ನಿನ್ನೆಯ ನೆನಪುಗಳ ಗಲ್ಲಿಗಳಲಿ ನಿನ್ನಯ ನಿರೀಕ್ಷೆಗಳ ನಾಳೆಗಳಲಿ ಸರಿದು ಹೋಗುತಿದೆ ಸದ್ದೇ ಇಲ್ಲದೆ… ನಿಲ್ಲದೇ ನೀ-ನಿಲ್ಲದೇ ವರ್ತಮಾನ -+-+-+-+-+-+-+-+-+-+-+-+-+-+-+- ಹಿಡಿಯಷ್ಟು ಪ್ರೀತಿ ಬಯಸಿ ಕೈಚಾಚಿದೆ ನಿನ್ನೆದುರು ಸಖಿ… ಬೊಗಸೆಯಷ್ಟು ಕಂಬನಿ ತುಂಬಿಸಿ ನಿನ್ನ ಲೋಕದಿ ನೀನು ಸುಖಿ… -+-+-+-+-+-+-+-+-+-+-+-+-+-+-+- ಹೇಳದೆ ಕೇಳದೆ ಎದೆಯ ಕೊಳದೊಳಗಿಳಿದು ಜೊತೆಯಲೇ ನನ್ನನೂ ಪ್ರೀತಿಯಾಳಕ್ಕೆಳೆದು ನಡುನೀರಲಿ ನನ್ನ ಬಿಟ್ಟು ಹೋದ ನೀರೆ ನಿನ್ನ ಪ್ರೀತಿ ಬಯಸಿದ ನನಗೆ ಮುಳುಗು ನೀರೆ? -+-+-+-+-+-+-+-+-+-+-+-+-+-+-+-
Posts Tagged ‘kavana’
ಮೂರು ಮುತ್ತು… ಕಣ್ಣಿಂದ ಜಾರಿ ಬಿತ್ತು…
Posted: April 17, 2011 in ಆಪ್ತಸ್ವರ, ಕವನ, ಕವಿತೆ, ನೆನಪುಗಳ ಮಾತು ಮಧುರ.., ಭಾವ ಭಿತ್ತಿ, ಮನಸಿನ ಹಾಡು, ಹನಿ ಹನಿ, ಹಾಗೆ ಸುಮ್ಮನೆTags: ಕವನ, ಕವಿತೆ, ಹನಿ ಹನಿ, ಹಾಡು ಪಾಡು, hani, kavana, kavite
ಎಡೆಬಿಡದೆ ಸುರಿವ ಮಳೆಯ ಕಂಡರೇಕೋ ಭೀತಿ… ಹೀಗೆಯೇ ಸುರಿದಿತ್ತಲ್ಲ ಧಾರೆಯಾಗಿ ನಿನ್ನ ಪ್ರೀತಿ… ಒಮ್ಮೆಲೇ ಸುರಿದು ಬರಿದಾದ ನಂತರ… ಬರಡಾದೀತಲ್ಲವೆ ಈ ಭೂಮಿಯೂ ನನ್ ತರ !!
ಪುಸ್ತಕ ಬಿಡುಗಡೆಗೆ ಖಂಡಿತಾ ಬರ್ತೀರಲ್ಲವೇ?
Posted: June 11, 2008 in ಪುಸ್ತಕಗಳುTags: ಪುಸ್ತಕ ಬಿಡುಗಡೆ, book, book release, kavana, poems
ಮನಸಿನ ಅಂಗಳದಲ್ಲಿ ಮೂಡಿ ಮರೆಯಾಗುವ, ಈಗಿದ್ದು ಇಲ್ಲವಾಗುವ ನೂರು ಸಾವಿರ ಭಾವಗಳಲ್ಲಿ ಆಗೊಮ್ಮೆ ಈಗೊಮ್ಮೆ ಒಡಮೂಡಿದ ಆಪ್ತ ದನಿಗಳನ್ನು ಹೆಕ್ಕಿ ನಿಮ್ಮ ಮುಂದೆ ಹರವುತ್ತಿದ್ದೇನೆ. ನೆನಪಿನ ಯಾವ ಪದರದಲ್ಲೋ ಅವಿತ ನವಿರು ಕಂಪನಗಳಿಗೆ ಅಕ್ಷರ ರೂಪ ನೀಡಿ ನಿಮ್ಮೆದುರು ಇಡುತ್ತಿದ್ದೇನೆ. ಈ ನೂರಾರು ಸ್ವರ ಕಂಪನಗಳಲ್ಲಿ ಒಂದೆರಡಾದರೂ ನಿಮ್ಮ ಮನಸ್ಸಿನ ಕದ ತಟ್ಟಿದರೆ ಹೊರ ಹೊಮ್ಮಿದ ಅಂತರಂಗದ ದನಿ ಸಾರ್ಥಕವಾದಂತೆ. ಅಂತರಂಗದ ಸರಿಗಮಪದನಿ ಗುನುಗುತಲಿದೆ ಮನಸಿನ ಇನಿದನಿ ಮನಸಿನೊಳಗಿನ ಪಿಸುಮಾತು ಪದಗಳಾಗಿ ಹೊರಬಂತು [...]
ಬದುಕಿನ ಚಿತ್ತಾರದ ಬಣ್ಣಗಳೆಷ್ಟು?
Posted: May 18, 2008 in ಮನಸಿನ ಹಾಡುTags: kannada poem, kavana, padya, poem
ಕಳೆದ ನಿನ್ನೆಯ ರಂಗಿನ್ನೂ ಮಾಸಿಲ್ಲ ಈವತ್ತಿಗಾಗಲೇ ಹೊಚ್ಚ ಹೊಸ ಬಣ್ಣ ಮುಂದೆ ಏನಿದೆಯೋ ಯಾರಿಗೂ ಗೊತ್ತಿಲ್ಲ ನಾಳೆಯ ಕನಸಿನೋಕುಳಿ ತುಂಬಿದೆ ಕಣ್ಣ ಕಾಡುವ ನಿನ್ನೆಯ ಯಾತನೆ ಇಂದಿಲ್ಲ ವರ್ತಮಾನದ ಬಿಸಿಗೆ ಹಳೆಯದು ರದ್ದಿ ನಾಳೆಯ ಯೋಚನೆಯು ಈಗಲೆ ಬೇಕಿಲ್ಲ ಹೇಳಿ ಹೊಸತೇನಿದೆ ಈ ಕ್ಷಣದ ಸುದ್ದಿ ಆದರೂ ಒಮ್ಮೊಮ್ಮೆ ಭೂತದಲಿ ಇಣುಕುತ್ತಾ ಪಳೆಯುಳಿಕೆಗಳ ನಡುವೆ ಅಂಡಲೆವ ಚಾಳಿ ಕಲಸಿ ಹೋದ ಬಣ್ಣಗಳ ಬೆದಕುತ್ತಾ ಕಳೆದ ರಂಗು ಮತ್ತೆ ಸಿಗಬಹುದೇ ಹೇಳಿ
