ಮುಸ್ಸಂಜೆ ಹೊತ್ತಲ್ಲಿ… ಗಝಲುಗಳ ಮತ್ತಲ್ಲಿ…

Posted: ಜುಲೈ 10, 2008 in ಆಪ್ತಸ್ವರ
ಟ್ಯಾಗ್ ಗಳು:, , , ,

ಹಾಡುಗಳೆಂದ್ರೆ ಯಾರಿಗೆ ಇಷ್ಟ ಇರೊಲ್ಲ ಹೇಳಿ? ಭಕ್ತಿಗೀತೆ, ಚಿತ್ರಗೀತೆ, ಜಾನಪದ, ತತ್ವಪದ, ಭಾವಗೀತೆ, ರಾಪ್, ರಾಕ್, ಪಾಪ್… ಹೀಗೆ ಒಬ್ಬೊಬ್ಬರ ಅಭಿರುಚಿಗೆ ತಕ್ಕಂತೆ ಒಂದೊಂದು ಇಷ್ಟ. ಈಗಂತೂ ಎಫ್.ಎಂ.ಗಳ ಭರಾಟೆ ಶುರುವಾದ ಮೇಲೆ ದಿನದ 24 ಗಂಟೆಯೂ ಕಿವಿಗೊಂದು ಇಯರ್‌ಫೋನ್ ಸಿಕ್ಕಿಸಿಕೊಂಡು ಸದಾ ಕಿವಿ ತುಂಬಿಸಿಕೊಳ್ಳುವವರೇ ಎಲ್ಲೆಲ್ಲೂ ಕಾಣಸಿಗುತ್ತಾರೆ. ಅದಿರಲಿ, ನಿಮಗೆ ಯಾವ ಹಾಡು ಇಷ್ಟ ಹೇಳಿ? ನಾನಂತೂ ರಾಪ್, ರಾಕ್, ಪಾಪ್‌ಗಳ ಅಬ್ಬರವನ್ನು ಬಿಟ್ಟು ಮಿಕ್ಕೆಲ್ಲದರ ಇಂಪಿಗೆ ಕಿವಿಯಾಗುತ್ತೇನೆ. ಆದರೆ ಯಾವತ್ತಾದರೂ ಮುಸ್ಸಂಜೆಯ ಹೊತ್ತಲ್ಲಿ ಗಝಲ್‌ಗಳ ಮತ್ತಲ್ಲಿ ಮುಳುಗೆದ್ದಿದ್ದೀರಾ..? ಸೂರ್ಯ ಮುಳುಗಿ ಹಕ್ಕಿಗಳು ಗೂಡು ಸೇರುವ ಹೊತ್ತಿನಲಿ, ದಿವ್ಯ ಏಕಾಂತದಲ್ಲೊಮ್ಮೆ ಗಝಲ್‌ಗಳನ್ನು ಕೇಳಿ ನೋಡಿ. ಎಂಥಾ ಅರಸಿಕನನ್ನೂ ಕವಿಯಾಗಿಸಬಲ್ಲ, ದಿವ್ಯ ಸಾನ್ನಿಧ್ಯವೊಂದರಲ್ಲಿ ಲೀನವಾದಂತಹ ಆ ಮಧುರಾನುಭೂತಿ ಶಬ್ದಗಳ ನಿಲುಕಿಗೆ ಸಿಗುವಂತದ್ದಲ್ಲ. ಅದನ್ನು ಅನುಭವಿಸಿಯೇ ತಿಳಿಯಬೇಕು.

 

ನೂರಾರು ಗಝಲ್ ಗಾಯಕ-ಗಾಯಕಿಯರಿದ್ದಾರದರೂ ಗುಲಾಮ್ ಅಲಿ, ಅಬೀದಾ ಪರ್ವೀನ್, ಜಗಜೀತ್ ಸಿಂಗ್ ಗಝಲ್‌ಗಳೆಂದರೆ ನನಗಂತೂ ಪಂಚಪ್ರಾಣ. ಒಮ್ಮೆ ರವಿ ಬೆಳಗೆರೆ ಹಾಯ್ನಲ್ಲಿ ಗಝಲ್‌ಗಳ ಬಗ್ಗೆ ಬರೆದ ಲೇಖನ ಓದಿ ಹತ್ತಿಸಿಕೊಂಡ ಗುಲಾಮ್ ಅಲಿ ಮತ್ತು ಅಬೀದಾ ಪರ್ವೀನ್‌ಳ ಗಝಲ್ ಹುಚ್ಚು  ಇನ್ನೂ ಬಿಟ್ಟಿಲ್ಲ. ಗುಲಾಮ್ ಅಲಿಯ ಚುಪ್ಕೆ ಚುಪ್ಕೆ ರಾತ್ ದಿನ್.., ಝಕ್ಮ್-ಎ-ತನಹಾಯಿ ಮೆ.., ಹಮ್ಕೊ ಕಿಸ್ಕೆ ಘಮ್ ನೆ ಮಾರಾ.. ಕೇಳುತ್ತಾ ಕಳೆದು ಹೋದರೆ.. ಅಬೀದಾಳ ಮೈಂ ನಾ ರಹಿ ಮಸ್ತಾನ.., ಪ್ರೀತಮ್ ಮತ್ ಪರ್ದೇಸ್ ಸಿಧಾರೋ.., ತೂನೆ ದೀವಾನ ಬನಾಯ..ಮೈ ದೀವಾನಿ ಬನೀ.. ನಿಮ್ಮನ್ನು ಆವರಿಸಿಕೊಂಡು ಕಾಡುತ್ತದೆ. ಜಗಜೀತ್ ಸಿಂಗ್ ಗಝಲ್ ಬಗ್ಗೆ ಬೇರೆ ಹೇಳಲೇಬೇಕಾಗಿಲ್ಲ.

