ಮನಸಿನ ಪುಟಗಳ ನಡುವೆ ಖಾಲಿ ಹಾಳೆಗಳಿವೆ ಕೆಲವು.. ನೀ ಬರೆಯದೇ ಹೋದ ಒಲವಿನ ಸಾಲುಗಳವು… ———————————— ನಿನ್ನ ನೆನಪುಗಳಿಂದ ನನ್ನಲಿ ಮೂಡಿದ ಸಂಚಲನಗಳ ಸಂಕಲಿಸಿ ಕವಿತೆ ಎಂದು ಹೆಸರಿಟ್ಟೆ… ನಿಟ್ಟುಸಿರಿಟ್ಟೆ !! ————————————- ಈ ಹನಿಗಳೆಲ್ಲ ನನ್ನವಲ್ಲ ಗೆಳತಿ, ನೀನೇ ಬರೆಸಿದ್ದು…ಮತ್ತು ನೀನೇ ಬರಿಸಿದ್ದು ನಾನೋ ಬರಿ ನೆಪಮಾತ್ರದವ ಬರೆದಿದ್ದು ಮತ್ತು ಭರಿಸಿದ್ದು !! ———————————— ನಾನೇ ಬಯಸಿ ಪಡೆದರೆ ಅದು ದಿವ್ಯ ಏಕಾಂತ… ನೀನಿಲ್ಲದ ಒಂಟಿತನದಲಿ ಅನಿಸೋದು ಈ ಬದುಕು ಏಕಂತ? ———————————— ಬರೆದು ಬರಿದಾಗಿಹೆನು [...]
Posts Tagged ‘ಹನಿ’
ಕವಿತೆ ಎಂದು ಹೆಸರಿಟ್ಟೆ…ನಿಟ್ಟುಸಿರಿಟ್ಟೆ !!
Posted: November 3, 2009 in ಆಪ್ತಸ್ವರ, ನೆನಪುಗಳ ಮಾತು ಮಧುರ.., ಭಾವ ಭಿತ್ತಿ, ಮನಸಿನ ಹಾಡು, ಹನಿ ಹನಿ, ಹಾಗೆ ಸುಮ್ಮನೆTags: ಕವಿತೆ, ಹನಿ, ಹನಿಗವನ
ಎಡೆಬಿಡದೆ ಸುರಿವ ಮಳೆಯ ಕಂಡರೇಕೋ ಭೀತಿ… ಹೀಗೆಯೇ ಸುರಿದಿತ್ತಲ್ಲ ಧಾರೆಯಾಗಿ ನಿನ್ನ ಪ್ರೀತಿ… ಒಮ್ಮೆಲೇ ಸುರಿದು ಬರಿದಾದ ನಂತರ… ಬರಡಾದೀತಲ್ಲವೆ ಈ ಭೂಮಿಯೂ ನನ್ ತರ !!
ನನ್ನ ಉಸಿರುಸಿರಲೂ ನೀನಿರುವೆ ಅಂತೇನಿಲ್ಲ ನಿಟ್ಟುಸಿರಲಿ ನೀನಿರೋದು ನಿಂಗೇ ಗೊತ್ತಲ್ಲ… ——————————— ಹುಟ್ಟಿ ಸಾಯೋ ನೂರಾರು ಸಾಲುಗಳ ಬಿಟ್ಟು ಬಿಡು, ನಡುವಿನ ನಿಟ್ಟುಸಿರಿನಂತಹ ಮೌನಕ್ಕೆ ಕಿವಿಗೊಡು, ಅಂತಾದರೂ ನಿನ್ನ ಮುಟ್ಟಿ ತಟ್ಟೀತು.. ಹಾಡಾಗದೆ ಎದೆಯೊಳಗುಳಿದ ಪುಟ್ಟ ಸಾಲು ————————————- ಪ್ರೀತಿಯ ಮುಗಿಲ ಸಾಲು ಕರಗಿ ಮಳೆಯಾಗಲೇ ಇಲ್ಲ.. ಪದಗಳ ಜೋಡಿಸಿ ಬರೆದ ಸಾಲು ಕವಿತೆಯಾಗಲೇ ಇಲ್ಲ.. ಮುಗಿಲು ಇನ್ನೆಲ್ಲೋ ಮಳೆಯಾಗಿರಬೇಕು.. ಕವಿತೆ ಕಣ್ಣಲ್ಲೇ ಹೊಳೆಯಾಗಿರಬೇಕು ———————————————— ನಿನ್ನ ನೆನಪೇ ಬರದ ಜಾಗಕ್ಕೆ ಹೋಗೋಣವೆಂದು ಹೊರಟಿರುವೆ, ಜೊತೆಗೆ ನೀನೂ [...]
