ನನ್ನೆದೆಯ ‘ಬ್ಲಾಗ್-ಸ್ಪಾಟ’ ನ್ನು ನಿನ್ನ ಪ್ರೀತಿಯ ವರ್ಡ್ – ಪ್ರೆಸ್ ಮಾಡಿದೆ… ಇಂಪ್ರೆಸ್ ಮಾಡಿದೆ!! ——————————————– ನಿನ್ನ ನಿರಾಕರಣದ ಸುತ್ತಿಗೆಯೇಟಿಗೆ ನನ್ನೆದೆಯಲಿ ನೆಟ್ಟು ಹೋದ ನೆನಪಿನ ಮೊಳೆಗಳು ಚುಚ್ಚುತಲೇ ಇವೆ… ಬಿಟ್ಟೂ ಬಿಡದೆ… ಕ್ಷಮಿಸೋಣವೆಂದು ನಾ ಹೆಣಗಿದೆ ಏಸೋ.. ಕ್ಷಮಿಸು ನಾ-ಆಗಲಾರೆ ಯೇಸು… ——————————————–
Posts Tagged ‘ಹನಿ ಹನಿ’
ಹೀಗೆ…ಸುಮ್ಮ್ನೆ…
Posted: April 30, 2011 in ಕವನ, ಕವಿತೆ, ಭಾವ ಭಿತ್ತಿ, ಮನಸಿನ ಹಾಡು, ಹನಿ ಹನಿ, ಹಾಗೆ ಸುಮ್ಮನೆTags: ಹನಿ ಹನಿ
ಮೂರು ಮುತ್ತು… ಕಣ್ಣಿಂದ ಜಾರಿ ಬಿತ್ತು…
Posted: April 17, 2011 in ಆಪ್ತಸ್ವರ, ಕವನ, ಕವಿತೆ, ನೆನಪುಗಳ ಮಾತು ಮಧುರ.., ಭಾವ ಭಿತ್ತಿ, ಮನಸಿನ ಹಾಡು, ಹನಿ ಹನಿ, ಹಾಗೆ ಸುಮ್ಮನೆTags: ಕವನ, ಕವಿತೆ, ಹನಿ ಹನಿ, ಹಾಡು ಪಾಡು, hani, kavana, kavite
ನಿನ್ನೆಯ ನೆನಪುಗಳ ಗಲ್ಲಿಗಳಲಿ ನಿನ್ನಯ ನಿರೀಕ್ಷೆಗಳ ನಾಳೆಗಳಲಿ ಸರಿದು ಹೋಗುತಿದೆ ಸದ್ದೇ ಇಲ್ಲದೆ… ನಿಲ್ಲದೇ ನೀ-ನಿಲ್ಲದೇ ವರ್ತಮಾನ -+-+-+-+-+-+-+-+-+-+-+-+-+-+-+- ಹಿಡಿಯಷ್ಟು ಪ್ರೀತಿ ಬಯಸಿ ಕೈಚಾಚಿದೆ ನಿನ್ನೆದುರು ಸಖಿ… ಬೊಗಸೆಯಷ್ಟು ಕಂಬನಿ ತುಂಬಿಸಿ ನಿನ್ನ ಲೋಕದಿ ನೀನು ಸುಖಿ… -+-+-+-+-+-+-+-+-+-+-+-+-+-+-+- ಹೇಳದೆ ಕೇಳದೆ ಎದೆಯ ಕೊಳದೊಳಗಿಳಿದು ಜೊತೆಯಲೇ ನನ್ನನೂ ಪ್ರೀತಿಯಾಳಕ್ಕೆಳೆದು ನಡುನೀರಲಿ ನನ್ನ ಬಿಟ್ಟು ಹೋದ ನೀರೆ ನಿನ್ನ ಪ್ರೀತಿ ಬಯಸಿದ ನನಗೆ ಮುಳುಗು ನೀರೆ? -+-+-+-+-+-+-+-+-+-+-+-+-+-+-+-
ಕಾಲ್ಗೆಜ್ಜೆ ದನಿಯ ಗಝಲು!!!
Posted: February 18, 2011 in ಆಪ್ತಸ್ವರ, ಇತ್ಯಾದಿ..., ಕವನ, ಕವಿತೆ, ನೆನಪುಗಳ ಮಾತು ಮಧುರ.., ಭಾವ ಭಿತ್ತಿ, ಮನಸಿನ ಹಾಡು, ಹನಿ ಹನಿ, ಹಾಗೆ ಸುಮ್ಮನೆTags: ಕವನ, ಕವಿತೆ, ಹನಿ ಹನಿ
ನನ್ನೆದೆಯ ಮಹಲಿನ ಮಜಲುಗಳ ತುಂಬೆಲ್ಲಾ ನಿನ್ನ ನೆನಪುಗಳ ಕಾಲ್ಗೆಜ್ಜೆ ದನಿಯ ಗಝಲು ———————– ಕನಸು ಸಾಯುವುದಿಲ್ಲ ಗೆಳತಿ… ಕನವರಿಕೆಗಳಾಗಿ ಕಾಡುತಾವೆ ನೆನಪುಗಳ ಗವಿಯೊಳಗೆ ಪಳೆಯುಳಿಕೆಯಂತುಳಿದು
ಎಷ್ಟು ಕೂಡಿ ಕಲೆತರೂ..ಅರ್ಥವಾಗದ ವನಿತೆಯ ಹಾಗೆ !!!
