ನನ್ನ ಫ್ರೆಂಡೊಬ್ರು ಪತ್ರೊಡೆ ಮಾಡೋಕೆ ಹೋಗಿ ಅದು ಗಟ್ಟಿಯಾಗಿ ಪತ್ಥರ್ ವಡೆ ಆಯ್ತಂತೆ…

ಆ ಪ್ರಸಂಗ ಎತ್ತಿಕೊಂಡು ಗೋವಿಂದಾಯ ನಮಹ ಹಾಡಿಗೆ ಪತ್ರೊಡೆ ಮಸಾಲ ಹಾಕಿ ಮಿಕ್ಸ್ ಮಾಡಿದ್ರೆ ಹೆಂಗಿರುತ್ತೆ ನೋಡೋಣ ಅಂತ :-)

ಪತ್ಥರ್ ಗೆ ಆಗ್ ಬಿಟ್ಟೈತೆ ಪತ್ರೊಡೆ… ಪತ್ಥತ್ ಗೆ ಆಗ್ ಬಿಟ್ಟೈತೆ

ವೇಸ್ಟ್ ಗೆ ಆಗ್ ಬಿಟ್ಟೈತೆ ಪತ್ರೊಡೆ…ವೇಸ್ಟ್ ಗೆ ಆಗ್ ಬಿಟ್ಟೈತೆ

ಖಾನೇ ಲಾಯಕ್… ಅನ್ಸತಾ ಇಲ್ಲ ಪತ್ರೊಡೆ
ತಿಂದ್ ಗಿಂದ್…. ಹೊಟ್ಟೇ ನೋವು ಬರ್ತದೇ
ಮಾಡಿದ್ದೆಲ್ಲಾ ಹಾಳಾಗ್ ಬಿಟ್ಟೈತೆ

ಕಲ್ಲು ತಿಂದು ಹಲ್ಲು ಬಿದ್ದು….ನಮ್ಮ ಮನ್ಯಲ್ ಎಲ್ಲ ನಂಗೆ…ಕ್ಯಾಕರ್ಸಿ ಉಗಿತವ್ರೇ
ನಿಮ್ದೂಕೇ…ವೇಸ್ಟ್ ಕಿಯಾ ಅಂತವ್ರೇ….
ಕಲ್ಲು ತಿಂದು ಹಲ್ಲು ಬಿದ್ದು….ನಮ್ಮ ಮನ್ಯಲ್ ಎಲ್ಲ ನಂಗೆ…ಕ್ಯಾಕರ್ಸಿ ಉಗಿತವ್ರೇ
ನಿಮ್ದೂಕೇ…ವೇಸ್ಟ್ ಕಿಯಾ ಅಂತವ್ರೇ….

ಅಗಿಯೋದ್ ಗಿಗಿಯೋದ್ ನಕ್ಕೋಜಿ
ಸುಮ್ಕೇ ಗುಳುಮ್ ಕರೋಜಿ
ನಮ್ದುಕೇ ರಿಕ್ವೆಸ್ಟ್ ಕರ್ತಾ ಹೈ…

ಪತ್ಥರ್ ಗೆ ಆಗ್ ಬಿಟ್ಟೈತೆ ಪತ್ರೊಡೆ… ಪತ್ಥತ್ ಗೆ ಆಗ್ ಬಿಟ್ಟೈತೆ
ಪತ್ಥರ್ ಗೆ ಆಗ್ ಬಿಟ್ಟೈತೆ ಪತ್ರೊಡೆ… ಪತ್ಥತ್ ಗೆ ಆಗ್ ಬಿಟ್ಟೈತೆ

