Posts Tagged ‘hani’

ನಿನ್ನೆಯ ನೆನಪುಗಳ ಗಲ್ಲಿಗಳಲಿ ನಿನ್ನಯ ನಿರೀಕ್ಷೆಗಳ ನಾಳೆಗಳಲಿ ಸರಿದು ಹೋಗುತಿದೆ ಸದ್ದೇ ಇಲ್ಲದೆ… ನಿಲ್ಲದೇ ನೀ-ನಿಲ್ಲದೇ ವರ್ತಮಾನ -+-+-+-+-+-+-+-+-+-+-+-+-+-+-+- ಹಿಡಿಯಷ್ಟು ಪ್ರೀತಿ ಬಯಸಿ ಕೈಚಾಚಿದೆ ನಿನ್ನೆದುರು ಸಖಿ… ಬೊಗಸೆಯಷ್ಟು ಕಂಬನಿ ತುಂಬಿಸಿ ನಿನ್ನ ಲೋಕದಿ ನೀನು ಸುಖಿ… -+-+-+-+-+-+-+-+-+-+-+-+-+-+-+- ಹೇಳದೆ ಕೇಳದೆ ಎದೆಯ ಕೊಳದೊಳಗಿಳಿದು ಜೊತೆಯಲೇ ನನ್ನನೂ ಪ್ರೀತಿಯಾಳಕ್ಕೆಳೆದು ನಡುನೀರಲಿ ನನ್ನ ಬಿಟ್ಟು ಹೋದ ನೀರೆ ನಿನ್ನ ಪ್ರೀತಿ ಬಯಸಿದ ನನಗೆ ಮುಳುಗು ನೀರೆ? -+-+-+-+-+-+-+-+-+-+-+-+-+-+-+-

ನೀ ಬಳಿಯಲಿರಲು ಗೆಳತಿ ಈ ಬದುಕಲಿ ಅಷ್ಟೇ ಸಾಕು ನೀ ದೂರವಾದರೆ… ಈ ಬದುಕು ಸಾಕು ಅಷ್ಟೇ..!! – – – – – – – – – – – – – – – – – — – – – – – – – – – – – – – – - ನಿನ್ನ ಮರೆಯಬೇಕೆಂಬ ಮನಸಿನ ಮನವಿಯ ಮನ್ನಿಸಿ ನಾ ಮರೆತೇಬಿಟ್ಟೆ ಮರುಘಳಿಗೆಯಲೇ ಮಧುರ ನೆನಪುಗಳ ಆಲಾಪವ ಆಲಿಸುತ ಮೈ ಮರೆತೇಬಿಟ್ಟೆ [...]

ತಣ್ಣಗಿದ್ದರೂ ಒಳಗೊಳಗೇ ದಹಿಸಿ ಕೊರೆವ ಮಂಜಿನಂತೆ… ನಿನ್ನ ತಂಪು ನೆನಪೂ ನನ್ನ ಸುಡುತಿದೆ ಬೆಂಕಿಯಂತೆ ———————————– ಕವಿತೆ ಅನ್ನುವರೇನು ಸಖಿ ಪೋಣಿಸಿದ ಪದಗಳ ಸಾಲಿಗೆ? ಕವಿತೆಯ ಅರ್ಥವೇ ಬೇರೆ ಇದೆ ಗೆಳತಿ ನನ್ನ ಪಾಲಿಗೆ ಅದು… ಮುರಿದು ಹೋದ ಕನಸೊಂದರ ತುಣುಕು ಮುಗಿದು ಹೋದ ಕ್ಷಣವೊಂದರ ಮೆಲುಕು ಮರೆಯಲಾಗದ ನಿನ್ನೊಂದು ಮಧುರ ನೆನಪು —————————————- ಕನಸಿನ ಕನ್ನಡಿಯ ಬಿಂಬಗಳೆಲ್ಲಾ ಮನಸಿನೊಳಗೆಯೇ ಬೆತ್ತಲಾಯ್ತು ನಿನ್ನ ಕಣ್-ಬೆಳಕಿಗೆ ಬೀಳುವ ಮೊದಲೇ ಮರೆಯಾಗಿ ಕತ್ತಲಾಯ್ತು ———————————— ನನ್ನ ಯಾತನೆಗಳನೆಲ್ಲ ನಿನ್ನ ಬಳಿ [...]

ಎಡೆಬಿಡದೆ ಸುರಿವ ಮಳೆಯ ಕಂಡರೇಕೋ ಭೀತಿ… ಹೀಗೆಯೇ  ಸುರಿದಿತ್ತಲ್ಲ ಧಾರೆಯಾಗಿ ನಿನ್ನ ಪ್ರೀತಿ… ಒಮ್ಮೆಲೇ ಸುರಿದು ಬರಿದಾದ ನಂತರ… ಬರಡಾದೀತಲ್ಲವೆ ಈ ಭೂಮಿಯೂ ನನ್ ತರ !!