ಬಾ… ಮನಸೇ ಬಾ….ಇಷ್ಟು ಲೇಟಾಗಿ ಬಾರದಿರು…..

Posted: ಮೇ 10, 2008 in ಪುಸ್ತಕಗಳು
ಟ್ಯಾಗ್ ಗಳು:, , ,

ಓ ಮನಸೇ ನೀ ಯಾಕೆ ಮಾತಾಡ್ತಿಲ್ಲ….??

ನೀನು ಮಾತು ನಿಲ್ಲಿಸಿ ಎಷ್ಟು ಕಾಲ ಆಯ್ತು? ತಿಂಗಳುಗಳು ಉರುಳಿ ಹೋಗ್ತಾ ಇವೆ. ನಿನ್ನ ಸದ್ದೂ ಇಲ್ಲ ಸುದ್ದಿಯೂ ಇಲ್ಲ. ಯಾಕೆ ಮೂಕವಾದೆ ಓ ಮನಸೇ.ನೀ ಹೀಗೇಕೆ ಮರೆಯಾದೆ? ಹೀಗೇಕೆ ಮುನಿಸಿಕೊಂಡು ಕುಂತು ಬಿಟ್ಟಿದ್ದೀಯ? ಮೊದಲೆಲ್ಲ ನೀನು ಎರಡು ವಾರಕ್ಕೊಮ್ಮೆ ಮಾತಾಡ್ತಾ ಇದ್ದೆ. ಆಮೇಲಾಮೇಲೆ ತಿಂಗಳಿಗೊಂದ್ಸಲ ಮಾತಾಡ್ತಿದ್ದೆ. ಅದ್ರೂ ನಮ್ಮ ಮನಸು ಅಲ್ವಾ ಪರ್ವಾಗಿಲ್ಲ ಬಿಡಿ ಅಂತ ಸುಮ್ಮನಿದ್ರೆ…ನೀ ಹಿಂಗೆ ಮಾಡಬಹುದಾ? ನಿನ್ನ ಪಿಸುಮಾತುಗಳಿಗೆ ಕಿವಿಯಾಗಲು ನಾವೇನೋ ತುದಿಗಾಲಲ್ಲಿ ನಿಂತಿದ್ದೀವಿ. ಅದ್ರೆ ನಿಂದೇ ತಕರಾರು. ಹಿಂದೊಮ್ಮೆ ನೀ ಹಿಂಗೇ ಮೌನವಾದಾಗ ಹತ್ರತ್ರ ವರ್ಷದವರೆಗೆ ಮಾತೇ ಆಡ್ಲಿಲ್ಲ. ಆಗ ಎಷ್ಟು ಬೇಜಾರು ಆಯ್ತು ಗೊತ್ತಾ? ಎಂದು ನಿನ್ನನ್ನು ಕಂಡೆನೋ ಯಾವಾಗ ನಿನ್ನ ಮಾತು ಕೇಳೋದು ಅಂತ ಕಾದು ಕೂತ್ಕೊಂಡ್ರೆ ನಿನ್ನ ಪತ್ತೇನೆ ಇಲ್ಲ. ಎತ್ಲಾಗ್ ಹೋದೆ ನೀ?

 