ಆಸೆ ಪಟ್ಟು ತಿಂದು ಬಿಟ್ಟು… ತಿಂದ ಮೇಲೆ ಹೊಟ್ಟೆ ಕೆಟ್ಟು… ಡಾಕ್ಟರ್ ಹತ್ರ ಕರ್ಕೊಂಡೋಗೋರ್ಯಾರ್
ನಿನ್ನನ್ನ…ಡಾಕ್ಟರ್ ಹತ್ರ ಕರ್ಕೊಂಡೋಗೋರ್ಯಾರ್
ಆಸೆ ಪಟ್ಟು ತಿಂದು ಬಿಟ್ಟು… ತಿಂದ ಮೇಲೆ ಹೊಟ್ಟೆ ಕೆಟ್ಟು… ಡಾಕ್ಟರ್ ಹತ್ರ ಕರ್ಕೊಂಡೋಗೋರ್ಯಾರ್
ನಿನ್ನನ್ನ…ಡಾಕ್ಟರ್ ಹತ್ರ ಕರ್ಕೊಂಡೋಗೋರ್ಯಾರ್

ನೀವೂ ಸ್ವಲ್ಪ ತಿಂದ್ನೋಡಿ…
ಡಾಕ್ಟ್ರು ಮನೆ ಹತ್ರಾವ್ರೆ
ಸುಮ್ನೆ ಟೇಸ್ಟು ಕರ್ಕೇ ದೇಖೋಜಿ…
ಪತ್ಥರ್ ಗೆ ಆಗ್ ಬಿಟ್ಟೈತೆ ಪತ್ರೊಡೆ… ಪತ್ಥತ್ ಗೆ ಆಗ್ ಬಿಟ್ಟೈತೆ
ವೇಸ್ಟ್ ಗೆ ಆಗ್ ಬಿಟ್ಟೈತೆ ಪತ್ರೊಡೆ…ವೇಸ್ಟ್ ಗೆ ಆಗ್ ಬಿಟ್ಟೈತೆ

ಖಾನೇ ಲಾಯಕ್… ಅನ್ಸತಾ ಇಲ್ಲ ಪತ್ರೊಡೆ
ತಿಂದ್ ಗಿಂದ್…. ಹೊಟ್ಟೇ ನೋವು ಬರ್ತದೇ
ಮಾಡಿದ್ದೆಲ್ಲಾ ಹಾಳಾಗ್ ಬಿಟ್ಟೈತೆ

ಪತ್ಥರ್ ಗೆ ಆಗ್ ಬಿಟ್ಟೈತೆ ಪತ್ರೊಡೆ… ಪತ್ಥತ್ ಗೆ ಆಗ್ ಬಿಟ್ಟೈತೆ

ಎಕ್ಸಾಮ್ ಹಾಲಲ್ಲಿ ಉತ್ರ ಬರೆಯೋಕೆ ಗೊತ್ತಿಲ್ದೆ ಹಾಲೇ ಸೆರೆಮನೆಯಾದಾಗ ಅರಮನೆ ಚಿತ್ರದ ಪತ್ರ ಬರೆಯಲಾ ಹಾಡು ಹೀಗಾದೀತೆ..:-)

ಉತ್ರ ಬರೆಯಲಾ… ಇಲ್ಲ ಪ್ರಶ್ನೆ ಬರೆಯಲಾ
ಹೇಗೆ ತುಂಬ್ಸಲಿ… ನಾ ಖಾಲಿ ಪುಟಗಳ
ಕಾಪಿ ಮಾಡಲಾ… ಇಲ್ಲಾ ನೀಕಿ ನೋಡಲಾ
ಹೇಗೆ ಕಳೆಯಲಿ…. ನಾ ಮೂರು ಗಂಟೆಗಳ

ಮುಷ್ಟೀಲಿ ಹಿಡಿದು ನನ್ನ…ಟಫ್ಫಾದ ಈ ಪೇಪರನ್ನ..
ಮಡಚುತ್ತಾ ಹಾಗೆ ಅಲ್ಲೇ… ಮುದ್ದೆ ಮಾಡುವ ಆಸೆ
ಹಾಯಾಗಿ ಸುಮ್ಮನೆ ನನ್ನ… ಡೆಸ್ಕ್ ಮೇಲೆ ಮಲಗುವ ಮುನ್ನ
ಈ ಎಕ್ಸಾಮು ಹಾಲಿಂದ…ನಾ ಓಡಿ ಹೋಗುವಾಸೆ
ಸುಮ್ನೆ ಕೂರಲಾ, ನಿದ್ರೆ ಮಾಡಲಾ, ಓಡಿ ಹೋಗಲಾ

