Posts Tagged ‘ಹಾಡು’

ನಾವು ಬದಲಾಗುತ್ತಿರಬೇಕಂತೆ… ಇಲ್ಲವಾದರೆ ಕಾಲದ ಯಾವುದೋ ಘಟ್ಟದಲ್ಲಿ ನಿಂತಿರುವಲ್ಲೇ ನಿಂತುಹೋಗಿ ಶಿಲೆಯಂತಾಗಿಬಿಟ್ಟು ಪಳೆಯುಳಿಕೆಗಳಾಗಿ ಬಿಡುತ್ತೇವಂತೆ   ನಿನ್ನೆ ಇಂದು ನಾಳೆಗಳಾಗಿ ಸೆಕೆಂಡು ನಿಮಿಷ ಘಂಟೆಗಳಾಗಿ ಉರುಳುವ ಕಾಲಚಕ್ರದೊಡನೆ ಗುಂಪಿನೊಳಗೆ ಗೋವಿಂದ ಅಂತ ನಾಲ್ಕ್ ಹೆಜ್ಜೆ ಹಾಕುತ್ತಿರಬೇಕಂತೆ   ನಿನ್ನೆಯದು ಇಂದಿಗೆ ರದ್ದಿಯಾಗುವ ಇಂದು ಅದಾಗಲೇ ಭೂತಕ್ಕೆ ಸಂದಾಯವಾಗುವ ನಾಳೆಯ ಹೊಸ್ತಿಲಾಚೆ ಕಾಲಿಟ್ಟು ಕಾಯುತ್ತಿರುವ ಈ ಧಾವಂತದ ಬದುಕಿನಲಿ ಕಾಲಕ್ಕೆ ತಕ್ಕ ಕೋಲ ಕಟ್ಟುತಿರುವವರು ಪಿಸುನುಡಿಯುವುದು ಕೇಳಿಸುತ್ತಿಲ್ಲವೇ… ಸರ್ವೈವಲ್ ಆಫ್ ಫಿಟ್ಟೆಸ್ಟ್ ಯುಗ ಯಾವತ್ತೋ ಮುಗಿದಿದೆ ಇನ್ನೇನಿದ್ರೂ ಸರ್ವೈವ್ [...]

ಇದನ್ನು ಕವನ ಅಥವ ಪದ್ಯ ಅನ್ನೋ ಎದೆಗಾರಿಕೆ ನನ್ನಲ್ಲಿಲ್ಲ…ಅದ್ರೂ ಮನಸಿನ ಮರ್ಮರಗಳೆಲ್ಲ ಕವಿತೆಗಳಾಗಬೇಕೆಂಬ ನಿಯಮವೇನಿಲ್ಲವಲ್ಲ. ಹಾಗಾಗಿ ಕೆಲವು ಸಾಲುಗಳು ಹಾಗೇ ಸುಮ್ಮನೆ…     ಸುಮ್ ಸುಮ್ನೆ ನೆನಪಾಗಿ ಕಾಡಬೇಡ್ವೇ.. ಯಾವಾಗ್ಲೂ ಕಣ್ಣಿಗೆ ಕಸ ಬಿತ್ತಂದ್ರೆ ಯಾರೂ ನಂಬಲ್ವೇ !   -.-.-.-.-.-.-.-.-.-.-.-.-.–.-.-.-.-.-.-.-.-   ಈ ಜಗತ್ತಲ್ಲಿ ಬದಲಾವಣೆ ನಿರಂತರ ಅನ್ನುತ್ತೆ ವೇದಾಂತ ಆದರೆ ನೀನೂ ಬದಲಾಗಿ ಬಿಟ್ಟೆ ನೋಡು… ಅದೇ ದುರಂತ   -.-.-.-.-.-.-.-.-.-.-.-.-.–.-.-.-.-.-.-.-.-   ಬಹಳ ದೂರ ನೀ ಹೋಗಿಬಿಟ್ಟೆ ಹಿಂದಿರುಗಿ ಬರಲಾಗದಷ್ಟು… ಬೇಸರವಾಗಿದ್ದು [...]