ನಿನ್ನ ಕಾಣಬೇಕೆಂದು ನಾ ಸುತ್ತಿದ ಪುಸ್ತಕದ ಅಂಗಡಿಗಳ ಲೆಕ್ಕ ಇಟ್ಟಿದ್ರೆ… ಮನಸೆ ಬಂದಿಲ್ಲ ಕಣ್ರಿ ಅಂತ ಅಂಗಡಿಯಾತ ಇವನದ್ಯಾವ ರಗಳೆ ಇದು ಅನ್ನೋ ತರ ಮುಖ ಮಾಡಿ ಹೇಳಿದಾಗ ಬೇಸರವಾದೂ ನಗುನಗುತ್ತ ನುಂಗಿದ ಮಾತುಗಳ ಲೆಕ್ಕ ಇಟ್ಟಿದ್ರೆ… ಅದೇ ಗಿನ್ನಿಸ್ ರೆಕಾರ್ಡ್ ಆಗ್ತಿತ್ತೇನೋ. ಪಾಪ ಅಂಗಡಿಯಾತ ತಾನೆ ಏನು ಮಾಡ್ತಾನೆ. ನಿನ್ನನ್ನು ಹುಡುಕಿಕೊಂಡು ಬರೋವ್ರೇನು ಒಬ್ರಾ ಇಬ್ರಾ? ಆದ್ರೂ ನೀ ಮಾತಾಡ್ತಿಲ್ಲ. ನಿಂಗೆ ಸತಾಯಿಸೋದು ಅಂದ್ರೆ ಇಷ್ಟಾನ?

 ಹೂಂ…ನಿನ್ನ ಬಗ್ಗೇನೆ ಇಷ್ಟೊತ್ತಿಂದಾ ಹೇಳ್ತಾ ಇರೋದು…ಮನಸು ಮನಸುಗಳ ಪಿಸುಮಾತು ಕೇಳಿಸ್ತಿಲ್ಲ ಅನ್ನೋ ಬೇಸರದಲ್ಲಿ ನನ್ನ ಮನಸಿನ ಮಾತು ಹೇಳಿದ್ದೀನಿ. ಇಷ್ಟರ ಮೇಲೂ ನೀ ಮಾತೇ ಆಡೋಲ್ಲ ಅನ್ನೋದಾದ್ರೆ ನಿನ್ನ ಚಾಳಿ ಟೂ… 🙂

 

ನಿನ್ನ ಮನಸಿನ್ಯಾಗಿನ ಮಾತು..ಹೊಟ್ಟೆಯೊಳಗಿನ ಗುಟ್ಟು, ಸಮಾಧಾನ, ಕಥೆ ಇದನ್ನೆಲ್ಲ ಎಷ್ಟು ಮಿಸ್ಸ್ ಮಾಡ್ಕೋತಿದಿನಿ ಗೊತ್ತಾ? ಸೈನ್ಸ್ ಪೇಜ್, ಆರ್ಟ್ ಪೇಜ್ , ಹೀಗೊಂದು ಕಥೆ…ಜೊತೆಗೆ ಅಲ್ಲಿಷ್ಟು ಇಲ್ಲಿಷ್ಟು ಅಂತ ಸಿಗೋ ನಮಗೆ ತಿಳಿಯದ ವಿಷ್ಯಗಳು..ಜೋಕ್ಸು, ಪದ್ಯ, ಎಲ್ಲದಕ್ಕೂ ಕಳಶವಿಟ್ಟಂತ ಮನಸಿಗೆ, ಪ್ರೀತಿಗೆ ಸಂಬಂದಿಸಿದ ಮುಖ್ಯ ಲೇಖನ… ಎಲ್ಲಾನು ನಾವು ಮಿಸ್ ಮಾಡ್ಕೋತಾ ಇದ್ರೆ ನೀನು ಸೈಡ್‌ವಿಂಗಲ್ಲಿ ನಿಂತ್ಕೊಂಡು ನಗ್ತಿದೀಯಾ?

 

ಒಂದ್ಸಲ ಹೀಗೆ ಮನಸಿನಲ್ಲಿ 2 ಸಾಲುಗಳು ಹೊಳೀತು. ಅದನ್ನು ನನ್ನ ಪತ್ರಕರ್ತ ಮಿತ್ರನ ಜೊತೆ ಹೀಗೆ ಹಂಚಿಕೊಂಡಿದ್ದೆ. ಅದು ಹಾಯ್ ಬೆಂಗಳೂರು ಮತ್ತು ಓ ಮನಸೆ ಪತ್ರಿಕೆಯ ಬಗ್ಗೆ…

 

ಹಾಯ್ ಬೆಂಗಳೂರು ಪ್ರತೀ ವಾರದ ಅಚ್ಚರಿ…!!

