Posts Tagged ‘ವಿಚಾರ’

ನಾನು ಹೋದರೆ ಹೋದೇನು ಅಂತ ಕನಕದಾಸರೇನೋ ಬಹಳ ಸುಲಭವಾಗಿ ಹೇಳಿದರು. ಆದರೆ ಈ ‘ನಾನು’ ಎಂಬುದೇ ಇಲ್ಲವಾದರೆ ನನ್ನ ಅಸ್ತಿತ್ವವಾದರೂ ಏನು ಉಳಿಯುತ್ತೆ ಸ್ವಾಮಿ? ಮಹಾನ ಸಾಧಕರಿಗೆ, ತಪಸ್ವಿಗಳಿಗೆ, ಜಿತೇಂದ್ರಿಯರಿಗಷ್ಟೆ ಇದು ಸುಲಭಸಾಧ್ಯವೇನೊ. ನನ್ನ-ನಿಮ್ಮಂತ ಹುಲುಮಾನವರಿಗೆ ಕೊನೆಯ ಉಸಿರಿರುವ ತನಕ ಬಹುಶಃ ಈ ನಾನು, ನನ್ನದು ನಮ್ಮವರು ಎಂಬ ಮೋಹ, ಮಮಕಾರ ತಪ್ಪಿದ್ದಲ್ಲ ಅನ್ನಿಸುತ್ತದೆ. ಇದಕ್ಕೆ ನಿದರ್ಶನ ಹುಡುಕುವುದಕ್ಕೆ ತೀರಾ ದೂರವೇನು ಹೋಗಬೇಕಾಗಿಲ್ಲ. ಈಗ ನನ್ನದು ಎರಡು ಬ್ಲಾಗ್‌ಗಳಿವೆ. ಆದರೆ ಯಾರಾದ್ರೂ ‘ಕುಂದಾಪ್ರ ಕನ್ನಡ’ ಬ್ಲಾಗ್ ನೋಡಿ [...]

ಕೊಚ್ಚಿಗೆ ಅಕ್ಕಿಯ ಗಂಜಿ ( boiled rice), ಮೇಲೊಂದೆರಡು ಚಮಚ ತುಪ್ಪ, ಇದರೊಟ್ಟಿಗೆ ಪರಿಮಳಕ್ಕೇ ನಾಲ್ಕು ತುತ್ತು ಹೆಚ್ಚು ಹೊಟ್ಟೆ ಸೇರುವಂತೆ ಮಾಡುವ ತಾಕತ್ತಿರೋ ಮಿಡಿ ಉಪ್ಪಿನಕಾಯಿ. ವಾಹ್ ! ಕ್ಯಾ ಸ್ವಾದ್ ಹೈ. ಸವಿದವನೇ ಬಲ್ಲ ಅದರ ಸವಿಯ. ಇಂಥಾ ಗಂಜಿಯೂಟವನ್ನು ಯಾವತ್ತಾದ್ರೂ ಮಾಡಿದ್ದೀರಾ? ನೀವು ಕುಂದಾಪ್ರ, ಉಡುಪಿ, ಮಂಗ್ಳೂರು ಕಡೆಯವರಾದ್ರೆ ನಿಮ್ಗೆ ಈ ರುಚಿ ಗೊತ್ತೇ ಇರುತ್ತೆ. ನಾನು ಶಾಲೆಗೆ ಹೋಗೋ ಸಮಯದಲ್ಲಿ ಆಗೆಲ್ಲ ನಮ್ಮ ಕಡೆ ಬಹುತೇಕರ ಮನೆಗಳಲ್ಲಿ ಬೆಳಗಿನ ಉಪಹಾರ ಅಂದ್ರೆ [...]

ಮೊನ್ನಿನ ಕರಾಳ ಶುಕ್ರವಾರದ ಘಟನೆಯ ಸುದ್ದಿ ಮಧ್ಯಾಹ್ನ ಮೂರು ಗಂಟೆಯ ಸುರುವಿಗೆ ಒಂದೊಂದಾಗಿ ಕಿವಿಯ ಮೇಲೆ ಬಂದು ಬೀಳಲಾರಂಭಿಸಿತ್ತು. ಆರು ಕಡೆ ಬಾಂಬ್ ಸ್ಫೋಟ ಅಂತೆ..ಅಲ್ಲಲ್ಲ ಎಂಟು ಕಡೆ ಅಂತೆ, ಐವತ್ತು ಜನ ಸತ್ತರಂತೆ, ನೂರಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆಯಂತೆ, ಜನರನ್ನು ಮೂಟೆಯಂತೆ ಹೊತ್ತು ಆಸ್ಪತ್ರೆಗೆ ಹಾಕ್ತಾ ಇದ್ದಾರಂತೆ, ಗರುಡಾ ಮಾಲ್‌ನಲ್ಲಿ ಮೊದಲು ಸ್ಫೋಟ ಆಯ್ತಂತೆ, ಶಿವಾಜಿನಗರದಲ್ಲೂ ಬಾಂಬ್ ಅಂತೆ..ಹೀಗೆ ರೆಕ್ಕೆ-ಪುಕ್ಕ ಕೂಡಿಸಿಕೊಂಡ ಸುದ್ದಿಗಳು ಸಾಲುಸಾಲಾಗಿ ಕಿವಿಯ ಮೇಲೆ ಬಂದು ಅಪ್ಪಳಿಸುತ್ತಿತ್ತು. ಎಲ್ಲರಲ್ಲೂ ಆತಂಕದ ಛಾಯೆ ಕವಿಯತೊಡಗಿತ್ತು. [...]

