Posts Tagged ‘ಮಳೆ’

ಎಡೆಬಿಡದೆ ಸುರಿವ ಮಳೆಯ ಕಂಡರೇಕೋ ಭೀತಿ… ಹೀಗೆಯೇ  ಸುರಿದಿತ್ತಲ್ಲ ಧಾರೆಯಾಗಿ ನಿನ್ನ ಪ್ರೀತಿ… ಒಮ್ಮೆಲೇ ಸುರಿದು ಬರಿದಾದ ನಂತರ… ಬರಡಾದೀತಲ್ಲವೆ ಈ ಭೂಮಿಯೂ ನನ್ ತರ !!

 ನಿನ್ನೆದೆಯಲಿ ಊಟೆಯೊಡೆದು ಚಿಮ್ಮಿದ ಪ್ರೀತಿಯ ಜಿನುಗು ಭಾವಪ್ರವಾಹವಾಗಿ                            ನನ್ನೆದೆಯ ನಡುಗುಡ್ಡೆಯ ಸುತ್ತುವರಿದಾಗ ಮನದಲ್ಲೇನೋ ಅರಿಯದ ಪುಳಕವಿಂದು   ಆಗ ನನಗೆ ಗೊತ್ತಿರದೇ ಹೋಗಿದ್ದೆಂದರೆ ಏರಿದ ನೀರೂ ಇಂದಲ್ಲ ನಾಳೆ ಇಳಿಯಲೇಬೇಕೆಂದು…. ನಿನ್ನ ಗಮ್ಯದ ಕಡಲು ನಾನಲ್ಲವೆಂದು    J L J L J L J L J   ಎದೆಯ ಕಣಿವೆಯೊಳಗೆ ಧುಮ್ಮಿಕ್ಕುವ ನೆನಪುಗಳ ಜಲಪಾತಕೆ ಕಟ್ಟಬೇಕೆಂದು ಕಟ್ಟೆ ಕಹಿ ಸಿಹಿ ನೆನಪುಗಳ ಜೊತೆಗೆ ಒಲವಿನ ಒರತೆಯನೂ ಎದೆಯೊಳಗೇ ಅದುಮಿಟ್ಟೆ   ಈಗ ಬದುಕು [...]

  ಈ ಮುಂಗಾರು ಮಳೆಯ ದುನಿಯಾವೇ ವಿಚಿತ್ರ ಕಣ್ರಿ….ರಾಜ್ಯಾದ್ಯಂತ ಮತ್ತೊಮ್ಮೆ ಮುಂಗಾರು ಮಳೆ ಸುದ್ದಿ ಮಾಡಿದೆ. ಆದರೆ ಇದು ಯೋಗರಾಜ ಭಟ್ಟರ ಕೈ ಹಿಡಿದು ಉದ್ಧರಿಸಿದ ಮಳೆಯಲ್ಲ. ರಾಜ್ಯದ ರೈತರಿಗೆ ಕೈಕೊಟ್ಟ ಮಳೆ. ಶುರುವಿನಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ ಅಲ್ಪಸ್ವಲ್ಪ ಮಳೆ ಸುರಿದಿದ್ದು ಬಿಟ್ರೆ ಮಿಕ್ಕಂತೆ ರಾಜ್ಯದ ಉಳಿದ ಪ್ರದೇಶಗಳ ಸ್ಥಿತಿ ದೇವರಿಗೇ ಪ್ರೀತಿ ಎನ್ನುವಂತಾಗಿದೆ. ಮತ್ತೊಮ್ಮೆ ಮೋಡ ಬಿತ್ತನೆಯಂತಹ ವೈಜ್ಞಾನಿಕವಾಗಿ ಮಳೆ ಬರಿಸುವ ಪ್ರಯೋಗಗಳ ಬಗ್ಗೆ ಚಿಂತನೆ ನಡೆಯುತ್ತಿರುವ ಬೆನ್ನಲ್ಲೇ, ಕಪ್ಪೆ ಮದುವೆಯಂತಹ ಸುದ್ದಿಗಳೂ ಬರುತ್ತಿವೆ. [...]