ನಾ ಏನು ಏನು ಏನು ಮಾಡಲಿ

ಉತ್ರ ಬರೆಯಲಾ… ಇಲ್ಲ ಪ್ರಶ್ನೆ ಬರೆಯಲಾ
ಹೇಗೆ ತುಂಬ್ಸಲಿ… ನಾ ಖಾಲಿ ಪುಟಗಳ

ಕ್ವೆಸ್ಚನ್ ಪೇಪರ್ ಸೆಟ್ ಮಾಡ್ದವ್ರನ್ನ, ಈ ಪರೀಕ್ಷೆ ಇಟ್ಟವ್ರನ್ನ
ಬಾಯ್ತುಂಬಾ ಬಯ್ಯುಕೆ ನಂಗೆ… ತುಂಬಾನೆ ಆಸೆ…
ಹಾಲಲ್ಲೇ ಇದ್ದರು ಇನ್ನು… ಮಾಡ್ತಾರೆ ಇನ್ಸಪೆಕ್ಷನ್ನು…
ಕಣ್ಣುಕೂರುತ್ತಾ ಅಲ್ಲೇ ನಿದ್ರೆ ಮಾಡುವಾಸೆ

ಹೋಗಿ ಆಚೆಗೆ, ನಾನು ಪಾಚ್ಕಂತೆ, ನಿದ್ರೆ ಬರ್ತಿದೆ
ನಾ ಏನು ಏನು ಏನು ಮಾಡಲಿ

ಉತ್ರ ಬರೆಯಲಾ… ಇಲ್ಲ ಪ್ರಶ್ನೆ ಬರೆಯಲಾ
ಹೇಗೆ ತುಂಬ್ಸಲಿ… ನಾ ಖಾಲಿ ಪುಟಗಳ
ಕಾಪಿ ಮಾಡಲಾ… ಇಲ್ಲಾ ನೀಕಿ ನೋಡಲಾ
ಹೇಗೆ ಕಳೆಯಲಿ…. ನಾ ಮೂರು ಗಂಟೆಗಳ

ಉತ್ರ ಬರೆಯಲಾ..

ನನ್ನ ಫ್ರೆಂಡೊಬ್ರು ಪತ್ರೊಡೆ ಮಾಡೋಕೆ ಹೋಗಿ ಅದು ಗಟ್ಟಿಯಾಗಿ ಪತ್ಥರ್ ವಡೆ ಆಯ್ತಂತೆ…

ಆ ಪ್ರಸಂಗ ಎತ್ತಿಕೊಂಡು ಕೊಲವೆರಿ ಹಾಡಿಗೆ ಪತ್ರೊಡೆ ಮಸಾಲ ಹಾಕಿ ಮಿಕ್ಸ್ ಮಾಡಿದ್ರೆ ಹೆಂಗಿರುತ್ತೆ ನೋಡೋಣ ಅಂತ :-)

ಪತ್ರೊಡೆ… ಪತ್ಥರ್ ವಡೆ… ಆದ ವರಿ.. (ಕೊಲವೆರಿ ರಿಮಿಕ್ಸ್ :) )
—————————————————-

ವೈ ದಿಸ್ ಪತ್ಥರ್ ವಡೆ… ಪತ್ಥರ್ ವಡೆ… ಪತ್ಥರ್ ವಡೆ ರೀ
ವೈ ದಿಸ್ ಪತ್ಥರ್ ವಡೆ… ಪತ್ಥರ್ ವಡೆ… ಪತ್ಥರ್ ವಡೆ ರೀ

ಮಸಾಲ ಕರೆಕ್ಟ್….

