Posts Tagged ‘ವಿಮರ್ಶೆ’

ನಿರ್ದೇಶಕ ಶಶಾಂಕ್ ಸೂಕ್ಷ್ಮವಿಷಯವನ್ನು ನಿರೂಪಿಸುವಲ್ಲಿ ಗೆದ್ದಿದ್ದಾರೆ; ರಾಧಿಕಾ ಪಂಡಿತ್ ತಮ್ಮ ಅಭಿನಯದಿಂದ ಚಿತ್ರಪ್ರೇಮಿಗಳ ಹೃದಯ ಕದ್ದಿದ್ದಾರೆ; ಮನೋಮೂರ್ತಿ ಸಂಗೀತದ ಇಂಪಿನ ಮೂಲಕ ಮನ ತಟ್ಟಿದ್ದಾರೆ; ಆದ್ರೆ ತಾಲ್‌ನ್ ಟ್ಯೂನ್ ಕಾಪಿ ಮಾಡಿ ಸಿಕ್ಕಿ ಬಿದ್ದಿದ್ದಾರೆ….ಇದು ಮೊಗ್ಗಿನ ಮನಸ್ಸು ಸಿನಿಮಾದ ಒನ್ ಲೈನ್ ವಿಮರ್ಶೆ. ಮೊಟ್ಟ ಮೊದಲನೆಯದಾಗಿ ನಿರ್ದೇಶಕ ಶಶಾಂಕ್‌ಗೆ ಭೇಷ್ ಅನ್ನಲೇ ಬೇಕು. ಹಿಂದೆ ‘ಸಿಕ್ಸರ್’ ಬಾರಿಸಲು ಹೋಗಿ ಬೌಲ್ಡ್‌ ಔಟಾಗಿದ್ದ ಅವರು ತಮ್ಮ ಪ್ರತಿಭೆಯನ್ನೆಲ್ಲಾ ಧಾರೆಯೆರೆದು ಸೆಂಚುರಿ ಬಾರಿಸುವಂತಹ ಚಿತ್ರವೊಂದನ್ನು ಕೊಟ್ಟಿದ್ದಾರೆ. ಅರೆಬಿರಿದ ಮೊಗ್ಗಿನಂಥ ಹದಿವಯಸ್ಸಿನ [...]

ಪ್ರಕೃತಿ ಸೌಂದರ್ಯದ ಮಡಿಲಲ್ಲಿ ತಣ್ಣಗೆ ಮಲಗಿರುವ ಮಹಾರಾಷ್ಟ್ರದ ಒಂದು ಹಳ್ಳಿ. ಬೆಟ್ಟದ ಮೇಲೊಂದು ಗುಬ್ಬಚ್ಚಿ ಗೂಡಿನಂತಹ ಬೆಚ್ಚನೆಯ ಮನೆ. ವೆಚ್ಚಕ್ಕೆ ಹೊನ್ನಿನಂಗಡಿಯ ಕೆಲಸ. ಇಚ್ಛೆಯನರಿತು ನಡೆವ ನೆಚ್ಚಿನ ಹೆಂಡತಿ ರಾಧಾ. ಇವಳು ಅಪ್ಪಟ ಮದರಾಸಿ ಬ್ರಾಹ್ಮಣ ಗೃಹಿಣಿ. ಇದು ಸ್ವಾಮಿ ಅನ್ನೋ ಮಹಾರಾಷ್ಟ್ರಿಯನ್ ಬ್ರಾಹ್ಮಣನ ಬಯೋಡೇಟಾ. ಅಪ್ಪಟ ಮಧ್ಯಮ ವರ್ಗೀಯ ದಂಪತಿಗಳ ಬದುಕಿನ ನೋಟ. ಮುದ್ದು ಕುವರನೊಬ್ಬ ಜನಿಸಿ ಬದುಕಾಯ್ತು ಸುಂದರ ಹೂದೋಟ. ಮಗುವಿನ ಭವಿಷ್ಯದ ಸುತ್ತ ದಂಪತಿಗಳ ಕನಸಿನ ಓಟ.   ಸ್ವಾಮಿಯ ಬಡತನದ ಬಾಲ್ಯದಲ್ಲಿ [...]

ಶಂಕರನಾಗ್‌ರ ಹಳೆಯ ಚಿತ್ರದ ಶೀರ್ಷಿಕೆ, ಜೊತೆಗೆ ರಮೇಶ್ ನಿರ್ದೇಶನ ಕಮ್ ಅಭಿನಯದ ಚಿತ್ರ ಹಾಗು ಸಿನೆಮಾದ ಕುರಿತು ಕೇಳಿ ಬರುತ್ತಿದ್ದ ಮೆಚ್ಚುಗೆಯ ಮಾತುಗಳ ಹಿನ್ನೆಲೆಯಲ್ಲಿ ಅಪಾರ ನಿರೀಕ್ಷೆ ಇಟ್ಟುಕೊಂಡು ನೋಡಲು ಹೊರಟ ಚಿತ್ರವೇ.. ಆಕ್ಸಿಡೆಂಟ್. ಚಿತ್ರ ನೋಡಿ ಹೊರಬಂದ ಮೇಲೆ ಭರವಸೆ ಹುಸಿಯಾಗಲಿಲ್ಲ ಎಂಬ ಸಮಾಧಾನ; ಒಂದು ವಿಭಿನ್ನ ಚಿತ್ರವನ್ನು ನೋಡಿ ಆನಂದಿಸಿದ ಖುಷಿ. ಮಾಮೂಲಿ ಸಿದ್ಧಸೂತ್ರಗಳಿಂದ ತುಂಬಿರುವ ಮಸಾಲ ಚಿತ್ರಗಳಂತಿರದೆ ಪ್ರೇಕ್ಷಕರಿಗೆ ಭಿನ್ನ ಅನುಭವ ನೀಡಿದ್ದಕ್ಕಾಗಿ ರಮೇಶ್ ಅವರನ್ನು ಶ್ಲಾಘಿಸಬೇಕು.. ಅಭಿನಂದಿಸಬೇಕು.   ಚಿತ್ರದ ಕಥೆಯತ್ತ [...]