Posts Tagged ‘kannada film review’

ನಿರ್ದೇಶಕ ಶಶಾಂಕ್ ಸೂಕ್ಷ್ಮವಿಷಯವನ್ನು ನಿರೂಪಿಸುವಲ್ಲಿ ಗೆದ್ದಿದ್ದಾರೆ; ರಾಧಿಕಾ ಪಂಡಿತ್ ತಮ್ಮ ಅಭಿನಯದಿಂದ ಚಿತ್ರಪ್ರೇಮಿಗಳ ಹೃದಯ ಕದ್ದಿದ್ದಾರೆ; ಮನೋಮೂರ್ತಿ ಸಂಗೀತದ ಇಂಪಿನ ಮೂಲಕ ಮನ ತಟ್ಟಿದ್ದಾರೆ; ಆದ್ರೆ ತಾಲ್‌ನ್ ಟ್ಯೂನ್ ಕಾಪಿ ಮಾಡಿ ಸಿಕ್ಕಿ ಬಿದ್ದಿದ್ದಾರೆ….ಇದು ಮೊಗ್ಗಿನ ಮನಸ್ಸು ಸಿನಿಮಾದ ಒನ್ ಲೈನ್ ವಿಮರ್ಶೆ. ಮೊಟ್ಟ ಮೊದಲನೆಯದಾಗಿ ನಿರ್ದೇಶಕ ಶಶಾಂಕ್‌ಗೆ ಭೇಷ್ ಅನ್ನಲೇ ಬೇಕು. ಹಿಂದೆ ‘ಸಿಕ್ಸರ್’ ಬಾರಿಸಲು ಹೋಗಿ ಬೌಲ್ಡ್‌ ಔಟಾಗಿದ್ದ ಅವರು ತಮ್ಮ ಪ್ರತಿಭೆಯನ್ನೆಲ್ಲಾ ಧಾರೆಯೆರೆದು ಸೆಂಚುರಿ ಬಾರಿಸುವಂತಹ ಚಿತ್ರವೊಂದನ್ನು ಕೊಟ್ಟಿದ್ದಾರೆ. ಅರೆಬಿರಿದ ಮೊಗ್ಗಿನಂಥ ಹದಿವಯಸ್ಸಿನ [...]

ಅದೊಂದು ಮಳೆಯ ದಿನ ಸುರಿವ ಮಳೆಯಲ್ಲಿ ಒಡೋಡುತ್ತಾ ರೈಲು ಹತ್ತುವ ಪ್ರದೀಪ್‌ಗೆ ( ಸುದೀಪ್ ) ಅದು ತನ್ನ ಬದುಕಿಗೇ ಹೊಸ ತಿರುವು ತರುವ ಪ್ರಯಾಣ ಆಗಲಿದೆ ಅಂತಾ ಗೊತ್ತಿರಲಿಲ್ಲ. ತನ್ನ ನಗೆಚಟಾಕಿಗಳಿಂದ ಸಹ ಪ್ರಯಾಣಿಕರನ್ನು ನಗಿಸುತ್ತಾ ಇರುವಾಗ ಹೂಬಳ್ಳಿಯಂತಹ ಹುಬ್ಬಳ್ಳಿ ಹುಡುಗಿ ಕಣ್ಣಿಗೆ ಬೀಳ್ತಾಳೆ. ಸರಿ ಇನ್ನೇನು ಪ್ರೇಮ ಕಥೆ ಶುರು ಅಂತೀರಾ..? ಆದ್ರೆ ಕಥೆ ಬೇರೇನೆ ಇದೆ. ಮುಸ್ಸಂಜೆಯಲ್ಲಿ ನಿಧಾನವಾಗಿ ಆವರಿಸುವ ಕತ್ತಲೆಯ ತೆರೆಯಂತೆ ಹುಡುಗಿಯ ಮೊಗದಲಿ ಮ್ಲಾನತೆಯ ಮುಸುಕು… ಆಗ ಆತ್ಮವಿಶ್ವಾಸ ಮೂಡಿಸಲು [...]

 CAPÀUÀ¼ÀÄ 3 ( 5 – CvÀÄåvÀÛªÀÄ , 4 – GvÀÛªÀÄ , 3 – ¸ÁzsÁgÀt, 2 – PÀ¼À¥É , 1 – wÃgÁ PÀ¼À¥É ) ನಾಗಶೇಖರ್ ನಿರ್ದೇಶನದ ಅರಮನೆ ಚಿತ್ರ ನೋಡಿ ಹೊರಬಂದ ಮೇಲೆ ಅನ್ನಿಸಿದ್ದಿದು. ಚಿತ್ರ ನಿರ್ಮಾಣದ ಸಮಯದಲ್ಲಿ ಚಿತ್ರದ ಕುರಿತು ಕೇಳಿ ಬಂದ ಅಪಾರ ಮೆಚ್ಚುಗೆಯ ಮಾತುಗಳು ಮತ್ತು ನಾಗಶೇಖರ್‌ರ ಅಪಾರ ಪರಿಶ್ರಮದ ಬಗ್ಗೆ ಮಾಧ್ಯಮಗಳಲ್ಲಿ ಬಂದಿದ್ದ ವಿವರಣೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅಪಾರ ನಿರೀಕ್ಷೆ ಇಟ್ಟುಕೊಂಡು ಚಿತ್ರ ನೋಡಲು [...]

ಶಂಕರನಾಗ್‌ರ ಹಳೆಯ ಚಿತ್ರದ ಶೀರ್ಷಿಕೆ, ಜೊತೆಗೆ ರಮೇಶ್ ನಿರ್ದೇಶನ ಕಮ್ ಅಭಿನಯದ ಚಿತ್ರ ಹಾಗು ಸಿನೆಮಾದ ಕುರಿತು ಕೇಳಿ ಬರುತ್ತಿದ್ದ ಮೆಚ್ಚುಗೆಯ ಮಾತುಗಳ ಹಿನ್ನೆಲೆಯಲ್ಲಿ ಅಪಾರ ನಿರೀಕ್ಷೆ ಇಟ್ಟುಕೊಂಡು ನೋಡಲು ಹೊರಟ ಚಿತ್ರವೇ.. ಆಕ್ಸಿಡೆಂಟ್. ಚಿತ್ರ ನೋಡಿ ಹೊರಬಂದ ಮೇಲೆ ಭರವಸೆ ಹುಸಿಯಾಗಲಿಲ್ಲ ಎಂಬ ಸಮಾಧಾನ; ಒಂದು ವಿಭಿನ್ನ ಚಿತ್ರವನ್ನು ನೋಡಿ ಆನಂದಿಸಿದ ಖುಷಿ. ಮಾಮೂಲಿ ಸಿದ್ಧಸೂತ್ರಗಳಿಂದ ತುಂಬಿರುವ ಮಸಾಲ ಚಿತ್ರಗಳಂತಿರದೆ ಪ್ರೇಕ್ಷಕರಿಗೆ ಭಿನ್ನ ಅನುಭವ ನೀಡಿದ್ದಕ್ಕಾಗಿ ರಮೇಶ್ ಅವರನ್ನು ಶ್ಲಾಘಿಸಬೇಕು.. ಅಭಿನಂದಿಸಬೇಕು.   ಚಿತ್ರದ ಕಥೆಯತ್ತ [...]