Posts Tagged ‘film review’

ಕಳೆದ ವಾರದ ಅಂತ್ಯದಲ್ಲಿ ಎರಡು ಸಿನೆಮಾಗಳನ್ನು ನೋಡಿದೆ. ಮೊದಲನೆಯದು ‘ಗೋಲ್‌ಮಾಲ್ ರಿಟರ್ನ್ಸ್’. ಕೆಲವೊಂದು ಉತ್ತಮ ನಗೆಚಟಾಕಿಗಳು, ಒಂದೆರಡು ನಗು ಹುಟ್ಟಿಸುವ ಹಾಸ್ಯ ದೃಶ್ಯಗಳನ್ನು ಹೊರತುಪಡಿಸಿದರೆ ಮಿಕ್ಕಂತೆ ಹತ್ತರೊಟ್ಟಿಗೆ ಹನ್ನೊಂದು ಅನ್ನಿಸುವಂತಹ ಚಿತ್ರ. ಕೆಲವೊಂದು ನಗೆಚಟಾಕಿಗಳು ತೀರಾ ಹಳಸಲಾಗಿತ್ತು. ಗೋಲ್‌ಮಾಲ್ ಮೊದಲ ಭಾಗದಲ್ಲಿ ಇದ್ದ ಪರೇಶ್ ರಾವಲ್ ಅನುಪಸ್ಥಿತಿ ಎದ್ದು ಕಾಣಿಸುತ್ತಿತ್ತು. ಕ್ಲೈಮಾಕ್ಸ್ ಕೂಡಾ ವಿಚಿತ್ರ ಸರ್ಕಸ್‌ಗಳಿಂದ ಹಾಸ್ಯವಾಗುವ ಬದಲು ಹಾಸ್ಯಾಸ್ಪದ ಅನ್ನಿಸುತ್ತಿತ್ತು. ಆದರೂ ಮಾಡೋಕೆ ಬೇರೆ ಏನೂ ಕೆಲ್ಸ ಇಲ್ಲದಿದ್ದರೆ ಹೊತ್ತು ಕಳೆಯಲು ಒಮ್ಮೆ ನೋಡಬಹುದು ಅಷ್ಟೆ. [...]

ಪ್ರಕೃತಿ ಸೌಂದರ್ಯದ ಮಡಿಲಲ್ಲಿ ತಣ್ಣಗೆ ಮಲಗಿರುವ ಮಹಾರಾಷ್ಟ್ರದ ಒಂದು ಹಳ್ಳಿ. ಬೆಟ್ಟದ ಮೇಲೊಂದು ಗುಬ್ಬಚ್ಚಿ ಗೂಡಿನಂತಹ ಬೆಚ್ಚನೆಯ ಮನೆ. ವೆಚ್ಚಕ್ಕೆ ಹೊನ್ನಿನಂಗಡಿಯ ಕೆಲಸ. ಇಚ್ಛೆಯನರಿತು ನಡೆವ ನೆಚ್ಚಿನ ಹೆಂಡತಿ ರಾಧಾ. ಇವಳು ಅಪ್ಪಟ ಮದರಾಸಿ ಬ್ರಾಹ್ಮಣ ಗೃಹಿಣಿ. ಇದು ಸ್ವಾಮಿ ಅನ್ನೋ ಮಹಾರಾಷ್ಟ್ರಿಯನ್ ಬ್ರಾಹ್ಮಣನ ಬಯೋಡೇಟಾ. ಅಪ್ಪಟ ಮಧ್ಯಮ ವರ್ಗೀಯ ದಂಪತಿಗಳ ಬದುಕಿನ ನೋಟ. ಮುದ್ದು ಕುವರನೊಬ್ಬ ಜನಿಸಿ ಬದುಕಾಯ್ತು ಸುಂದರ ಹೂದೋಟ. ಮಗುವಿನ ಭವಿಷ್ಯದ ಸುತ್ತ ದಂಪತಿಗಳ ಕನಸಿನ ಓಟ.   ಸ್ವಾಮಿಯ ಬಡತನದ ಬಾಲ್ಯದಲ್ಲಿ [...]

ಶಂಕರನಾಗ್‌ರ ಹಳೆಯ ಚಿತ್ರದ ಶೀರ್ಷಿಕೆ, ಜೊತೆಗೆ ರಮೇಶ್ ನಿರ್ದೇಶನ ಕಮ್ ಅಭಿನಯದ ಚಿತ್ರ ಹಾಗು ಸಿನೆಮಾದ ಕುರಿತು ಕೇಳಿ ಬರುತ್ತಿದ್ದ ಮೆಚ್ಚುಗೆಯ ಮಾತುಗಳ ಹಿನ್ನೆಲೆಯಲ್ಲಿ ಅಪಾರ ನಿರೀಕ್ಷೆ ಇಟ್ಟುಕೊಂಡು ನೋಡಲು ಹೊರಟ ಚಿತ್ರವೇ.. ಆಕ್ಸಿಡೆಂಟ್. ಚಿತ್ರ ನೋಡಿ ಹೊರಬಂದ ಮೇಲೆ ಭರವಸೆ ಹುಸಿಯಾಗಲಿಲ್ಲ ಎಂಬ ಸಮಾಧಾನ; ಒಂದು ವಿಭಿನ್ನ ಚಿತ್ರವನ್ನು ನೋಡಿ ಆನಂದಿಸಿದ ಖುಷಿ. ಮಾಮೂಲಿ ಸಿದ್ಧಸೂತ್ರಗಳಿಂದ ತುಂಬಿರುವ ಮಸಾಲ ಚಿತ್ರಗಳಂತಿರದೆ ಪ್ರೇಕ್ಷಕರಿಗೆ ಭಿನ್ನ ಅನುಭವ ನೀಡಿದ್ದಕ್ಕಾಗಿ ರಮೇಶ್ ಅವರನ್ನು ಶ್ಲಾಘಿಸಬೇಕು.. ಅಭಿನಂದಿಸಬೇಕು.   ಚಿತ್ರದ ಕಥೆಯತ್ತ [...]