Archive for ಏಪ್ರಿಲ್ 19, 2008

ಸುಮದ ಸ್ವಗತ

Posted: ಏಪ್ರಿಲ್ 19, 2008 in ಮನಸಿನ ಹಾಡು
ಟ್ಯಾಗ್ ಗಳು:

ಆಸೆಯಿಲ್ಲ ನನಗೆ ಏರಬೇಕೆಂದು

          ದೇವರ ಶಿರದ ಸುಮವಾಗಲು

 

ಇಷ್ಟವಿಲ್ಲ ನನಗೆ ದೇವಕನ್ಯೆಯರ

          ಕೊರಳೊಳು ಪುಷ್ಪ ಮಾಲೆಯಾಗಲು

 

ಬೇಕಿಲ್ಲ ನನಗೆ ನರಳುವ ಭಾಗ್ಯ

          ನಲ್ಲ ನಲ್ಲೆಯರ ನಡುವೆ ನಲುಗಲು

 

ಸಾರ್ಥಕವೀ ಜನ್ಮ ಸಿಕ್ಕರೆ ಅವಕಾಶ

          ಯೋಧನ ಸಮಾಧಿಯ ಮೇಲೆ ನಗುವಾಗಲು