ಮೊದಲಿಗೆ ಕಾಡಿಗೊಂದು ಥ್ಯಾಂಕ್ಸ್ ಹೇಳಲೇಬೇಕು. ಬಾಲ್ಯಕಾಲದಲ್ಲಿ ಭಾವಕೋಶದೊಳಕ್ಕಿಳಿದು… ನೆನಪಿನಾಳದಲ್ಲಿ ಬೆಚ್ಚಗೆ ಕುಳಿತು… ತನ್ನೆಲ್ಲಾ ನಿಗೂಡತೆ, ಬೆರಗು-ಬೆಡಗು-ಸೊಬಗುಗಳ ಬೀಜಗರ್ಭದಿಂದ ಕತೆಯಾಗಿ ಮೊಳೆತು… ಈಗ ನಮ್ಮನ್ನೂ ಆ ನಿಗೂಢ ಜಗತ್ತಿನ ಅಲೆದಾಟಕ್ಕೆ ಕೊಂಡೊಯ್ಯುವಂತೆ ಜೋಗಿಯನ್ನು ಕಾಡಿದ ಕಾಡಿಗೊಂದು ಕೃತಜ್ಞತೆ ಹೇಳದಿದ್ರೆ ಪುಸ್ತಕ ನೀಡಿದ ಸಂತೋಷಕ್ಕೆ ಮೋಸ ಮಾಡಿದ ಹಾಗೆ. ಜೋಗಿ ಬಾಲ್ಯಕಾಲದಲ್ಲಿ ಕಂಡು ಸಂಭ್ರಮಿಸಿದ, ಅಗಾಧತೆಯಿಂದ ಬೆರಗಿಗೀಡಾದ, ನಿಗೂಢತೆಯಿಂದ ದಿಗಿಲುಗೊಂಡ, ಪ್ರಕೃತಿ ಮಾತೆಯ ಮಡಿಲಲ್ಲಿ ಆರಾಮದಿಂದ ವಿಹರಿಸಿದ ವಿರಮಿಸಿದ ಆ ಕಾಡಿನ ಜಾಡಿನಲ್ಲಿ ಹೆಜ್ಜೆ ಹಾಕುತ್ತಾ ಸಾಗಿದಂತೆಲ್ಲ ಕತೆ ಮರೆಯುತ್ತದೆ; [...]
Posts Tagged ‘kannada books’
ಜೋಗಿಯ ಕಾಡು… ಚಿಟ್ಟೆ ಹೆಜ್ಜೆ ಜಾಡು
Posted: July 7, 2009 in ಪುಸ್ತಕಗಳುTags: ಚಿಟ್ಟೆ ಹೆಜ್ಜೆ ಜಾಡು, ಜೋಗಿ, ಪುಸ್ತಕ, book review, Chitte hejje jaaDu, Jogi, kannada books
ಇಡ್ಲಿ ಬಟ್ಟಲಿನಿಂದ ಆರ್ಕಿಡ್ ಮೆಟ್ಟಿಲವರೆಗೆ..
Posted: May 18, 2008 in ಪುಸ್ತಕಗಳುTags: aatmakathe, autobiography kannada, kannada book, kannada book review, kannada books, kannada pustaka vimarshe, pustak vimarshe
ಆತ್ಮಕತೆಗಳೆಂದರೆ ವ್ಯಕ್ತಿಯೋರ್ವ ತನ್ನೊಂದಿಗೆ ತಾನೇ ನಡೆಸುವ ಮೌನ ಸಲ್ಲಾಪ-ಆಪ್ತ ಸಂವಾದ. ತನ್ನ ಬದುಕು ಸಾಗಿ ಬಂದ ಹಾದಿಯ ಬದುವಿನ ಮೇಲೆ ನಿಂತು ನಡೆಸುವ ಆತ್ಮ ನಿರೀಕ್ಷಣೆ. ಸರಿ-ತಪ್ಪುಗಳ ತಕ್ಕಡಿಯಲ್ಲಿ ತನ್ನನ್ನು ತಾನೇ ತೂಗಿಕೊಳ್ಳುವ ಸ್ವಯಂ ವಿಮರ್ಶೆ. ಬರಹದ ಪ್ರಾಮಾಣಿಕತೆ ಗುಲಗುಂಜಿಯಷ್ಟು ಏರುಪೇರಾದರೂ ಸುಲಭವಾಗಿ ಆತ್ಮರತಿಯಂತಾಗಿ ಬಿಡಬಹುದಾದ ಅಪಾಯ ಸದಾ ಇದ್ದೇ ಇರುತ್ತದೆ. ಅಲ್ಲದೆ ವ್ಯಕ್ತಿಯೋರ್ವನೆ ಬದುಕಿನಲ್ಲಿ ಬರುವ ಅನ್ಯರ ಕುರಿತು ಬರೆಯುವಾಗ ಕೂಡಾ ಸರಿಗೆಯ ಮೇಲಿನ ನಡಿಗೆಯಷ್ಟೇ ಎಚ್ಚರವಿರದೇ ಹೋದರೆ ಅನಗತ್ಯ ವಿವಾದಗಳಿಗೆ ಸಿಲುಕಬೇಕಾದೀತು. ಪ್ರತಿಯೊಬ್ಬನ ಬದುಕಿನಲ್ಲೂ [...]