ವೈ ದಿಸ್ ಪತ್ಥರ್ ವಡೆ… ಪತ್ಥರ್ ವಡೆ… ಪತ್ಥರ್ ವಡೆ ರೀ

ಮೆಂಟೇನ್ ಪ್ಲೀಸ್

ವೈ ದಿಸ್ ಪತ್ಥರ್ ವಡೆ… …. …. ರೀ
ಡಿಸ್ಟೆನ್ಸಲ್ಲಿ ಊರು ಊರು…
ಊರ ಎಲೆಯೇ ಬೆಸ್ಟು….

ಬೆಂಗ್ಳೂರಲ್ಲಿ ಸಿಗುತ್ತೆ ಸಿಗುತ್ತೆ
ಎಲೆಗೆ ಇಲ್ಲ ಟೇಸ್ಟು

ವೈ ದಿಸ್ ಪತ್ಥರ್ ವಡೆ… ಪತ್ಥರ್ ವಡೆ… ಪತ್ಥರ್ ವಡೆ ರೀ

ಬ್ಲ್ಯಾಕು ದಂಟು ಲೀವ್ಸು ಲೀವ್ಸು
ಪತ್ರೊಡೆಗೆ ಟೇಸ್ಟು
ಗ್ರೀನು ದಂಟು ಇದ್ರೆ ಇದ್ರೆ
ಟೇಸ್ಟು ಬರೋದು ಡೌಟು

ವೈ ದಿಸ್ ಪತ್ಥರ್ ವಡೆ… ಪತ್ಥರ್ ವಡೆ… ಪತ್ಥರ್ ವಡೆ ರೀ

ಕೈಯಲ್ ಲೀವ್ಸು
ಓನ್ಲಿ ಇಂಗ್ಲಿಶ್…

ಹ್ಯಾಂಡಲ್ ಲೀವ್ಸು
ಪಾತ್ರೆಲ್ ಮಸಾಲ
ಗ್ಯಾಸ್ ಮೇಲೆ ಕುಕ್ಕರು

ಬೆಂಕಿ ಆನ್
ಪೋಸ್ಟು ಕಮ್ಮು
ನಂಗೆ ಬಂದಿತು ಲೆಟರು..

ಫ್ರೆಂಡು ಫ್ರೆಂಡು
ಓ ಮೈ ಫ್ರೆಂಡು
ಬರ್ದಿದ್ಲು ಲೆಟರ್ ನವ್ವು

ಅಯ್ಯೋ ಅಯ್ಯೋ
ಓ ಮೈ ಗಾಡು
ಐ ಸ್ಟಾರ್ಟೆಡ್ ಟು ರೀಡು…

ಓ ಗಾಡ್ ಅಯಾಮ್ ಗೋಯಿಂಗ್ ನವ್ವು
ಪತ್ರೊಡೆ ಗಟ್ಟಿ ಆಯ್ತ್ ನವ್ವು
ದಿಸ್ ಪತ್ಥರ್ ವಡೆ ಫಾರ್ ಸ್ಟ್ರೀಟ್ ಡಾಗ್ಸು…
ದೇ ಡೋಂಟ್ ಹ್ಯಾವ್ ಚಾಯ್ಸು…:-)

ವೈ ದಿಸ್ ಪತ್ಥರ್ ವಡೆ… ಪತ್ಥರ್ ವಡೆ… ಪತ್ಥರ್ ವಡೆ ರೀ

ವೈ ದಿಸ್ ಪತ್ಥರ್ ವಡೆ… ಪತ್ಥರ್ ವಡೆ… ಪತ್ಥರ್ ವಡೆ ರೀ

ದೇವತಾ ಮನುಷ್ಯ ಚಿತ್ರದ ಹೃದಯದಲಿ ಇದೇನಿದು ಹಾಡಿನ ಸ್ಟೈಲಲ್ಲಿ ಮಾಜಿಗಳಾಗಿರೋ ಕ್ರೇಜಿ ಮಂತ್ರಿಗಳ ಬಾಯಲ್ಲಿ ಹಿಂಗ್ ಬಂದ್ರೆ ಹೆಂಗೇ ಅಂತ :-)

