Posts Tagged ‘poem’

ಎಡೆಬಿಡದೆ ಸುರಿವ ಮಳೆಯ ಕಂಡರೇಕೋ ಭೀತಿ… ಹೀಗೆಯೇ  ಸುರಿದಿತ್ತಲ್ಲ ಧಾರೆಯಾಗಿ ನಿನ್ನ ಪ್ರೀತಿ… ಒಮ್ಮೆಲೇ ಸುರಿದು ಬರಿದಾದ ನಂತರ… ಬರಡಾದೀತಲ್ಲವೆ ಈ ಭೂಮಿಯೂ ನನ್ ತರ !!

ಇನ್ನೆಷ್ಟು ಕಾಲ ಸಹಿಸಿ ತೆಪ್ಪಗಿರಬೇಕು…?   ಹೊಡೆದರೂ ಬಡಿದರೂ, ವಾಚಾಮಗೋಚರ ಬೈದರೂ ತುಟಿಪಿಟಕ್ಕೆನ್ನದಂತೆ ಸುಮ್ಮನಿರಬೇಕಂತೆ   ಆಳಿನಂತೆ ದುಡಿದರೂ, ಹಗಲಿರುಳು ಗೇಯ್ದರೂ ಕೈಕಾಲು ಬತ್ತಿದರೂ ಸುಮ್ಮನಿರಬೇಕಂತೆ   ಜೂಜಿನಲಿ ಹಣ ಕಳೆದರೂ, ಮೋಜಿನಲಿ ಮೈ ಮರೆತರೂ ಮನೆ ಮರ್ಯಾದೆಗಾಗಿ ಸುಮ್ಮನಿರಬೇಕಂತೆ   ಹಣ ತರಲಿಲ್ಲವೆಂದು ಜರಿದರೂ, ಉರಿವ ಕೊಳ್ಳಿಯನೇ ನುರಿದರೂ ಅವುಡುಗಚ್ಚಿ ಸಹಿಸಿಕೊಂಡು ಸುಮ್ಮನಿರಬೇಕಂತೆ   ಮನು ಹೇಳಿದ್ದ ನಂಬಿ, ಮನಸಿನ ಮಾತನ್ನೇ ನುಂಗಿ ನಾಲ್ಕು ಕೊಣೆಯೊಳಗೇ ಬಂಧಿಯಾದರೂ ಸುಮ್ಮನಿರಬೇಕಂತೆ   ತಾಳಿಗೆ ಕೊರೊಳೊಡ್ಡಿದ ಮಾತ್ರಕ್ಕೆ, ಕುಣಿಸೋ [...]

  ಕಳೆದು ಹೋಗಿದೆ ಕನಸೊಂದು ಹುಡುಕಿಕೊಡುವೆಯಾ           ಹಳೆಯ ನೆನಪುಗಳ ಹಾಳೆಯ ನಡುವೆಲ್ಲೋ..   ಮರೆತು ಹೋಗಿದೆ ರಾಗವೊಂದು ನುಡಿಸುವೆಯಾ           ಅನುರಾಗ ಪಲ್ಲವಿಯ ಚರಣಗಳ ನಡುವೆಲ್ಲೋ…   ಮೂಕವಾಗಿದೆ ಮಾತು ದನಿಗೂಡಿಸುವೆಯಾ           ಏಕಾಂತ ಮೌನದ ಮುಸುಕಿನ ಅಡಿಯೆಲ್ಲೋ…   ಬಾಡಿಹೋಗಿದೆ ವನಸುಮವೊಂದು ಅರಳಿಸುವೆಯಾ           ನೆನಪುಗಳ ಕಾನನದ ನಟ್ಟ ನಡುವೆಯೆಲ್ಲೋ…   ಅಳಿದು ಹೋಗಿದೆ ನಂಬಿಕೆ ಉಳಿಸಿಕೊಡುವೆಯಾ           ಮುರಿದ ಸಂಬಂಧ ಸಂಕೋಲೆಯ ಕೊಂಡಿಯಲೆಲ್ಲೋ…   ಆತ್ಮೀಯತೆಯ ಅರ್ಥ ಕಲಿಸಿಕೊಡುವೆಯಾ           ಕೃತಕ ನಗುವಿನ [...]

  ಕಳೆದ ನಿನ್ನೆಯ ರಂಗಿನ್ನೂ ಮಾಸಿಲ್ಲ ಈವತ್ತಿಗಾಗಲೇ ಹೊಚ್ಚ ಹೊಸ ಬಣ್ಣ ಮುಂದೆ ಏನಿದೆಯೋ ಯಾರಿಗೂ ಗೊತ್ತಿಲ್ಲ ನಾಳೆಯ ಕನಸಿನೋಕುಳಿ ತುಂಬಿದೆ ಕಣ್ಣ   ಕಾಡುವ ನಿನ್ನೆಯ ಯಾತನೆ ಇಂದಿಲ್ಲ ವರ್ತಮಾನದ ಬಿಸಿಗೆ ಹಳೆಯದು ರದ್ದಿ ನಾಳೆಯ ಯೋಚನೆಯು ಈಗಲೆ ಬೇಕಿಲ್ಲ ಹೇಳಿ ಹೊಸತೇನಿದೆ ಈ ಕ್ಷಣದ ಸುದ್ದಿ   ಆದರೂ ಒಮ್ಮೊಮ್ಮೆ ಭೂತದಲಿ ಇಣುಕುತ್ತಾ ಪಳೆಯುಳಿಕೆಗಳ ನಡುವೆ ಅಂಡಲೆವ ಚಾಳಿ ಕಲಸಿ ಹೋದ ಬಣ್ಣಗಳ ಬೆದಕುತ್ತಾ ಕಳೆದ ರಂಗು ಮತ್ತೆ ಸಿಗಬಹುದೇ ಹೇಳಿ

  ಅವನೊಬ್ಬ ಅನಿವಾಸಿ ಅವಳ್ಹೆಸರು ಅವಿನಾಶಿ ಭೇಟಿಯಾದರು ಅಂತರ್ಜಾಲದಿ ಚಾಟಿಸಿ ಅರಳಿದ ಪ್ರೇಮವು ಶುದ್ಧ ಫ್ಯಾಂಟಸಿ ಅಂತರ್ಜಾಲದ ಅಂತರ್‌ಪಟವ ಸೇರಿಸಿ ದಂಪತಿ ಅವರೀಗ ‘ನೆಟ್’ ಅಲ್ಲೇ ವರಿಸಿ ಬಂಧುಗಳು ಇವರ ‘ಮೇಲ್’ ಅಲ್ಲೇ ಹರಸಿ ವೆಬಕ್ಯಾಮ್‌ನೊಳಗೆ ಕಣ್ಣೀರು ಸುರಿಸಿ ಮನೆತುಂಬಿಸಿಕೊಂಡರು ಮೌಸ್ ಕ್ಲಿಕ್ಕಿಸಿ ತಾಳಿ (ಟ್ಯಾಲಿ) ಇಲ್ಲದ ಇ-ಮದುವೆ ಕತೆ ಆಲಿಸಿ ನಿಮ್ಮ ಅನಿಸಿಕೆಗಳನು ‘ಬ್ಲಾಗ್’ ಅಲ್ಲಿ ಬ್ಲಾಗಿಸಿ