ಮಳೆಗಾಲದ ಅಂಗಳದ ದಬ್ಬೆ ಮೇಲಿನ ಪಾಚಿ ಲೋಳೆ ಮೇಲೆ ಕಾಲಿಟ್ಟು ಜಾರಿ ಬಿದ್ದಿದ್ದು   ನಿದ್ದೆಯೆಳೆದರೂ ಕಣ್ತೆರೆದು ಸೋಣೆಯಾರತಿ ಪಂಚಕಜ್ಜಾಯಕ್ಕೆ ಕಾಗದದ ಕೊಟ್ಟೆ ಹಿಡಿದಿದ್ದು   ಚಾಪೆ ಹಣ್ಣು ಪಿತ್ತವೆಂದು ಎಷ್ಟು ಹೇಳಿದರೂ ಕೇಳದೆ ಸಮಾ ತಿಂದು ಹೊಟ್ಟೆನೋವು ಬಂದಿದ್ದು   ಹಬ್ಬದಗುಡಿ ಸುತ್ತಿ ಸುತ್ತಿ ಬತ್ತಿಹೋಗಿ ನೋವಾದ ಪಾದಗಳಿಗೆ ಅಮ್ಮ ಎಣ್ಣೆ ಬಳಿದಿದ್ದು   ಕಾಟು ಮಾವಿನ ಮರಕ್ಕೆ ಸ್ಪರ್ಧೆಯ ಮೇಲೆ ಕಲ್ಲು ಹೊಡೆದು ಹುಳಿ-ಸಿಹಿ ಹಣ್ನು ತಿಂದಿದ್ದು   ಬಿಂಬಲಕಾಯಿಯ ರುಚಿ ನಾಲಿಗೆಗೆ ಸೋಕಿದಾಗ [...]

ನನ್ನ ನಿರೀಕ್ಷೆ-ಕನಸುಗಳೆಲ್ಲ ಕಣ್ಣ ಕಟ್ಟೆಯೊಳಗೆ ಜೋಪಾನವಾಗಿವೆ ಆದರೂ ಒಮ್ಮೊಮ್ಮೆ ಹನಿಯಾಗಿ ಹೊರಹೊಮ್ಮುತ್ತವೆ ನೀ ಬಂದೆಯಾ ಎಂದು ಇಣುಕಿ ನೋಡಲು ಅಷ್ಟೆ J J J J J   ಭಾವ ತೀರದೊಳು ನಾ ಏಕಾಂಗಿಯಲ್ಲ ತೀರದ ನೆನಪುಗಳ ಅಲೆಯ ಸಪ್ಪಳವಿದೆಯಲ್ಲ ಕಾಡುವ ಕ್ಷಣಗಳ ಮೊರೆತ ಭೋರ್ಗರೆಯುತ್ತಿದೆಯಲ್ಲ ಒದ್ದೆ ಮರಳಿನ ಮೇಲೆ ನಿನ್ನ ಹೆಜ್ಜೆಗುರುತಿದೆಯಲ್ಲ ಕಿವಿಯ ತುಂಬಿದ ನಿನ್ನ ಗೆಜ್ಜೆ ದನಿಯಿದೆಯಲ್ಲ ಅದಕೇ ಹೇಳಿದ್ದು ನಾ ಏಕಾಂಗಿಯಲ್ಲ… ನಿನ್ನ ಸಹಚರ್ಯದ ಮಧುರಸ್ಮೃತಿಯಿರುವ ತನಕ J J J J [...]

ಪ್ರತಿಭೆಗೆ ಪ್ರಾದೇಶಿಕತೆ, ಜಾತಿ-ಮತ ಇವ್ಯಾವುದೂ ಅಡ್ಡಗೋಡೆ ಆಗಬಾರದು. ಒಳ್ಳೆಯದು ಎಲ್ಲಿದ್ದರೂ ಅದನ್ನು ಮೆಚ್ಚುವ ಗುಣ ಆದರಣೀಯ. ಆದ್ರೆ ಪಕ್ಕದ್ಮನೆ ಹುಡುಗಿ ಚೆನ್ನಾಗಿದ್ದಾಳೆ ಅಂದ ಮಾತ್ರಕ್ಕೆ ಮನೇಲಿರೋ ಹೆಂಡ್ತಿನ ಕಾಲಕಸ ಮಾಡೋಕಾಗುತ್ತಾ ಹೇಳಿ? ಈ ಮಾತು ಯಾಕೆ ಹೇಳಿದೆ ಅಂದ್ರೆ, ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚುತ್ತಿರುವ ಪರಭಾಷಾ ಗಾಯಕ-ಗಾಯಕಿಯರ ಆಮದು ಯಾವ ಪರಿ ಬೆಳೆದಿದೆ ಅಂದ್ರೆ, ಇದರಿಂದಾಗಿ ಅಪ್ಪಟ ಕನ್ನಡದ ಪ್ರತಿಭೆಗಳು ಅವಕಾಶವೇ ಇಲ್ಲದೆ ಮೂಲೆಗುಂಪಾಗುತ್ತಿದ್ದಾರೆ ಅನ್ನಿಸೋವಷ್ಟು. ಕನ್ನಡದ ಪ್ರತಿಭೆಗಳಾದ ಹೇಮಂತ್, ನಂದಿತಾ, ಎಂ.ಡಿ.ಪಲ್ಲವಿ, ಸುಪ್ರಿಯಾ ಆಚಾರ್ಯ, ರಾಜೇಶ್ [...]