ಫಾರ್ ಅ ಚೇಂಜ್ ಈ ಬಾರಿ ನನ್ನ ಅಣಕದಲ್ಲಿ ಇನ್ನೊಬ್ರು ಮಾಜಿಗೆ ರೋಲ್ ಸಿಕ್ಲಿಲ್ಲ :-)

ಓವರ್ ಟು…ಮಾಜೀಸ್…

ಸದನದಲಿ ಇದೇನಿದು…. ಫಿಲಮೊಂದು ನೋಡಿದೆ
ಸದನದಲಿ ಇದೇನಿದು…. ಫಿಲಮೊಂದು ನೋಡಿದೆ
ಕದ್ದು ನೋಡಿದ್ದು ಕ್ಯಾಮರವ ಸೇರಿ…. ನಮ್ಮ ಮಂತ್ರಿ ಕುರ್ಚಿ ಉರುಳಿ
ಜೊತೆಯಲ್ಲಿ ಶೋಕ ಗೀತೆ… ಹಾಡುವಾಸೆ… ಈಗಾ….

ಸದನದಲಿ ಇದೇನಿದು…. ಫಿಲಮೊಂದು ನೋಡಿದೆ
ಸದನದಲಿ ಇದೇನಿದು…. ಫಿಲಮೊಂದು ನೋಡಿದೆ
ಕದ್ದು ನೋಡಿದ್ದು ಕ್ಯಾಮರವ ಸೇರಿ…. ನಮ್ಮ ಮಂತ್ರಿ ಕುರ್ಚಿ ಉರುಳಿ
ಜೊತೆಯಲ್ಲಿ ಶೋಕ ಗೀತೆ… ಹಾಡುವಾಸೆ… ಈಗಾ….

ಸದನದಲಿ ಇದೇನಿದು…. ಫಿಲಮೊಂದು ನೋಡಿದೆ

ಗುರ್ರೆನ್ನುತಾ… ಬಯ್ಯುವ… ಟಿ.ವಿ.ಯ… ಧಾಳಿಗೆ
ಥೂಎನ್ನುವ… ಮಂದಿಯ… ಮಾತಿನ… ರೇಜಿಗೆ
ಈ ಮನಸು… ಬೆದರುತಿದೆ… ಕೆಟ್ಟಕನಸು…. ಕೆಣಕುತಿದೆ
ಮಾಡುವುದೇನೀಗಾ………

ಸದನದಲಿ ಇದೇನಿದು…. ಫಿಲಮೊಂದು ನೋಡಿದೆ

ಭುಸ್ಸೆನ್ನುವ… ತಾವರೆ… ಪಾರ್ಟಿಯ… ಲೀಡ್ರಿಗೆ
ಕ್ಯಾಕರಸುತಾ… ಕ್ಷೇತ್ರದಲಿ… ಉಗಿಯುವಾ… ವೋಟರಿಗೆ
ಮಂಡೆ ಬಿಸಿಯು… ಏರುತಿದೆ… ಈ ಹೇಸಿಗೆ… ನಾರುತಿದೆ
ತಂದೆಯೆ ಸದಾನಂದಾ………

ಗೋವಿಂದಾಯ ನಮಹದ ಹಾಡು “ಪ್ಯಾರಗೆ ಆಗ್-ಬಿಟ್ಟೈತೆ” ಎಲ್ಲರ ಬಾಯಲ್ಲೂ ಸುದ್ದಿಯಾಗಿದೆ…

ಅದೇ ರೀತಿ ಇಂಡಿಯಾ ಟೀಮಿನ ಸ್ಥಿತಿಯೂ..ಗೋವಿಂದಾಯ ನಮಹ ಆಗಿರೋದ್ರಿಂದ ಅವ್ರ ಬಾಯಲ್ಲಿ ಈ ಹಾಡು ಬಂದ್ರೆ ಹ್ಯಾಂಗಿರುತ್ತೆ…. ನೀವೇ ನೋಡಿ…ಒಂದು ಅಣಕದ ಪ್ರಯತ್ನ :-)

ಓವರ್ ಟು ಧೋನಿ ಬಾಯ್ಸ್…. :-)

