ಆತ್ಮಕತೆಗಳೆಂದರೆ ವ್ಯಕ್ತಿಯೋರ್ವ ತನ್ನೊಂದಿಗೆ ತಾನೇ ನಡೆಸುವ ಮೌನ ಸಲ್ಲಾಪ-ಆಪ್ತ ಸಂವಾದ. ತನ್ನ ಬದುಕು ಸಾಗಿ ಬಂದ ಹಾದಿಯ ಬದುವಿನ ಮೇಲೆ ನಿಂತು ನಡೆಸುವ ಆತ್ಮ ನಿರೀಕ್ಷಣೆ. ಸರಿ-ತಪ್ಪುಗಳ ತಕ್ಕಡಿಯಲ್ಲಿ ತನ್ನನ್ನು ತಾನೇ ತೂಗಿಕೊಳ್ಳುವ ಸ್ವಯಂ ವಿಮರ್ಶೆ. ಬರಹದ ಪ್ರಾಮಾಣಿಕತೆ ಗುಲಗುಂಜಿಯಷ್ಟು ಏರುಪೇರಾದರೂ ಸುಲಭವಾಗಿ ಆತ್ಮರತಿಯಂತಾಗಿ ಬಿಡಬಹುದಾದ ಅಪಾಯ ಸದಾ ಇದ್ದೇ ಇರುತ್ತದೆ. ಅಲ್ಲದೆ ವ್ಯಕ್ತಿಯೋರ್ವನೆ ಬದುಕಿನಲ್ಲಿ ಬರುವ ಅನ್ಯರ ಕುರಿತು ಬರೆಯುವಾಗ ಕೂಡಾ ಸರಿಗೆಯ ಮೇಲಿನ ನಡಿಗೆಯಷ್ಟೇ ಎಚ್ಚರವಿರದೇ ಹೋದರೆ ಅನಗತ್ಯ ವಿವಾದಗಳಿಗೆ ಸಿಲುಕಬೇಕಾದೀತು. ಪ್ರತಿಯೊಬ್ಬನ ಬದುಕಿನಲ್ಲೂ [...]
Posts Tagged ‘kannada book review’
ಇಡ್ಲಿ ಬಟ್ಟಲಿನಿಂದ ಆರ್ಕಿಡ್ ಮೆಟ್ಟಿಲವರೆಗೆ..
Posted: May 18, 2008 in ಪುಸ್ತಕಗಳುTags: aatmakathe, autobiography kannada, kannada book, kannada book review, kannada books, kannada pustaka vimarshe, pustak vimarshe
ಕುವೆಂಪು ಮಲೆನಾಡಿನಲ್ಲಿ ಒಂದು ಸುತ್ತು..
Posted: May 11, 2008 in ಪುಸ್ತಕಗಳುTags: kaanooru heggaDati, kannada, kannada book review, kanuru heggaDati, kuvempu, kuvempu novel, malenaaDu
ಮಲೆನಾಡು ಅಂದಾಕ್ಷಣ ಮನಸು ಗೊತ್ತಿಲ್ಲದಂತೆ ಅರಳಿ ನಿಲ್ಲುತ್ತೆ. ನಾಸ್ಟಾಲ್ಜಿಯಾನೋ, ಪ್ರಕೃತಿಯ ಮಡಿಲಿನ ಆಹ್ಲಾದದ ನೆನಪೋ, ಇಲ್ಲಾ ಎಲ್ಲರಿಗೂ ಇರುವಂತೆ ನಮ್ಮ ನಮ್ಮ ಊರಿನ ಕುರಿತು ಇರುವ ವಿಚಿತ್ರ ವಿಶಿಷ್ಟ ಎಳೆತ ಸೆಳೆತಗಳೋ…ಒಟ್ಟಿನಲ್ಲಿ ಮಲೆನಾಡು ಶಬ್ದ ಕಿವಿ ತಮ್ಮಟೆಯ ಮೇಲೆ ಜೇನು ಸುರಿದಂತಾ ಅನುಭವ ಕೊಡೋದು ಸುಳ್ಳಲ್ಲ. ನಾ ಏನೇ ವರ್ಣಿಸಿದರೂ ಆ ಅನುಭೂತಿ ಎಲ್ಲ ಉಪಮೆ, ಸಾಮತಿ, ದೃಷ್ಟಾಂತಗಳ ಎಲ್ಲೆ ಮೀರಿದ್ದೆನ್ನುವುದಂತೂ ಸತ್ಯ. ಇಂತಹ ಮನಸಿನ ಕೈಗೇನಾದ್ರೂ ಕುವೆಂಪು ಕಾದಂಬರಿಗಳು ಸಿಕ್ಕಿದ್ರೆ ಹಬ್ಬದ ಹೋಳಿಗೆ-ತುಪ್ಪ ಇದರ ಮುಂದೆ [...]
ತೇಜಸ್ವಿಯವರ ಹೊಸ ಪುಸ್ತಕ ಓದಿದ್ರಾ…?!!
Posted: May 10, 2008 in ಪುಸ್ತಕಗಳುTags: book review, kannada, kannada book review, kannada books, kannada books review, kannada pustaka, new kannada books, pustaka, Tejaswi, tejaswi books, tejaswi new books
ಮೊನ್ನೆ ಎಂದಿನಂತೆ ನನ್ನ ಅಚ್ಚುಮೆಚ್ಚಿನ ಪುಸ್ತಕ ಮಳಿಗೆಗೆ ಗಾಂಧಿಬಜಾರಿನ ಅಂಕಿತ ಪುಸ್ತಕ ಮಳಿಗೆಗೆ ಹೋಗಿದ್ದೆ – ವಾರಾಂತ್ಯದ ಖರ್ಚಿಗೆ ಏನಾದ್ರೂ ಬೇಕಲ್ಲ ಓದೋಕೆ ಅಂತ. ಹೊಸ- ಹಳೆ ಪುಸ್ತಕಗಳ ಮೇಲೆಲ್ಲ ಒಂದ್ಸಲ ಕಣ್ಣುಹಾಯಿಸಿ ೨-೩ ಪುಸ್ತಕವನ್ನು ಪ್ರೀತಿಯಿಂದ ಕೈಗೆತ್ತಿಕೊಂಡೆ. ಪುಸ್ತಕದ ಹಣ ಕೊಟ್ಟು ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಪ್ರಕಾಶ್ ಕಂಬತ್ತಳ್ಳಿ ಅವ್ರು ಕೇಳಿದ್ರು… ತೇಜಸ್ವಿಯವರ ಹೊಸ ಪುಸ್ತಕ ಬಂದಿದೆ ನೋಡಲಿಲ್ವ? ಅರೆ ಏನು ಹೇಳ್ತಾ ಇದ್ದಾರೆ ಇವ್ರು ಅಂಬಂತೆ ಇಡೀ ಮುಖವನ್ನೇ ಪ್ರಶ್ನೆ ಮಾಡಿಕೊಂಡು ನಿಂತೆ. ಅವ್ರು [...]