ಓ ಮನಸೇ ಎರಡು ತಿಂಗಳಿಗೊಂದು ಬಂದ್ರೆ ಅದೇ ಹೆಚ್ಚೂರೀ…!!

 

ಬೇಜಾರಾಯ್ತಾ? ಹೀಗೆ ಚುಚ್ಚಿದ್ರಾದ್ರೂ ಬೇಗ ಬರ್ತೀಯೇನೋ ಅಂತ ದೂರದ ಆಸೆ!

 

ನಿನ್ನ ಮೌನ ಮುರಿದು ಈಗಲಾದ್ರೂ ಬಾ ಮನಸೆ… ನಿನಗೆ ಪಿಸುಮಾತು ಕಲಿಸಿದನು ಹೇಳುವಂತೆ ತಡೆದ ಮಳಿ ಜಡಿದು ಬರುವ ಹಾಗೆ ಬಂದು ನಮ್ಮ ಮಾನಸಿಗೆ ಮುಂಗಾರಿನ ಮೊದಲೇ ತಂಪು ಹುಟ್ಟಿಸುತ್ತೀಯ ಅಂತ ನಂಬಿದ್ದೇನೆ. ಬರ್ತೀಯಾ ಅಲ್ವಾ?

Advertisements
ಟಿಪ್ಪಣಿಗಳು
 1. O Manase ಹೇಳುತ್ತಾರೆ:

  O Manase release alerts and news visit
  http://o-manase-kannada.blogspot.com/
  Let’s Join Hands and demand for our favorite magazine

 2. nataraj ಹೇಳುತ್ತಾರೆ:

  sakkathagittu guru aa dinagalu aa manasina dinagalu

 3. ಸಂದೀಪ್ ಕಾಮತ್ ಹೇಳುತ್ತಾರೆ:

  ವಿಜಯ್ ,

  ರವಿ ಮನಸ್ಸು ಮಾಡಿದ್ರೆ ಯಾವತ್ತೋ ’ಓ ಮನಸೆ ’ ಪ್ರಾರಂಭಿಸಬಹುದಿತ್ತು (infact ನಿಲ್ಲಿಸೋ ಅಗತ್ಯಾನೇ ಇರಲಿಲ್ಲ !).ಆದ್ರೆ ಎಲ್ಲವನ್ನೂ ತಾನೇ ಬರೆಯಬೇಕೆಂಬ ಹಪಹಪಿಯಿಂದಾನೋ ,ಅಥವ ’ಹಾಯ್ ಗೆ ’ಪೈಪೋಟಿ ನೀಡುತ್ತೆ ಅಂತ ಭಯದಿಂದಲೋ ರವಿ ಈ ರೀತಿ ಮಾಡ್ತಾ ಇದ್ದಾರೆ.

  ಅತ್ಯುತ್ತಮ ತಂಡ ’ಓ ಮನಸೇ ’ಗಿದೆ .ಆದರೂ ಹೀಗೆ!!

  ಇರಲಿ ಬಿಡಿ ನನಗ್ಯಾಕೆ ಬೇರೆಯವರ ಉಸಾಬರಿ .ಕೈಗೆ ಸಿಕ್ಕಿದ್ದು ಓದೋನು ನಾನು.

  ಈ ರೀತಿ ಬರೆದದದ್ದು ನೋಡಿದ್ರೆ ರವಿ ಅಭಿಮಾನಿಗಳು ಓಡಿಸ್ಕೊಂಡು ಬರ್ತಾರೆ ನನ್ನನ್ನು.ನಾನು ಎಲ್ಲಿದ್ದೀನಿ ಅಂತ ಯಾರಿಗೂ ಹೇಳ್ಬೇಡಿ ಪ್ಲೀಸ್ 🙂

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s