ಮೊದ ಮೊದಲು ಅರ್ಥ ಮಾಡಿಕೊಳ್ಳಲು ಕಷ್ಟ ಅನ್ನಿಸಿದರೂ ಕೂಡಾ ಅದರ ಭಾವ ಅರಿವಾದಂತೆಲ್ಲಾ ಹಾಡಿನ ಅರ್ಥವೂ ಆಗುತ್ತಾ ಹೋಗುತ್ತದೆ. ಅರ್ಥವಾದಂತೆಲ್ಲಾ ಆ ದನಿಯ ಆರ್ದ್ರತೆ, ಹಾಡಿನ ಮಾಧುರ್ಯ, ಭಾವುಕತೆ ಇವೆಲ್ಲಾ ಮೇಳೈಸಿದಾಗ ಸಿಗುವ ಆನಂದ ಮುಸ್ಸಂಜೆಯ ರಂಗಿಗೆ ಇನ್ನಷ್ಟು ಮೆರುಗು ನೀಡುತ್ತದೆ. ನಿಮ್ಮ ಸಾಯಂಕಾಲದ ಸೌಂದರ್ಯವನ್ನು ನೂರ್ಮಡಿಗೊಳಿಸುವ ಗಝಲ್‌ಗಳಿಗೆ ಒಮ್ಮೆ ಕಿವಿಯಾಗಿ ನೋಡಿ…

 

ಟಿಪ್ಪಣಿಗಳು
 1. shankar ಹೇಳುತ್ತಾರೆ:

  ಗಝಲುಗಳ ಲೋಕವೇ ಅದ್ಭುತ ಬಿಡಿ!! ಕನ್ನಡದ ಭಾವಗೀತೆಗಳು ಹಾಗು ಈ ಹಾಳು ಗಝಲುಗಳು ನನ್ನನ್ನು ಅಡಿಗಡಿಗೆ ಎಡಬಿಡದೆ ಕಾಡಿವೆ!! ಹಲವನ್ನು ಶತಾಯಗತಾಯ ಅರ್ಥ ಮಾಡಿಕೊಂಡೆ, ಆದರೆ ಈ ಗಾಲಿಬ್‌ನಂತೂ ಕಬ್ಬಿಣದ ಕಡಲೆ ಅದಕ್ಕೆ ಅವನ ಹುಚ್ಚು ಹಿಡಿದರೆ ಬಿಡುವುದೇ ಇಲ್ಲ.. ಎಷ್ಟೇ ಕಷ್ಟಪಟ್ಟರೂ ದಕ್ಕುವುದು ಚೂರೆ ಚೂರೆ, ಆದರೂ ನಾನು ಅವನ್ನು ಬಿಡುವದಂತೂ ಖಂಡಿತಾ ಇಲ್ಲಾ!!
  ಅಂದ ಹಾಗೆ ಸಾಧ್ಯವಾದರೆ ಈ ಗಝಲುಗಳನ್ನು ಕೇಳಿ ನೋಡಿ… ನನ್ನ ಫೇವರೆಟ್‌ಗಳ ಪಟ್ಟಿಯಿಂದ!!
  ಮುನ್ನಿ ಬೇಗಮ್‌ ಹಾಡಿದ “ಮೆರಿ ದಾಸ್ತಾನೆ ಹಸರತ್…” & ತುಮ್ಹಾರೆ ಶೆಹರ್ ಕಾ ಮೌಸಮ್..”
  ಫರೀದಾ ಖಾನ್ನುಮ್ ಹಾಡಿದ “ಆಜ್‌ ಜಾನೆ ಕಿ ಝಿದ್‌ ನಾ ಕರೊ..”
  ಬುಪಿಂದರ್ ಹಾಗು ಮಿತಾಲಿ ಹಾಡಿದ “ಶಮ್ಮಾ ಜಲಾಯೆ ರಖನಾ..”
  ಚಂದನ್‌ದಾಸ್‌ ಹಾಡಿದ “ತೆರಿ ಸುಸುವಾಯಿಯೋಂ ಸೆ ಡರತಾ ಹೂ..”
  (ಇನ್ನೂ ಹಲವಾರಿವೆ, ಹಾಡುಗಳು ಬೇಕಿದ್ದರೆ ನನಗೆ ಬರೆಯಿರಿ!!)

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s