ಹೀಗೊಂದು ಮಾತು ನಮ್ ಕುಂದಾಪ್ರ ಕಡೆ ಇದೆ – “ಕಲ್ತ್‌ದ್ ಹೆಚ್ಚಾಯ್ತ್ ಕಾಲ್ ಮೇಲಾಯ್ತ್…ಗಾಳಿ ಬರ್ಕ್ ಮನಿಗ್ ಹೋಯ್ಕ್”. ಇದರ ಮೊದಲ ಭಾಗ ನೀವೂ ಕೇಳಿರಬಹುದು. ಆದರೆ ಈ ಮಾತಿಗೂ ಹಿನ್ನೆಲೆಯಾಗಿ ಒಂದು ಕತೆಯೋ ಕಟ್ಟು ಕತೆಯೋ ಇರಬೇಕಲ್ವೇ? ಈ ಮಾತನ್ನು ಯಾವ ಅರ್ಥದಲ್ಲಿ ಉಪಯೋಗಿಸುತ್ತಾರೆ ಅಂತ ಗೊತ್ತಿದ್ದರೂ ಕೂಡಾ ಇದರ ಹಿಂದಿನ ಕತೆ ಗೊತ್ತಿರಲಿಲ್ಲ. ಮೊನ್ನೆ ಒಂದು ಹಾಸ್ಯ ಯಕ್ಷಗಾನ ಪ್ರಸಂಗ ಕೇಳ್ತಾ ಇದ್ದೆ. ಅದರಲ್ಲಿನ ಪಾತ್ರಧಾರಿಯೊಬ್ಬರು ಸಂದರ್ಭೋಚಿತವಾಗಿ ಈ ಮಾತನ್ನು ಬಳಸಿದಾಗ ಅದರ ಹಿನ್ನೆಲೆಯನ್ನು [...]
Posts Tagged ‘ಹಾಸ್ಯ’
ಕಲ್ತ್‌ದ್ ಹೆಚ್ಚಾಯ್ತ್ ಕಾಲ್ ಮೇಲಾಯ್ತ್…ಗಾಳಿ ಬರ್ಕ್ ಮನಿಗ್ ಹೋಯ್ಕ್
Posted: August 11, 2008 in ನೆನಪುಗಳ ಮಾತು ಮಧುರ..Tags: ಕುಂದಾಪ್ರ, ಗಾದೆ, ಹಾಸ್ಯ
ಕುದುರೆ ಮೊಟ್ಟೆಯ ಕಥೆ…
Posted: July 13, 2008 in ಹರಟೆTags: ಕತೆ, ಕುದುರೆ ಮೊಟ್ಟೆ, ಗಾಂಪರ ಕತೆ, ಹಾಸ್ಯ, funny story, fuuny kannada story, gamapa story
ಇದು ಗಾಂಪರ ಕಥೆ ಹೌದೋ ಅಲ್ವೋ ಗೊತ್ತಿಲ್ಲ. ಪ್ರಾಥಮಿಕ ಶಾಲೆಯಲ್ಲಿದ್ದಾಗ ಕೇಳಿದ್ದು. ನೀವೂ ಈ ಕಥೆ ಕೇಳಿರಬಹುದು. ಅಳಿದುಳಿದ ನೆನಪಿನೊಂದಿಗೆ ಕಥೆ ಹೀಗಿದೆ… ಒಮ್ಮೆ ಗಾಂಪರ ಗುರುವಿಗೆ ಕುದುರೆ ಮೇಲೆ ತಿರುಗಬೇಕು ಅಂತ ಆಸೆಯಾಗುತ್ತೆ. ಆದ್ರೇನು ಮಾಡೋದು? ಕುದುರೆಯ ಬೆಲೆ ಭಾರಿ ದುಬಾರಿ. ಜೊತೆಗೆ ಈಗಿನ ತರಕಾರಿ. ತೈಲದ ಬೆಲೆಯೆ ತರಹವೇ ದಿನದಿನಕ್ಕೂ ಬೆಲೆ ಹೆಚ್ಚಾಗ್ತಾ ಇದೆ. ಹಾಗಾಗಿ ತಮ್ಮ ಆಸೆಯನ್ನು ಗುರುಗಳು ಅದುಮಿಟ್ಟುಕೊಂಡಿದ್ರು. ಅವರ ಶಿಷ್ಯರಿಗೆ ಗುರುಗಳ ಈ ಆಸೆಯ ಬಗ್ಗೆ ಹ್ಯಾಗೋ ಗೊತ್ತಾಯ್ತು. [...]