ಹಾಡು ಕೇಳ್ತಾ ಓದದಿದ್ರೆ ಅಣಕದ ಮಜ ಸಿಗೊಲ್ಲಾ..ಅದಕ್ಕೆ ಅದರ ವಿಡಿಯೋ ಇಲ್ಲಿದೆ… ಓದಿ ಖುಷಿಯಾದ್ರೆ ಹೇಳಿ…

ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ

ಮ್ಯಾಚ್-ಗೆ ಸೋತ್-ಬಿಟ್ಟೈತೆ… ಓಯ್ ನಮ್ದುಕ್ಕೆ… ಮ್ಯಾಚ್-ಗೆ ಸೋತ್-ಬಿಟ್ಟೈತೆ

ಮೂರು ದಿನ ಆಡ್ತಾ ಇಲ್ಲ… ನಮ್ದುಕ್ಕೆ…
ಒಂದ್ ಮ್ಯಾಚ್ ಗೆಲ್ತಾ ಇಲ್ಲ… ನಮ್ದುಕ್ಕೆ…
ಮರ್ಯಾದೆನೇ ಹಾಳಾಗ್-ಹೋಗೈತೆ…

ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ
ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ

ವರ್ಡ್-ದು ಕಪ್ಪು ನಮ್ದು ಗೆದ್ರೂ… ನಮ್ದು ಫ್ಯಾನ್ಸು ಯಾಕೋ ಇಂದು…ಕ್ಯಾಕರ್ಸಿ… ಉಗಿತವ್ರೆ…
ನಿಮ್ದುಕ್ಕೆ ವೇಷ್ಟ್ ಫೇಲೋ ಅಂತಾ ಅವ್ರೆ…
ವರ್ಡ್-ದು ಕಪ್ಪು ನಮ್ದು ಗೆದ್ರೂ… ನಮ್ದು ಫ್ಯಾನ್ಸು ಯಾಕೋ ಇಂದು…ಕ್ಯಾಕರ್ಸಿ… ಉಗಿತವ್ರೆ…
ನಿಮ್ದುಕ್ಕೆ ವೇಷ್ಟ್ ಫೇಲೋ ಅಂತಾ ಅವ್ರೆ…

ಉಗಿಯೋ ಗಿಗ್ಯೋ ನಕ್ಕೊಜಿ…
ಸುಮ್ಕೇ ಮ್ಯಾಚು ದೇಖೋಜಿ….
ನಮ್ದುಕ್ಕೆ ನಿಮ್… ವಿಷ್ ಮಾಂಗ್ತಾ ಹೈ….

ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ
ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ

ಜಾದೂ ಗೀದೂ ಆಗಿಬಿಟ್ಟಿ… ಏಕ್ ಮ್ಯಾಚ್ ಗೆದ್ದುಬಿಟ್ರೆ… ಸಚಿನ್ ನೂರು ಹೊಡ್ದುಬಿಡಪ್ಪಾ….
ನಿನ್ಮುಂದೆ… ಜನಾ ಎಲ್ಲಾ ಮರ್ತುಬಿಡ್ತಾರೆ
ಜಾದೂ ಗೀದೂ ಆಗಿಬಿಟ್ಟಿ… ಏಕ್ ಮ್ಯಾಚ್ ಗೆದ್ದುಬಿಟ್ರೆ… ಸಚಿನ್ ನೂರು ಹೊಡ್ದುಬಿಡಪ್ಪಾ….
ನಿನ್ಮುಂದೆ… ಜನಾ ಎಲ್ಲಾ ಮರ್ತುಬಿಡ್ತಾರೆ

ಅಲ್ಲಿಗಂಟ ನೀವ್ ಕಾಯ್ರಿ…
ಮೀಡ್ಯಾ ಥೂ ಥೂ ಅಂತೈತಿ…
ಒಂದು ಮ್ಯಾಚು ಗೆದ್ಕಂಡ್-ಬರೋದೇ…

ನಕ್ಕೋ… ನಕ್ಕೋ……