ತೇಜಸ್ವಿಯವರ ಹೊಸ ಪುಸ್ತಕ ಓದಿದ್ರಾ…?!!
Posted: May 10, 2008 in ಪುಸ್ತಕಗಳುTags: book review, kannada, kannada book review, kannada books, kannada books review, kannada pustaka, new kannada books, pustaka, Tejaswi, tejaswi books, tejaswi new books
ಮೊನ್ನೆ ಎಂದಿನಂತೆ ನನ್ನ ಅಚ್ಚುಮೆಚ್ಚಿನ ಪುಸ್ತಕ ಮಳಿಗೆಗೆ ಗಾಂಧಿಬಜಾರಿನ ಅಂಕಿತ ಪುಸ್ತಕ ಮಳಿಗೆಗೆ ಹೋಗಿದ್ದೆ – ವಾರಾಂತ್ಯದ ಖರ್ಚಿಗೆ ಏನಾದ್ರೂ ಬೇಕಲ್ಲ ಓದೋಕೆ ಅಂತ. ಹೊಸ- ಹಳೆ ಪುಸ್ತಕಗಳ ಮೇಲೆಲ್ಲ ಒಂದ್ಸಲ ಕಣ್ಣುಹಾಯಿಸಿ ೨-೩ ಪುಸ್ತಕವನ್ನು ಪ್ರೀತಿಯಿಂದ ಕೈಗೆತ್ತಿಕೊಂಡೆ. ಪುಸ್ತಕದ ಹಣ ಕೊಟ್ಟು ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಪ್ರಕಾಶ್ ಕಂಬತ್ತಳ್ಳಿ ಅವ್ರು ಕೇಳಿದ್ರು… ತೇಜಸ್ವಿಯವರ ಹೊಸ ಪುಸ್ತಕ ಬಂದಿದೆ ನೋಡಲಿಲ್ವ? ಅರೆ ಏನು ಹೇಳ್ತಾ ಇದ್ದಾರೆ ಇವ್ರು ಅಂಬಂತೆ ಇಡೀ ಮುಖವನ್ನೇ ಪ್ರಶ್ನೆ ಮಾಡಿಕೊಂಡು ನಿಂತೆ. ಅವ್ರು [...]
‘ದಂಗೆಯ ದಿನಗಳು’ ಓದಿದ್ರಾ?
Posted: April 27, 2008 in ಪುಸ್ತಕಗಳುTags: book review, dangeya dinagalu, kannada books, pustaka vimarshe, ravi belagere, ravi belagere books
ಇತಿಹಾಸವೆಂದರೆ ನಮ್ಮ ಪಾಲಿಗೆ ಬರೀ ರಾಜರುಗಳು ಸತ್ತ, ಹುಟ್ಟಿದ ಇಸವಿಗಳನ್ನು, ಯುದ್ಧ ನಡೆದ ದಿನಾಂಕಗಳನ್ನು ಬಾಯಿಪಾಠ ಮಾಡುವ ನೀರಸ ಪ್ರಕ್ರಿಯೆ. ಶಾಲಾ ಕಾಲೇಜುಗಳ ಪಠ್ಯಗಳಲ್ಲಿ ಓದಿರುವುದು – ಉರು ಹೊಡೆದು ಪರೀಕ್ಷೆಗಳಲ್ಲಿ ಕಾರಿಕೊಂಡಿದ್ದೂ ಇದನ್ನೇ. ಆದರೆ ಇತಿಹಾಸವೆಂದರೆ ಬರೀ ಇಷ್ಟೇ ಅಲ್ಲ. ಸ್ವಾರಸ್ಯಕರವಾಗಿ, ಯಥಾವತ್ತಾಗಿ ಘಟನೆಗಳನ್ನು ಮಂಡಿಸಿದರೆ ಓದುವವರ ಪಾಲಿಗೆ ರಸಗವಳವಾಗಬಲ್ಲುದು ಅಂತ ರವಿ ಬೆಳಗೆರೆ ನಿರೂಪಿಸಿದ್ದಾರೆ. ಮನೋಹರ್ ಮಳಗಾಂವಕರ್ ಕೃತಿಯನ್ನು ಸೊಗಸಾಗಿ ಅನುವಾದಿಸಿ, ತಮ್ಮದೇ ವಿಶಿಷ್ಟ ಶೈಲಿಯಲ್ಲಿ ನಿರೂಪಿಸಿ ‘ದಂಗೆಯ ದಿನಗಳು’ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. [...]