ಈ ಪ್ರಸಂಗ ಹೇಳಿದವರು ನನಗೆ ಹೈಸ್ಕೂಲಿನಲ್ಲಿ ಮೇಷ್ಟ್ರಾಗಿದ್ದ ಎಂ.ವಿ.ಹೆಗಡೆ. ಅವರು ಮೂಲತಃ ಉತ್ತರಕನ್ನಡದವರು. ಆರಂಭದಲ್ಲಿ ಪ್ರಾಥಮಿಕ ಶಾಲೆಗೆ ಮೇಷ್ಟ್ರಾಗಿ ಬಂದ ಅವರಿಗೆ ಕುಂದಾಪುರ ಕನ್ನಡದ ಪರಿಚಯವೇ ಇರಲಿಲ್ಲ. ಸಿದ್ದಾಪುರ(ಉಡುಪಿ ಜಿಲ್ಲೆ)ದಲ್ಲಿ ಅವರ ಪ್ರಾಥಮಿಕ ಶಾಲಾ ಶಿಕ್ಷಕ ವೃತ್ತಿಯ ಆರಂಭದಲ್ಲಿ ನಡೆದ ಒಂದು ಸ್ವಾರಸ್ಯಕರ ಘಟನೆಯನ್ನು ನಮಗೊಮ್ಮೆ ಕ್ಲಾಸಿನಲ್ಲಿ ಅವರು ಹೇಳಿದ್ರು. ಅದನ್ನೇ ಯಥಾವತ್ತಾಗಿ ನಿಮ್ಮ ಮುಂದಿಡುತ್ತಿದ್ದೇನೆ. ಸಿದ್ದಾಪುರದ ಶಾಲೆಗೆ ಮೇಷ್ಟ್ರಾಗಿ ಬಂದ ಹೊಸದು. ಯಾವುದೋ ತರಗತಿಯೊಂದರಲ್ಲಿ ಪಾಠ ಮಾಡುತ್ತಾ ಇದ್ರು. ಪಾಠ ಮುಗಿಯುವುದಕ್ಕೊ ಶಾಲೆಯ ‘ಲಾಂಗ್ [...]
ನಾವೆಲ್ಲ ಚಿಕ್ಕವರಾಗಿದ್ದಾಗ ಅನೇಕ ಕಥೆ, ಗಾದೆ ಒಗಟು ಇವನ್ನೆಲ್ಲಾ ಕೇಳಿಯೇ ಇರುತ್ತೇವೆ. ಅವುಗಳಲ್ಲಿ ಕೆಲವು ಎಷ್ಟು ಕಾಲವಾದರೂ ಹಸಿ ಗೋಡೆಯಲ್ಲಿ ನೆಟ್ಟ ಹರಳಿನಂತೆ ಗಟ್ಟಿಯಾಗಿ ಮನಸ್ಸಿನಲ್ಲಿ ಅಂಟಿಕೊಂಡಿರುತ್ತವೆ. ಅಂಥಾ ಒಂದು ನೆನಪು ಈ ಸುಕ್ರನ ಕಥೆ. ನೀವು ಕುಂದಾಪ್ರ ಕಡೆಯವರಾಗಿದ್ರೆ ಕಂಡಿತಾ ಈ ಕಥೆ ಕೇಳೇ ಇರುತ್ತೀರಿ. ಇಲ್ಲವಾದಲ್ಲಿ ಕೂಡಾ ನಿಮ್ಮ ಕಡೆಯದೇ ಆದ ಇದಕ್ಕೆ ಹತ್ತಿರವಾದ ಕಥೆಯನ್ನಾದ್ರೂ ಕೇಳಿರಬಹುದು. ಕಥೆ ಏನಪ್ಪಾ ಅಂದ್ರೆ … “ಸುಳ್ ಹೇಳೋ ಸುಕ್ರಾ ಅಂದ್ರೆ.. ವಾಟಿ ಅಂಡಿಯೊಳ್ಗೆ [...]
ಟಿ.ವಿ. ಸೀರಿಯಲ್ಲೂ… ದೇವರ ಟ್ರಬಲ್ಲೂ…
Posted: June 13, 2008 in ಹರಟೆTags: ಟಿ.ವಿ., ದೇವರು, ಧಾರಾವಾಹಿ, ಹರಟೆ, ಹಾಸ್ಯ
ಇದೇನಪ್ಪಾ… ಒಂದಕ್ಕೊಂದು ಅರ್ಥಾರ್ಥ ಸಂಬಂಧವಿಲ್ಲದ ತಲೆಬರಹ; ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಏನಯ್ಯಾ ಸಂಬಂಧ ಅಂದ್ಕೋತಿದ್ದೀರಾ? ಈಗ ಟಿ.ವಿ. ಸೀರಿಯಲ್ಲುಗಳು ಒಂದೊಂದಾಗಿ ದೇವರಿಗೆ ಇರುವ ಬಿರುದು, ಬಾವಲಿ, ಮಾನ್ಯತೆಗಳನ್ನೆಲ್ಲಾ ಕಿತ್ತುಕೊಂಡು ದೇವರ ಸ್ಥಾನಕ್ಕೇ ಸಂಚಕಾರ ತಂದಿರುವ ವಿಷಯ ನಿಮಗೆ ಗೊತ್ತಿಲ್ವಾ? ಹಾಗಿದ್ರೆ ಓದಿ ನೋಡಿ. ಮೊಟ್ಟ ಮೊದಲನೆಯದಾಗಿ ‘ದೇವನೊಬ್ಬ ನಾಮ ಹಲವು’ ಅನ್ನುವ ಮಾತಿದೆಯಷ್ಟೇ? ಈಗಿನ ಧಾರಾವಾಹಿಗಳನ್ನು ಗಮನಿಸಿ ನೋಡಿ. ಇರುವ ಹತ್ತಾರು-ನೂರಾರು ವಾಹಿನಿಗಳು ತಮ್ಮ ‘ಪ್ರೈಮ್ ಟೈಮ್’ನಲ್ಲಿ ವಿವಿಧ ಆಕರ್ಷಕ ಹೆಸರುಗಳ ಧಾರಾವಾಹಿಗಳನ್ನು ಬಿತ್ತರಿಸುತ್ತಿದ್ದರೂ ಕೂಡಾ, [...]