ಮುಗಿಲು ಮೌನದಲಿ ರೋಧಿಸುತ್ತಿತ್ತು… ಅಂತ್ಯವೇ ಇಲ್ಲದ ದುಃಖಕೆ ಮುನ್ನುಡಿಯೋ ಎಂಬಂತೆ ವಸುಧೆಯಾದರೋ ತಣ್ಣಗೆ ನಿದ್ರಿಸುತ್ತಿಹಳು ಕಾರಣವೇ ಹೇಳದೆ ಹೋದ ಹುಡುಗಿಯಂತೆ ——————————– ಜಗತ್ತಿನ ಮೊತ್ತ ಮೊದಲ ವಂಚನೆಯೇನಲ್ಲ ಇದು ಆದರೂ ನನ್ನ ಪಾಲಿಗಿದು ಮೊದಲನೆಯದು ಅಲ್ವಾ? ಜಗತ್ತಿನ ಕಟ್ಟ ಕಡೆಯವಳೇನು ನೀನಲ್ಲ ಆದರೂ ಅವರ್‍ಯಾರೂ ನೀನಾಗಲಾರರು ಅಲ್ವಾ? ——————————————– ಎರಡು ನಿರೀಕ್ಷೆ.. ಎರಡು ಮೌನ.. ಮತ್ತೆರಡು ದಿವ್ಯ ಏಕಾಂತಗಳ ನಡುವೆ ಬಂದು ಹೋದ ಎರಡು ಕನಸುಗಳ ನೆನಪುಗಳೇ ಸಾಕಲ್ಲವೆ… ಹೊಸ ಕನಸುಗಳೆರಡರ ಬೀಜಾಂಕುರಕ್ಕೆ
ಇವೆಲ್ಲವೂ ಇವತ್ತಿನ(16 ಅಕ್ಟೋಬರ್) ವಿಜಯಕರ್ನಾಠಕದಲ್ಲಿ ‘ಹನಿ ಹನಿ’ಯಲ್ಲಿ ಬಂದಂತ ನನ್ನ ಹನಿಗಳು….. ಸತ್ತು ಹೋದ ಸಂಬಂಧವ ನೆನೆಯೋದ್ಯಾಕೆ ಅಂತಿರಾ? ಸತ್ತವರು ಬದುಕಿ ಬಂದ ಪವಾಡಗಳಿವೆ ನಂಬ್ತೀರಾ? ————————— ಆಕಳಿಕೆ ಬಂದಾಗಲೆಲ್ಲ ಯಾರೋ ನೆನಪಿಸಿಕೊಂಡರು ಅಂತಾರೆ… ಅಯ್ಯೋ.. ನಿಂಗಂತೂ ದಿನವಿಡೀ ಆಕಳಿಸೋದೇ ಹಂಗಾರೆ ————————— ನಿನ್ನೇ ನಾನ್ಯಾಕೆ ಆರಿಸಿದ್ದು ಅಂತ ಕೇಳಿದ್ದೆ ನೀನೊಮ್ಮೆ ಈಗ ನಿನ್ನ ನೆನಪಾದಾಗಲೆಲ್ಲ ನನ್ನೇ ನಾ ಕೇಳೋದು ಅದನ್ನೇ ——————— ನಮ್ಮ ಪ್ರೀತಿಯ ಕೊಲೆಗಾರಳು ನೀನೇ ಆದರೂ ನನಗೇಕೆ ನಿನ್ನ ನೆನಪಲಿ ನರಳುವ ಜೀವಾವಧಿ [...]
