಯನ್ನೇ ಹುಟ್ಟುಹಾಕಿದೆ. ಅದರಲ್ಲಿ ಕೆಲವನ್ನು ಮುಂದಿಡುವ ಪ್ರಯತ್ನವೇ ಈ ಲೇಖನ. ಪ್ರೀತಿ [...]