Posted: June 24, 2010 in ಆಪ್ತಸ್ವರ, ಕವನ, ಕವಿತೆ, ನೆನಪುಗಳ ಮಾತು ಮಧುರ.., ಮನಸಿನ ಹಾಡು, ಹನಿ ಹನಿ, ಹಾಗೆ ಸುಮ್ಮನೆTags: ಕವನಗಳು, ಕವಿತೆ, ಮನಸಿನ ಹಾಡು, ಹನಿ ಹನಿ, ಹಾಗೆ ಸುಮ್ಮನೆ
ಈ ಮೂರು ಮತ್ತೊಂದು ಹನಿಗಳು ಇವತ್ತಿನ ವಿಜಯಕರ್ನಾಟಕದ ಸಿಂಪ್ಲಿಸಿಟಿ ಪುಟದಲ್ಲಿ ಪ್ರಕಟವಾಗಿವೆ ———————————————————————- ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಬದುಕಿರಲಿ ಬಿಡು ಗೆಳತಿ ಸುಳ್ಳು ಸಮರ್ಥನೆಗಳ ನೆಪದಲಿ ಅವುಗಳ ಉತ್ತರ ಕ್ರಿಯೆ ಆಗೋದು ಬೇಡ ———————————- ಎಷ್ಟು ಕೂಡಿ ಕಳೆದರೂ ತಾಳೆಯಾಗದ ಈ ಗಣಿತವೇ ಹೀಗೆ, ಎಷ್ಟು ಕೂಡಿ ಕಲೆತರೂ ಅರ್ಥವಾಗದ ವನಿತೆಯ ಹಾಗೆ !! ———————————- ಪರೀಕ್ಷೆಯಲಿ ಬಿಟ್ಟ ಸ್ಥಳ ತುಂಬೋದು ಎಷ್ಟು ಸುಲಭ ಅನ್ನಿಸುತ್ತಿತ್ತು ಅದರ ಕಷ್ಟ ಗೊತ್ತಾಗಿದ್ದು ನೀ ಬಿಟ್ಟು ಹೋದ ಮೇಲೇನೇ !! ————————- ಬಾಳಿನ ಪುಟದ ಸಾಲಿನಲಿ [...]
ಎಲ್ಲಿಗೆ ಪಯಣ…??
Posted: June 21, 2010 in ಭಾವ ಭಿತ್ತಿ, ಮನಸಿನ ಹಾಡು, ಹನಿ ಹನಿ, ಹಾಗೆ ಸುಮ್ಮನೆTags: ಹನಿ ಹನಿ, kavite
ಗಮ್ಯವೆತ್ತಲೋ… ಗುರಿ ಯಾವುದೋ ಗೊತ್ತಿಲ್ಲ… ಓಡುತ್ತಿದ್ದೇವೆ ಮುಗ್ಗರಿಸಿ ಬಿದ್ದರೂ ಸಾವರಿಸಿಕೊಂಡೆದ್ದು ಮತ್ತೆ ಓಡುತ್ತಿದ್ದೇವೆ ಕಾಲಕ್ಕೆ ತಕ್ಕಂತೆ ಕೋಲ… ಬೆಂಕಿ ಹಚ್ಚಿದ ಬಾಲ ದಿಕ್ಕೆಟ್ಟು ಓಡುತ್ತಿದ್ದೇವೆ ಸಂಬಂಧ-ಬಂಧ ಅನುರಾಗ ಅನುಬಂಧ ಧಿಕ್ಕರಿಸಿ ಓಡುತ್ತಿದ್ದೇವೆ ಸ್ಪರ್ಧೆಯೋ ಜಿದ್ದೋ…ಅರಿಯದೆಯೋ ಅರಿತಿದ್ದೋ ಒಟ್ಟಾರೆ ಓಡುತ್ತಿದ್ದೇವೆ ಗೆಲ್ಲುವುದೆಂಬುದೇ ಇಲ್ಲ, ಬರಿ ಮೈಲಿಗಲ್ಲುಗಳೇ ಎಲ್ಲ ದಾಟಿ ಮುನ್ನುಗ್ಗಿ… ಓಡುತ್ತಿದ್ದೇವೆ ಕೊನೆಯಿಲ್ಲದ ಈ ಓಟ… ಕೊನೆಯ ನಿಲ್ದಾಣದ ತನಕ ನಿಲ್ಲದೇ ಓಡುತ್ತಿದ್ದೇವೆ