  ಇದಕ್ಕೆ ಹೇಗೆ ಪ್ರತಿಕ್ರಿಯೆ ತೋರಬೇಕೋ ಗೊತ್ತಾಗುತ್ತಾ ಇಲ್ಲ. ಅದೂ ಈ ಮಾತು ಬಂದಿದ್ದು ಸಮಸ್ತ ಕನ್ನಡಿಗರ ಹೆಮ್ಮೆ ಅಂತ ಕರೆಯಿಸಿಕೊಳ್ಳುವ ವಿಜಯಕರ್ನಾಟಕದಲ್ಲಿ. ಇವತ್ತಿನ ವಿಜಯ ಕರ್ನಾಟಕದ ಜ್ಯೋತಿಷ್ಯ ವಿಜಯದಲ್ಲಿ ಪ್ರಕಟವಾದದ್ದು ಇದು. “ಆತ್ಮಹತ್ಯೆಗೆ ಆ ವ್ಯಕ್ತಿಯ ಪೂರ್ವಜನ್ಮಾದಿ ಕರ್ಮಗಳೇ ಕಾರಣ. ಗುರುಹಿರಿಯರ ನಿಂದನೆ, ಮಾತಪಿತೃಗಳನ್ನು ಹಿಂಸಿಸಿರುವುದು, ಪತಿ-ಪತ್ನಿಯಲ್ಲಿ ವಿರಸ ಮೂಡಿಸಿರುವುದು, ಮೂಕಪ್ರಾಣಿಗಳಿಗೆ ಹಿಂಸೆ ನೀಡಿರುವುದು, ಮೋಸಮಾಡಿ ಮಾನಸಿಕ ಹಿಂಸೆ ನೀಡಿದ ದೋಷಗಳು ಈ ಜನ್ಮದಲ್ಲಿ ಆತ್ಮಹತ್ಯೆಗೆ ಪ್ರೇರಕವಾಗುತ್ತವೆ” ಅನ್ನುತ್ತೆ ಈ ಲೇಖನ.   ಇಂತಹ ಲೇಖನ [...]

  ನಿಮಗೆಂದಾದರೂ ಈ ರೀತಿಯ ಅನುಭವವಾಗಿದೆಯೇ? ಯಾರನ್ನೋ ಬಹುಕಾಲದ ನಂತರ ಭೇಟಿಯಾಗೋದು ಅಂತ ನಿಶ್ಚಯವಾಗಿರುತ್ತೆ. ಅವರಿನ್ನೇನು ನಾಳೆ ಬರಬಹುದು ಅನ್ನೋ ಹೊತ್ತಿಗಾಗಲೇ ಮನಸ್ಸಿನಲ್ಲಿ ಕಾತುರ, ಸಡಗರ-ಸಂಭ್ರಮ. ಆದರೆ ಆ ನಾಳೆ ಬಂದಾಗ, ಅವರನ್ನು ಭೇಟಿ ಆದಾಗ ಮನಸ್ಸು ಸಂತೋಷದಲ್ಲಿ ಇದ್ದರೂ ಕೂಡಾ ಏನೋ ಅಷ್ಟು ಖುಶಿಯಾಗಲಿಲ್ಲಪ್ಪ ಅಂತ ಒಳಮನಸು ಯಾಕೋ ಪಿಸುಗುಟ್ಟಿದಂತಾಗುತ್ತದೆ. ಬಹು ಆಸೆಯಿಂದ ಕೊಂಡು ತಂದ ವಸ್ತು-ವಡವೆ, ಆಸೆಪಟ್ಟು ಆರ್ಡರ್ ಮಾಡಿದ ಐಸ್‌ಕ್ರೀಂ, ಕಾದು ಬ್ಲ್ಯಾಕ್‌ನಲ್ಲಿ ಟಿಕೇಟ್ ಕೊಂಡು ನೋಡಿದ ಸಿನೆಮಾ… ಹೀಗೆ ಯಾವುದು ಬೇಕಿದ್ರೂ [...]