Posts Tagged ‘yakshagana’

ಕಂಚಿನ ಕಂಠ ಅಂದಾಗಲೆಲ್ಲ ನಮ್ಮ ಕಣ್ಮುಂದೆ ಬರುವುದು ದಿ| ಗುಂಡ್ಮಿ ಕಾಳಿಂಗ ನಾವುಡರ ಚಿತ್ರ. ಅವರಿದ್ದಷ್ಟು ಕಾಲ ಭಾಗವತಿಕೆಗೆ ಪರ್ಯಾಯ ಪದವೇ ಕಾಳಿಂಗ ನಾವುಡ ಅನ್ನುವಷ್ಟರ ಮಟ್ಟಿಗೆ ಯಕ್ಷರಂಗದಲ್ಲಿ ಏಕಮೇವಾದ್ವಿತೀಯರಾಗಿ ಮೆರೆದವರವರು. ಇಂದಿಗೂ ಅವರ ಹಾಡುಗಾರಿಕೆಯ ಧ್ವನಿಮುದ್ರಿಕೆಯನ್ನು ಕೇಳಿದಾಗ ಆ ಸ್ವರಾನುಭೂತಿಯ ಮೋಡಿಯಲ್ಲಿ ಮೈಮರೆಯುವ ಲಕ್ಷಾಂತರ ಯಕ್ಷಪ್ರೇಮಿಗಳ ಮನಸ್ಸಿನಲ್ಲಿ ಅವರ ಕಂಚಿನ ಕಂಠದ ನೆನಪು ಸದಾ ಹಸಿರು. ಅಂತಹ ಕಾಳಿಂಗ ನಾವುಡರು ನಿರ್ಮಿಸಿಹೋದ ಪರಂಪರೆಯ ಜಾಡಿನಲ್ಲಿ ಹೆಜ್ಜೆಹಾಕುತ್ತಾ ಪ್ರವರ್ಧಮಾನಕ್ಕೆ ಬರುತ್ತಿರುವ ಭಾಗವತರೊಬ್ಬರು ಕಾಳಿಂಗ ನಾವುಡರ ಸ್ವರದ ಛಾಪನ್ನು [...]

ಇದೇನು ಮಲೆನಾಡು-ಕರಾವಳಿಗಳ ಹವಾಮಾನ ಮುನ್ಸೂಚನೆಯಂತಿದೆಯಲ್ಲ ಅಂತ ತಲೆ ತುರಿಸಿಕೊಳ್ತಾ ಇದ್ದೀರಾ? ಇದು ಸ್ವಾತಂತ್ರ್ಯೋತ್ಸವದ ಮುನ್ನಾದಿನ ಸೋನೆ ಮಳೆಯಲ್ಲಿ ಮಿಂದು ತಂಪಾದ ಬೆಂಗಳೂರಿನ ಯಕ್ಷಗಾನಪ್ರಿಯರ ಮನಕ್ಕೆ ರಾತ್ರಿ ಪೂರಾ ತಂಪೆರೆದ ಯಕ್ಷರಸ ಧಾರೆಯ ಒಂದೆರಡು ಹುಂಡುಗಳು. ಎರಡು ಪ್ರಚಂಡ ಯಕ್ಷಗಾನ ಮೇಳಗಳ ಸಮ್ಮಿಲನದಲ್ಲಿ ನಡೆದ ಕೂಡಾಟದ ಮಳೆಯಲ್ಲಿ ಮಿಂದ ಮನಸ್ಸಿನಿಂದ ಆಟ ಮುಗಿದ ಮೇಲೂ ನೆನಪಾಗಿ ತೊಟ್ಟಿಕ್ಕಿದ ರಸ ಬಿಂದುಗಳು. ‘ಯಕ್ಷರಂಗದ ಸಿಡಿಲಮರಿ’ ಎಂದೇ ಖ್ಯಾತಿವೆತ್ತ ತೀರ್ಥಳ್ಳಿ ಗೋಪಾಲಾಚಾರಿಯವರ ಸುಧನ್ವ, ಅಬ್ಬರದ ಪಾತ್ರಗಳಲ್ಲಿ ಆರ್ಭಟಿಸುವ ಮದನಾರಿಯಾಗುವ ಕಾರ್ಕಳ ಶಶಿಕಾಂತ [...]

ನನಗೀಕೆಯ ಪರಿಚಯವಾಗಿದ್ದು ಸುಮಾರು ಹದಿನಾರು ವರ್ಷಗಳಷ್ಟು ಹಿಂದೆ. ಅವಳ ಬದುಕಿನ ದುರಂತ ಕಥೆಯನ್ನು ಕೇಳಿ ಕಣ್ಣೀರು ಮಿಡಿದದ್ದೂ ಆಗಲೇ. ಅಲ್ಲಿಂದ ಮುಂದೆ ಆಗೊಮ್ಮೆ ಈಗೊಮ್ಮೆ ಮನಸಿನ ಮೂಲೆಯಿಂದೆದ್ದು ಬರುತ್ತಿದ್ದಳು. ನೂರಾರು ಪ್ರಶ್ನೆಗಳ ಕೇಳಿ ಕಾಡುತ್ತಿದ್ದಳು. ಮತ್ತೆ ಸದ್ದಿಲ್ಲದೆ ತಟಕ್ಕನೆದ್ದು ಮನಸಿನ ಮೂಲೆ ಸೇರಿ ಬಿಡುತ್ತಿದ್ದಳು. ಮೊನ್ನೆ ಟಿ.ವಿ.ಯಲ್ಲಿ ಅವಿನಾಶ್-ಮಾಳವಿಕ ದಂಪತಿಗಳ ಸಂದರ್ಶನ ನೋಡುತ್ತಿದ್ದಾಗ ಮತ್ತೆ ಮನಸಿನ ಮಹಡಿಯಿಂದ ಇಣುಕಿದಳು – ಅದೇ ಉತ್ತರವಿಲ್ಲದ ನೂರಾರು ಪ್ರಶ್ನೆಗಳನ್ನು ಹೊತ್ತ ಮುಖಭಾವದೊಂದಿಗೆ. ಈಕೆ ಹೀಗೆ ನೆನಪಾಗಲು ಕಾರಣ ಅವಿನಾಶ್-ಮಾಳವಿಕ ದಂಪತಿಗಳ [...]